ಅಮೆರಿಕ ಪ್ರಾಂತೀಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಮೃತ ವ್ಯಕ್ತಿ ಗೆಲುವು ಸಿಕ್ಕಿದೆ.
ನಾಮಪತ್ರ ಸಲ್ಲಿಸಿದ ನಂತರ ಅವರು ಸಾವನ್ನಪ್ಪಿದ್ದಾರೆ.
ನೆವಾಡದ ಅಸೆಂಬ್ಲಿ ಚುನಾವಣೆಯಲ್ಲಿ ದಿ . ಡೆನ್ನಿಸ್ ಹೋಫ್ (72) ಗೆದ್ದಿದ್ದಾರೆ.
ರಿಪಬ್ಲಿಕ್ ಪಕ್ಷದವರಾದ ಇವರು ಶಿಕ್ಷಣ ತಜ್ಞೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಲಿಸಿಯಾ ರೋಮನೋವ್ ವಿರುದ್ಧ ಗೆದ್ದಿದ್ದಾರೆ. ಡೆನ್ನಿಸ್ ವೇಶ್ಯಾಗೃಹಗಳ ಮಾಲೀಕ ಆಗಿದ್ದರು.
ಇವರು ನೆವಾಡದ ಪರ್ಹಾಂಪ್ ನಿವಾಸಿ ಆಗಿದ್ದರು. ವೇಶ್ಯಾವಾಟಿಕೆ ಕಡೆಗೆ ಗ್ರಾಹಕರನ್ನು ಸೆಳೆಯುವುದು ಹೇಗೆ ಎಂದು ‘ಆರ್ಟ್ ಆಫ್ ಪಿಂಪ್’ ಎನ್ನುವ ಪುಸ್ತಕವನ್ನೇ ಬರೆದಿದ್ದರು. ಇತ್ತೀಚೆಗೆ 72 ನೇ ಜನ್ಮದಿನ ಆಚರಿಸಿಕೊಂಡು ಮರು ದಿನವೇ ಸಾವನ್ನಪ್ಪಿದ್ದಾರೆ.