ಕಾವೇರಿ ನದಿ ನೀರಿನ ವಿಚಾರವಾಗಿ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿರೋದು ನಿಮಗೆ ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತವರು ನೆಲದಲ್ಲಿ ಆಡಬೇಕಿದ್ದ ಐಪಿಎಲ್ ಪಂದ್ಯಗಳು ಪುಣೆಯಲ್ಲಿ ನಡೆಯುತ್ತಿವೆ.
ನಾನಾ ಸಂಘಟನೆಗಳು, ರಜನಿಕಾಂತ್ ಸೇರಿದಂತೆ ಅನೇಕರು ಕಾವೇರಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಕಪ್ಪುಪಟ್ಟಿ ಧರಿಸಿ ಆಡಬೇಕೆಂದು ಒತ್ತಾಯಿಸಿದ್ದರು.

ಆದರೆ ಇದನ್ನು ಕೂಲ್ ಕ್ಯಾಪ್ಟನ್ , ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.
ಧೋನಿ ಕನ್ನಡಿಗರ ಪರ ಬ್ಯಾಟ್ ಬೀಸಿದ್ದಾರೆ. ನಾವಿಲ್ಲಿಗೆ ಬಂದಿರೋದು ಕ್ರಿಕೆಟ್ ಆಡಲಿಕ್ಕೆ. ಒಬ್ಬರಿಗೆ ಸಪೋರ್ಟ್ ಮಾಡಿ ಇನ್ನೊಬ್ಬರ ವಿರುದ್ಧ ಹೋರಾಡಲು ಅಲ್ಲ. ಕನ್ನಡಿಗರ ಕಷ್ಟ ಅರ್ಥನಾಡಿಕೊಳ್ಳದೆ ಅವರ ವಿರುದ್ಧ ಹೋರಾಡೋದು ಸರಿಯಲ್ಲ ಎಂದಿದ್ದಾರೆ. ಧೋನಿ ಈ ಹೇಳಿಕೆಯಿಂದ ಚೆನ್ನೈನಲ್ಲಿ ಮತ್ತಷ್ಟು ಗಲಾಟೆ ನಡೆದಿತ್ತು. ಅದೇನೇ ಇದ್ದರೂ ಧೋನಿ ಕನ್ನಡಿಗರ ಮನ ಗೆದ್ದಿದ್ದಾರೆ.







