ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಪದ್ಮಾವತಿ’ ಕೊನೆಗೂ ಬಿಡುಗಡೆಯಾಗುತ್ತಿದೆ.
ವಿವಾದ ಗಳ ಸುಳಿಯಲ್ಲಿ ಸಿಕ್ಕಿದ್ದ ಪದ್ಮಾವತಿ ಅಡೆತಡೆಗಳನ್ನು ಮೀರಿ ನಾಳೆ ದೇಶದಾದ್ಯಂತ ತೆರೆ ಕಾಣಲಿದೆ.
ಈ ಸಿನಿಮಾದ ವಿಶೇಷ ಪ್ರದರ್ಶನವನ್ನು ಮುಂಬೈನ ಲೋವರ್ ಪರೆಲ್ ನ ಪಿವಿಆರ್ ನಲ್ಲಿ ಆಯೋಜಿಸಲಾಗಿತ್ತು. ಈ ಪ್ರದರ್ಶನಕ್ಕೆ ರಣವೀರ್ ಸಿಂಗ್ ಮತ್ತು ದೀಪಿಕಾ ಕೈ ಕೈ ಹಿಡಿದು ಬಂದಿದ್ದು ವಿಶೇಷವಾಗಿತ್ತು.
ಶಾಹಿದ್ ಕಪೂರ್, ಮೀರಾ ರಾಜ್ ಪುತ್, ಸಂಜಯ್ ಲೀಲಾ ಬನ್ಸಾಲಿ, ಸುಪ್ರಿಯಾ ಪಾಟಕ್,ಪಂಕಜ್ ಕಪೂರ್ ಹಾಗೂ ನಿಖಿಲ್ ದ್ವಿವೇದಿ ಸಹ ಇದ್ದರು.