ಅಂಬಟಿ ರಾಯ್ಡು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಈ ಮೊದಲು ಐಪಿಎಲ್ ನಲ್ಲಿ ಮುಂಬೈ ಪರ ಆಡ್ತಿದ್ದ ಆಟಗಾರ. ಈ ಬಾರಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ನ ಪ್ರಮುಖ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರು.
ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ 82 ರನ್ ಗಳಿಸಿ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಓಪನರ್.
ಹೈದರಾಬಾದ್ ಅಂದ್ರೆ ಬಿರಿಯಾನಿಗೆ ಫೇಮಸ್. 2014 ರಲ್ಲಿ ಒಂದು ದಿನ ಚೆನ್ನೈ ಸೂಪರ್ ಕಿಂಗ್ಸ್ ನವರು ತಂಗಿದ್ದ ಹೋಟೆಲ್ ಗೆ ರಾಯ್ಡು ಪ್ರೀತಿಯಿಂದ ಬಿರಿಯಾನಿ ತೆಗೆದುಕೊಂಡು ಹೋಗಿದ್ರು.
ಆದರೆ ಆ ಹೋಟೆಲ್ ನವರು ರಾಯ್ಡುಗೆ ಧೋನಿಯಬ್ನು ಭೇಟಿ ಮಾಡಲು ಬಿಟ್ಟಿರಲಿಲ್ಲ. ಹೊರಗಡೆಯಿಂದ ತಂದ ಆಹಾರವನ್ನು ಹೋಟೆಲ್ ನಲ್ಲಿ ಒಳಕ್ಕೆ ಬಿಡಲಿಲ್ಲ .ಇದನ್ನು ತಿಳಿದ ಧೋನಿ ರೈನಾ ಹಾಗೂ ಬ್ರಾವೋ ಜೊತೆ ಹೋಟೆಲ್ ನಿಂದ ಚಕ್ ಔಟ್ ಆಗಿ ಹೊರಬಂದು, ರಾಯ್ಡು ತಂದಿದ್ದ ಬಿರಿಯಾನಿಯನ್ನು ತಿಂದಿದ್ರಂತೆ.