ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತೆ ಎರಡುವರೆ ವರ್ಷ ಪುಟ್ಟ ಪೋರ ಪರಿಣಿತ ಕ್ರಿಕೆಟಿಗನಂತೆ ಬ್ಯಾಟ್ ಬೀಸುತ್ತಾನೆ…!
ಈತ ಚೆನ್ನೈ ಮೂಲದ ಎಂ ಸನುಷ್ ಸೂರ್ಯದೇವ್. ಇವನ ವಯಸ್ಸಿನ್ನೂ ಎರಡುವರೆ ವರ್ಷ. ಈತ ವರ್ಲ್ಡ್ ಯಂಗೆಸ್ಟ್ ಕ್ರಿಕೆಟರ್ ಕೂಡ ಹೌದು. ಎಲ್ಲರಿಂದ ಜೂನಿಯರ್ ಧೋನಿ ಅಂತ ಕರೆಸಿಕೊಳ್ಳುವ ಈತ ನಮ್ಮ ಮಾಹಿ ಮನಸ್ಸನ್ನೂ ಸಹ ಕದ್ದಿದ್ದಾನೆ.
ಈ ಪೋರನ ಆಟಕ್ಕೆ ಧೋನಿಕೂಡ ತಲೆಬಾಗಿದ್ದಾರೆ. ಐಪಿಎಲ್ ಪಂದ್ಯದ ವೇಳೆ ಧೋನಿ ಈ ಹುಡುಗನನ್ನು ಭೇಟಿ ಮಾಡಿದ್ದಾರೆ.