ನಾನು ಈಗಲೂ ಸೇಲ್ಸ್ ಮ್ಯಾನ್ ಎಂದ ದಿವಾಕರ್…!

Date:

ಕನ್ನಡ ಬಿಗ್ ಬಾಸ್ ಸೀಸನ್ 5ರ ಕುತೂಹಲಕ್ಕೆ ತೆರೆಬಿದ್ದು, ಚಂದನ್ ಶೆಟ್ಟಿ ವಿನ್ನರ್ ಆಗಿ, ದಿವಾಕರ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು ಈಗಾಗಲೇ‌ ನಿಮಗೆ ಗೊತ್ತಿದೆ.


ನಿನ್ನೆ ನಡೆದ ಫಿನಾಲೆಯನ್ನು ನೋಡಿದವರು ಖಂಡಿತಾ ದಿವಾಕರ್ ಅವರನ್ನು ಮತ್ತಷ್ಟು ಇಷ್ಟಪಟ್ಟಿರ್ತೀರಿ. ಅವರ ಪ್ರತಿಯೊಂದು ಮಾತುಗಳಲ್ಲಿ ತೂಕವಿತ್ತು.


ಬಿಗ್ ಬಾಸ್ ಸೀಸನ್‌5 ರ ಶುರುವಾತಿನಿಂದಲೂ ಸೆಲಬ್ರಿಟಿ‌ ಮತ್ತು ಜನಸಾಮಾನ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ. ಸೆಲಬ್ರಿಟಿಗಳು ಜನ ಸಾಮಾನ್ಯರನ್ನು ದೂರ ತಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ವು‌. ಇದು ಫಿನಾಲೆಯಲ್ಲೂ ಚರ್ಚೆಗೆ ಬಂತು.


ಸೆಲಬ್ರಿಟಿ, ಕಾಮನ್ ಮ್ಯಾನ್ ಎಂಬ ತಾರತಮ್ಯ ನಾವು ಮಾಡಿಲ್ಲ. ಆದರೆ, ಹೊರಗಡೆ ಅಂತ ಮಾತುಗಳು ಕೆಟ್ಟದಾಗಿ ಕೇಳಿಬರ್ತಿವೆ ಎಂದರು.
ಮಾತು ಮುಂದುವರೆಸಿ ನೀವಿವತ್ತು ಸೆಲಬ್ರಿಟಿನಾ , ಕಾಮನ ಮ್ಯಾನ್ ಅನಿಸ್ತಿದೆಯಾ ಹೇಳಿ ಪ್ಲೀಸ್ ಅಂತ ದಿವಾಕರ್ ಅವರನ್ನು ಕೇಳಿದ್ರು.
ಅದಕ್ಕೆ ಉತ್ತರಿಸಿದ ದಿವಾಕರ್ ‘ ದೇವ್ರಾಣೆಗೂ, ಸತ್ಯವಾಗ್ಲು, ನಿಜವಾಗ್ಲು ಹೇಳ್ತೀನಿ ನನಗೆ ಈಗಲೂ ನಾನು ಸೇಲ್ಸ್ ಮ್ಯಾನ್ ಅಂತಲೇ ಅನಿಸ್ತಿದೆ ಎಂದ್ರು..!


ಒಬ್ಬ ವ್ಯಕ್ತಿ ತಾನು ಬೆಳೆದು ಬಂದ ಹಾದಿಯನ್ನು ಮರೆಯದಿರೋದು ದೊಡ್ಡಗುಣ. ಇವತ್ತು ದಿವಾಕರ್ ಅವರಿಗೆ ಸೆಲಬ್ರಿಟಿ ಪಟ್ಟ ಸಿಕ್ಕಿದೆ. ‌ಆದ್ರೆ,‌‌ನಾನು‌ ಇವತ್ತಿಗೂ ಕಾಮನ್ ಮ್ಯಾನ್, ಸೇಲ್ಸ್ ಮ್ಯಾನೇ‌ ಎನ್ನುವ ದಿವಾಕರ್ ಇಷ್ಟವಾಗ್ತಾರೆ.‌ ಇವರ ಮುಗ್ಧತೆ,‌ನೇರ‌ನುಡಿ, ಸರಳತೆ, ಸಜ್ಜನಿಕೆಯನ್ನು‌ ಇಷ್ಟಪಟ್ಟ ಕನ್ನಡಿಗರು ರನ್ನರ್ ಅಪ್ ಪಟ್ಟ ಕಲ್ಪಿಸಿಕೊಟ್ಟಿದ್ದಾರೆ.

Share post:

Subscribe

spot_imgspot_img

Popular

More like this
Related

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ...

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು...

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...

ಮಧುಮೇಹಿಗಳಿಗೆ ಲವಂಗದ ನೀರು ವರದಾನ

ಮಧುಮೇಹಿಗಳಿಗೆ ಲವಂಗದ ನೀರು ವರದಾನ: ಬೆಳಿಗ್ಗೆ ಈ ನೀರು ಕುಡಿಯುವುದರಿಂದ ಬ್ಲಡ್...