ಜಗತ್ತಿನಲ್ಲೇ ತುಂಬಾ ಬ್ಯುಸಿಯಾಗಿರುವ ವಿಮಾನ ನಿಲ್ದಾಣಗಳಲ್ಲೊಂದು ಅನ್ನಿಸಿಕೊಂಡಿರೋ ನಮ್ಮ ದೆಹಲಿಯ ಇಂಧಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಭರಣ ಕಳವಾಗಿದೆ. ದುಬೈಯಿಂದ ದೆಹಲಿಗೆ ಪ್ರಯಾಣ ಮಾಡುತ್ತಿರುವ ಓರ್ವ ಮಹಿಳೆಯ ಬ್ಯಾಗ್ ನಿಂದ ಆಭರಣವನ್ನು ಕಳವು ಮಾಡಲಾಗಿದ್ದು, ಈ ಮಹಿಳೆಯು ಬ್ಯಾಗೇಜ್ ಕೌಂಟರ್ ನಿಂದ ಬ್ಯಾಗ್ ನ್ನು ತೆಗೆದು ಪರೀಶೀಲಿಸಿದಾಗ ಈ ಮಾಹಿತಿ ಬೆಳಕಿಗೆ ಬಂತು. ಈಕೆ ದೂರನ್ನು ದಾಖಲಿಸಿ ಸಂಪೂರ್ಣ ತನಿಖೆ ನಡೆದ ಮೇಲಷ್ಟೇ ಕಳ್ಳತನದ ಬಗ್ಗೆ ಸುಳಿವು ದೊರಕಿತು. C.C.T.V ಯ ಜಾಡು ಹಿಡಿದು ಹೊರಟ ತಂಡಕ್ಕೆ ದೊರೆತ ಮಾಹಿತಿ ಹೀಗಿದೆ.
ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಲಗೇಜ್ ಗಳನ್ನು ಸಾಗಿಸುವ ಸಿಬ್ಬಂದಿಗಳಲ್ಲಿ ಇಬ್ಬರಾದ ಅಮಿತ್ ಕುಮಾರ್ ಹಾಗೂ ರೋಹಿತ್ ಕುಮಾರ್, ಇವರುಗಳು ವಿಮಾನದ ಕಾರ್ಗೋ ವಿಭಾಗದಿಂದ ಲೋಡಿಂಗ್, ಅನ್ ಲೋಡಿಂಗ್ ಮಾಡುತ್ತಿರುವಾಗ ಬ್ಯಾಗ್ ನ್ನು ಸುರಕ್ಷಿತವಾಗಿ ತೆರೆದು ಅಲ್ಲಿಂದ ಆಭರಣವನ್ನು ಕದಿಯುತ್ತಿದ್ದ ದೃಶ್ಯ C.C.T.V ಯಲ್ಲಿ ದಾಖಲಾಗಿದೆ.C.C.T.V ಯ ಬಗೆಗಾಗಲೀ ಅಥವಾ ಅದರಲ್ಲಿ ತಾವು ಮಾಡೋ ಘನಂದಾರೀ ಕೆಲಸ ದಾಖಲಾಗುತ್ತಿರುವುದಾಗಲೀ ಅವರಿಗೆ ತಿಳಿದಿರಲಿಲ್ಲವೇನೋ ಪಾಪ! ಅಂತೂ ಕಳ್ರು ಸಿಕ್ಕಾಕೊಂಡ್ರು. ಹೆಚ್ಚಿನ ತನಿಖೆಯಿಂದ ಇವರುಗಳು ಈ ಮೊದಲೂ ಈ ತರನಾದ ಅನೇಕ ಕಳ್ಳತನ ಮಾಡಿರುವುದಾಗಿಯೂ ತಿಳಿದುಬಂದಿದೆ. ಸಧ್ಯಕ್ಕೆ ಇವರು ಆಭರಣ ಮಾರಾಟ ಮಾಡಿರುವ ವ್ಯಕ್ತಿಗೋಸ್ಕರ ಹುಡುಕಾಟ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿರೋ ವೀಡಿಯೋ ನೋಡಿ.
ಏಷ್ಯಾದಲ್ಲೇ ಅತೀ ಉತ್ತಮವಾದ ವಿಮಾನ ನಿಲ್ದಾಣ ಎಂದು ಹೆಸರುವಾಸಿಯಾಗಿರೋ ನಮ್ಮ ದೆಹಲಿ ವಿಮಾನ ನಿಲ್ದಾಣದ ಕಸ್ಟಂಸ್, ಸೆಕ್ಯುರಿಟಿ ಚೆಕ್ ಹೀಗೆ ಹಲವು ಕಡೆಗಳಲ್ಲಿ C.C.T.V ಗಳನ್ನು ಅಳವಡಿಸಲಾಗಿಲ್ಲ. Bureau Of Civil Aviation Security ಯು 2014 ರಲ್ಲಿ ಈ ವಿಷಯಗಳ ಬಗ್ಗೆ ಮಾಹಿತಿ ಚೆಲ್ಲಿತ್ತಾದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ,ಇದೂ ಭಯೋತ್ಪಾದನೆಯ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತಾಗಲ್ವೇ ಎಂಬುದು ನಮಗಿರೋ ಪ್ರಶ್ನೆ…
- ಸ್ವರ್ಣಲತ ಭಟ್
POPULAR STORIES :
ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?
ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?
26 ವರ್ಷದ ಮಾಡೆಲಿಂಗ್ ಹುಡುಗಿ 62 ವರ್ಷದ ತಾತನನ್ನೇ ಯಾಕೆ ಮದುವೆಯಾದ್ಲು?
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?