ಏಷ್ಯಾಕಪ್ ನಲ್ಲಿ ಅಜೇಯ ಗೆಲುವಿನ ಓಟದಲ್ಲಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇಂದು ಅಸ್ಗರ್ ಸ್ತಾನಿಕ್ಜಾಯ್ ನಾಯಕತ್ವದ ಅಫ್ಘಾನಿಸ್ತಾನ ವಿರುದ್ಧ ಸೆಣೆಸಲಿದೆ.
ಈಗಾಗಲೇ ಫೈನಲ್ ತಲುಪಿರುವ ಭಾರತಕ್ಕಿದು ಅಭ್ಯಾಸ ಪಂದ್ಯದಂತಷ್ಟೇ.
ಹಾಂಕಾಂಗ್ , ಬಾಂಗ್ಲಾ ಮತ್ತು ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳನ್ನು ಭಾರತ ಗೆದ್ದಿದೆ.
ಭಾರತದ ಪರ ಎರಡು ಪಂದ್ಯಗಳಲ್ಲಿ ಎರಡು ಶತಕ ಸಹಿತ 327 ರನ್ ಸಿಡಿಸಿರುವ ಶಿಖರ್ ಧವನ್ ಅವರಿಗೆ ಇಂದಿನ ಪಂದ್ಯದಲ್ಲಿ ವಿಶ್ರಾಂತಿ ನೀಡಿ ಕನ್ನಡಿಗ ರಾಹುಲ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಅಫ್ಘಾನ್ ತಂಡವನ್ನು ಸುಲಭ ತುತ್ತೆಂದು ಭಾವಿಸುವಂತಿಲ್ಲ. ಮೈ ಮರೆತು ಆಡಿದರೆ ಅವಮಾನ ಎದುರಿಸಬೇಕಾದೀತು. ಭಾರತೀಯ ಕಾಲಮಾನದ ಪ್ರಕಾರ ಸಂಜೆ 5 ಗಂಟೆಗೆ ಪಂದ್ಯ ಆರಂಭವಾಗಲಿದೆ.