`ಆಂಕೋ ಮೇ ತೇರಿ ಅಜಬ್ ಸೇ ಅಜಬ್ ಸೇ ಅದಾ ಹೈ..’ ದೀಪಿಕಾರನ್ನು ಓಂ ಶಾಂತಿ ಓಂ ಚಿತ್ರದ ಪಾತ್ರದಲ್ಲಿ ನೋಡಲು ಇಷ್ಟವಾಗುತ್ತದೆ. ಗುಳಿಕೆನ್ನೆಯ ಬೆಡಗಿ ಬಾಲಿವುಡ್ ನಲ್ಲಿ ಯಾವತ್ತು ಅಳತೆ ಮೀರಿ ನಟಿಸಿಲ್ಲ. ಬಹುಶಃ ಆ ಕಾರಣಕ್ಕೆ ಎಲ್ಲಾ ವರ್ಗದ ಪ್ರೇಕ್ಷಕರ ಮನಃದಲ್ಲಿ ಸ್ಥಾಪಿತರಾಗಿದ್ದಾರೆ. ಹೀಗಾಗಿಯೇ ಅವರನ್ನು ಬಾಲಿವುಡ್ ನಂಬರ್ ಒನ್ ಸ್ಥಾನದಲ್ಲಿ ಪ್ರತಿಷ್ಟಾಪಿಸಿಬಿಡುತ್ತದೆ. ಆಕಾಶಕ್ಕೆ ಏಣಿ ಹಾಕಿ ಎಂದು ಹಿರಿಯರು ಹೇಳಿರುವುದರಿಂದ ದೀಪಿಕಾ ಕನಸುಗಳು ಹಾಲಿವುಡ್ ಬೆನ್ನತ್ತಿದ್ದವು. ಸ್ಯಾಂಡಲ್ ವುಡ್ ಗೆ ಕಾಲಿಟ್ಟು, ಬಾಲಿವುಡ್ ನಲ್ಲಿ ಮಿಂಚಿದ ನಮ್ಮನೆ ಹುಡುಗಿ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಾಳೆ ಎನ್ನುವುದು ಸಣ್ಣ ಸಂಗತಿಯಲ್ಲ. ಅದರಲ್ಲೂ ತ್ರಿಬಲ್ ಎಕ್ಸ್ ಖ್ಯಾತಿಯ ವಿನ್ ಡಿಸೆಲ್ ಜೊತೆ ನಟಿಸುವ ಅವಕಾಶ ಸಿಕ್ಕಿತೆಂದರೇ ಅದಕ್ಕಿಂತ ಅದೃಷ್ಟ ಬೇರೇನಿದೆ. ಆದರೆ ಆ ಚಿತ್ರದಲ್ಲಿ ದೀಪಿಕಾ ನಿಭಾಯಿಸಿದ್ದು ಹಾಟ್ ಪಾತ್ರಗಳನ್ನು. ವಿನ್ ಡಿಸೇಲ್ ಜೊತೆ ಅತಿಯಾದ ರೊಮ್ಯಾನ್ಸ್ ನಲ್ಲಿ ಪಾಲ್ಗೊಂಡಿರುವ ದೀಪಿಕಾಗೆ ಹಾಲಿವುಡ್ ಅವಶ್ಯಕವಾಗಿರಲಿಲ್ಲ ಎನ್ನುವಷ್ಟರ ಮಟ್ಟಿಗೆ ಬೇಸರ ಮೂಡಿಸುತ್ತಾರೆ. ಇಲ್ಲಿ ಮುಚ್ಚಿಕೊಂಡವರು.. ಅಲ್ಲೇಕೇ ಬಿಚ್ಚಿಕೊಳ್ಳುತ್ತಾರೋ ಅರ್ಥವಾಗುತ್ತಿಲ್ಲ. ಖ್ಯಾತಿ, ಹಣದ ಅಮಲು ಎಲ್ಲವನ್ನೂ ಬಿಚ್ಚಿಸುತ್ತಾ..? ಅದೂ ಯಕ್ಷ ಪ್ರಶ್ನೆ.
- ರಾ ಚಿಂತನ್
https://www.youtube.com/watch?v=onuHA0idTm8
POPULAR STORIES :
ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?
ಹೆಂಗಿದ್ದ ಹೆಂಗಾದ ಗೊತ್ತಾ ಅಂಬಾನಿ ಪುತ್ರ..! ಐಪಿಎಲ್ ವೇಳೆ ಅಚ್ಚರಿಗೊಳ್ಳಲು ಸಿದ್ಧರಾಗಿ..!
ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video
`ಆ್ಯಮ್ ಸಾರೀ ಗೇಲ್’ ಅಂದ ಬಿಗ್ಬಿ ಅಮಿತಾಬ್..!? ಅಮಿತಾಬ್ ಮಾಡಿದ ತಪ್ಪೇನು..?
ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?
ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?