ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಡೆಂಗಿಜ್ವರ ಹೆಚ್ಚಾಗಿದೆ . ಸಮರ್ಪಕ ನಿರ್ವಹಣೆ ಇಲ್ಲದೆ ಜನ ಡೆಂಗಿಗೆ ತುತ್ತಾಗುತ್ತಿದ್ದಾರೆ . ಇನ್ನೂ ಡೆಂಗಿ ಹರಡಿರುವ ಅಂಕಿ ಸಂಖ್ಯೆಗಳನ್ನ ನೋಡೊದಾದ್ರೆ , ಇದುವರೆಗೂ 4,055 ಮಂದಿ ಡೆಂಗಿಜ್ವರದಿಂದ ಬಳಲುತ್ತಿದ್ದು, ಅವರ ಪೈಕಿ ಚಿಕಿತ್ಸೆ ಫಲಿಸದೆ 8 ಮಂದಿ ಮೃತಪಟ್ಟಿದ್ದಾರೆ.
ಸಾಂಕ್ರಾಮಿಕ ರೋಗದಿಂದ ಬಚಾವಾಗಬೇಕಾದರೆ ಕೆಲವು ಮುನ್ಸೂಚನೆಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಆದೇಶಿಸಿದೆ . ಕುಡಿಯುವ ನೀರಿನ ಸಮರ್ಪಕ ಸರಬರಾಜು ಹಾಗು ನಿರ್ವಹಣೆ ಮಾಡಬೇಕು. ನಿರುಪಯುಕ್ತ ಹಾಗು ಘನತ್ಯಾಜ್ಯ ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು.