ಸ್ಟಾರ್ ದರ್ಶನ್ ಅವರ ಕಾರು ಮೈಸೂರು ಬಳಿ ಅಪಘಾತಕ್ಕೀಡಾಗಿದ್ದು, ದರ್ಶನ್ ಅವರ ಕೈ ಮುರಿತಕ್ಕೊಳಗಾಗಿದೆ ಎಂದು ತಿಳಿದುಬಂದಿದೆ.
ಮೈಸೂರಿನ ಹಿನಕಲ್ ಬಳಿ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ನಟ ದೇವಾರಜ್ ಹಾಹಶು ಪ್ರಜ್ವಲ್ ದೇವರಾಜ್ ಕೂಡ ಇದ್ದರು. ಅವರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ದೇವರಾಜ್ , ದರ್ಶನ್, ಪ್ರಜ್ವಲ್ ಮೂವರು ಒಂದೇ ಕಾರಿನಲ್ಲಿ ಚಲಿಸುತ್ತಿದ್ದರು. ಚಿತ್ರೀಕರಣ ಮುಗಿಸಿ ವಾಪಸ್ಸು ಬರುತ್ತಿರುವಾಗ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ನಟರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಲಾಗಿದೆ.