ಕರ್ನಾಟಕ ತೀರಾ ಹಿಂದುಳಿದ ಹಳ್ಳಿಯೊಂದನ್ನು ಸಂಪೂರ್ಣ ಬದಲಾಯಿಸಿಯೇ ಬದಲಾಯಿಸುತ್ತೇನೆಂದು ಯುವಕರೊಬ್ಬರು ಮುಂದಾಗಿದ್ದಾರೆ..! ಕರ್ನಾಟಕದ ಈ ಹಳ್ಳಿಯನ್ನು ಬದಲಾಯಿಸುತ್ತೇನೆ..! ಇಲ್ಲಿಯೂ ಬದಲಾವಣೆ ತಂದೇ ತರುತ್ತೇನೆಂದು ಪಣ ತೊಟ್ಟು ಕಾರ್ಯ ಪ್ರವೃತ್ತರಾಗಿರೋ ಯುವಕ ದೆಹಲಿಯವರು..! ಅವರ ಹೆಸರು `ರಾಹುಲ್ ಪ್ರಸಾದ್’. ವಯಸ್ಸು 24.
ಅದು ರಾಮನಗರ ಜಿಲ್ಲೆಯಲ್ಲಿರೋ ಭದ್ರಪುರ ಎಂಬ ಸಣ್ಣಹಳ್ಳಿ..! ಅಲ್ಲಿದ್ದಾರೆ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ ಜನ..! ಇಂದಿಗೂ ಆ ಹಳ್ಳಿ ಹಿಂದುಳಿದೇ ಇದೆ..! ರಾಹುಲ್ ಹಿಂದೊಮ್ಮೆ ಈ ಹಳ್ಳಿಗೆ ಬಂದಿದ್ದರು..! ಆಗ ಅವರಿಗೆ 20 ವರ್ಷವೂ ಆಗಿರ್ಲಿಲ್ಲ..! ಅವತ್ತು ಮಕ್ಕಳಿಗಾಗಿ ಮೆಡಿಕಲ್ ಕ್ಯಾಂಪ್ಗೆ ಬಂದಿದ್ದ ಇವರಿಗೆ ಈ ಹಳ್ಳಿಯ ಜೀವನ ನೋಡಿ ಅಯ್ಯೋ.. ಛೇ.. ಪಾಪ ಅನಿಸಿಬಿಟ್ಟಿತ್ತು..! ಅವತ್ತೇ ಈ ಹಳ್ಳಿಗೆ ನಾನೇನಾದರೂ ಕೈಲಾದುದನ್ನು ಮಾಡ್ಬೇಕು ಅಂತ ಅಂದುಕೊಂಡಿದ್ದಿರಬೇಕು..!? ಮತ್ತೀಗ ಮರಳಿ ಆ ಹಳ್ಳಿಗೆ ಬಂದಿದ್ದಾರೆ..! ಬರುವಾಗ ಪೇಸ್ಟ್, ಬ್ರೆಶ್ ಸೋಪ್ ಮೊದಲಾದವುಗಳನ್ನು ಆ ಹಕ್ಕಿಪಿಕ್ಕಿ ಜನರಿಗೋಸ್ಕರ ತಂದಿದ್ದಾರೆ..!
ಅವತ್ತು ಬಂದಿದ್ದ ರಾಹುಲ್ ಸರಿ ಸುಮಾರು ನಾಲ್ಕು ವರ್ಷದ ಬಳಿಕ ಈ ಹಳ್ಳಿಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ..! ಈ ಹಳ್ಳಿಯ ಅಗತ್ಯಗಳನ್ನು ಪೂರೈಸಲು ಹಳ್ಳಿಯ 140 ಕುಟುಂಬಗಳನ್ನೂ ದತ್ತು ತೆಗೆದುಕೊಂಡಿದ್ದಾರೆ..! ಇವರ ಜೂವೆನಿಲ್ ಕೇರ್ ಚಾರಿಟಿ ಟ್ರಸ್ಟ್ ಅನಾಥ ಮಕ್ಕಳ ಉನ್ನತಿಗೆ ಶ್ರಮಿಸ್ತಾ ಇದೆ..! ಇದು ಮಂಚನಾಯಕನಹಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಮಾತನಾಡಿ ನ್ಯಾಯಯುತವಾಗಿಯೇ ಈ ಹಳ್ಳಿಯನ್ನು ದತ್ತು ತೆಗೆದುಕೊಂಡಿದ್ದು, ಇವರು ಮತ್ತು ಇವರೊಡನೆ ಇರೋ ಸ್ವಯಂಸೇವಕರು ಹಳ್ಳಿಯ ಕಲ್ಯಾಣಕ್ಕೆ ಮುಂದಾಗಿದ್ದಾರೆ..! ಹಳ್ಳಿಯರ ಆರೋಗ್ಯಕ್ಕಾಗಿ ನೈರ್ಮಲ್ಯ ನಿರ್ವಹಣೆ, ಆಸ್ಪತ್ರೆ ಸೌಕರ್ಯ ಮೊದಲಾದವುಗಳನ್ನು ಮಾಡಲು ಕಾರ್ಯಕ್ರಮ ರೂಪಿಸಿದ್ದಾರೆ..! ರಸ್ತೆ ಸೌಕರ್ಯ ಸೇರಿದಂತೆ ಮೂಲಭೂತ ಸೌಕರ್ಯವನ್ನು ಈ ಹಳ್ಳಿಗೆ ಒದಗಿಸಲು ಪಣತೊಟ್ಟಿದ್ದಾರೆ. ಇಂಥಾ ಸಮಾಜಮುಖಿ ಕಾರ್ಯ ಮಾಡ್ತಾ ಇರೋ ಯುವಕ ರಾಹುಲ್ ಅವರಿಗೆ ಯುಎನ್ ಕರ್ಮವೀರ ಚಕ್ರ ಅವಾಡರ್್ ಮತ್ತು ಗ್ಲೋಬಲ್ ಫೆಲೋಶಿಪ್ ಕೂಡ ಲಭಿಸಿದೆ..ಇವರಿಗೆ ಶುಭವಾಗಲಿ
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಭಿಕ್ಷೆ ಬೇಡ್ತಾ ಇದ್ದ ಅಜ್ಜಿಗೆ ತಿನ್ನಲು ಕೊಡುವಾಗ, ವ್ಯಾಪಾರಿ ಕೊಡಬೇಡಿ ಅಂದಿದ್ದೇಕೆ..?!
ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!
44 ವರ್ಷದ ನಂತರ ಜೈಲಿನಿಂದ ಹೊರಬಂದ ವ್ಯಕ್ತಿಯ ಪ್ರತಿಕ್ರಿಯೆ..!
ಇಡೀ ಜೀವನವನ್ನೇ ತಮ್ಮಂದಿರಿಗಾಗಿ ಮುಡಿಪಾಗಿಟ್ಟ ಅಣ್ಣ..!
ವಯಸ್ಸಾದ ಅಪ್ಪ ಬೆಂಗಳೂರಲ್ಲಿ ಒಬ್ಬಂಟಿ, ಮಗ ಹೆಂಡತಿ ಮಕ್ಕಳೊಡನೆ ಅಮೇರಿಕಾದಲ್ಲಿ..!
ರಾಹುಲ್ ಗಾಂಧಿ ಇಂದು ಮೇಕ್ ಇನ್ ಇಂಡಿಯಾ ವರ್ಕ್ ಆಗ್ತಿಯಾ ಅಂತ ಕೇಳಿದ್ರು..! ಬೆಂಗಳೂರು ಹುಡುಗೀರು ಏನಂದ್ರು ಗೊತ್ತಾ..?!
ಅಭಿಷೇಕ್ ಗೆ ಗೂಗಲ್ ನೀಡುತ್ತೆ 20000000 ರೂಪಾಯಿಗಳ ಸಂಬಳ..! ಐಐಟಿ ವಿದ್ಯಾರ್ಥಿಗೆ ಕೋಟಿ ಕೋಟಿ ಸಂಬಳದ ಆಫರ್ ..!