ಅದ್ಧೂರಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ಬಹದ್ದೂರ್ ಆಗಿ ಮೆರೆದ ‘ಭರ್ಜರಿ’ ಹೀರೋ ಧ್ರುವ ಸರ್ಜಾ ಅವರ ಸಂಭಾವನೆ ಕೂಡ ಭರ್ಜರಿಯಾಗಿಯೇ ಹೆಚ್ಚಿದೆ…!
ಮೂರೂ ಸಿನಿಮಾಗಳ ಗೆಲುವಿನಿಂದ ಕನ್ನಡ ಸಿನಿಮಾ ರಂಗದಲ್ಲಿ ಧ್ರುವ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ಧ್ರುವ ನಟನೆಯ ಭರ್ಜರಿ ಸಿನಿಮಾ ಗೆದ್ದಿದೆ. ಧ್ರುವ ಬಹುಬೇಡಿಕೆಯ ನಟನಾಗಿ ಹೊರ ಹೊಮ್ಮಿದ್ದಾರೆ.
ಭರ್ಜರಿ ಸೌಂಡು ಮಾಡ್ತಿದ್ದಂತೆ ಧ್ರುವ ಸರ್ಜಾ ಅವರ ಸಂಭಾವನೆ ಕೂಡ ಹೆಚ್ಚಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹಬ್ಬಿತ್ತು. ಆದರೆ, ಇದು ಸತ್ಯ ಎಂದು ಹೇಳಲಾಗ್ತಾ ಇರ್ಲಿಲ್ಲ. ಆದರೆ, ಇದೀಗ ಧ್ರುವ ಅವರೇ ಸ್ಪಷ್ಟಪಡಿಸಿದ್ದಾರೆ. ತಾವು ಸಂಭಾವನೆ ಹೆಚ್ಚಿಸಿಕೊಂಡಿರೋದಾಗಿ ಧ್ರುವ ಹೇಳಿಕೊಂಡಿದ್ದಾರೆ.
ಗಂಗಾಧರ್ ನಿರ್ಮಾಣದ ಪೊಗರು ಚಿತ್ರ ಹಾಗೂ ನಂತರ ಉದಯ್ ಕೆ ಮೆಹ್ತಾ ಅವರ ಸಿನಿಮಾ ಹಾಗೂ ರಾಘವೇಂದ್ರೆ ಹೆಗಡೆ ನಿರ್ಮಾಣದ ಚಿತ್ರಕ್ಕೆ ಧ್ರುವ ಡೇಟ್ ಕೊಟ್ಟಿದ್ದು, ಬರೊಬ್ಬರಿ 6 ಕೋಟಿ ರೂ ಸಂಭಾವನೆ ಪಡೆಯಲಿದ್ದಾರಂತೆ…!