ಕನ್ನಡ ಬಿಗ್ ಬಾಸ್ ಸೀಸನ್5 ರಲ್ಲಿ ಗೆಳೆಯರು ಗೆದ್ದಿದ್ದಾರೆ. ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ, ಸೇಲ್ಸ್ ಮನ್ ದಿವಾಕರ್ ಕ್ರಮವಾಗಿ ವಿನ್ನರ್ ಮತ್ತು ರನ್ನರ್ ಅಪ್ ಆಗಿದ್ದಾರೆ.
ಜನಸಾಮಾನ್ಯ ಸ್ಪರ್ಧಿ ದಿವಾಕರ್ ಅವರನ್ನು ಆರಂಭದಿಂದಲೂ ಮನೆಯ ಇತರ ಸ್ಪರ್ಧಿಗಳು ಬೇರೆ ರೀತಿಯಲ್ಲಿ ಟ್ರೀಟ್ ಮಾಡ್ತಿದ್ರು. ಎಲ್ರೂ ಯಾಕೆ ಹೀಗೆ ಮಾಡ್ತಾರೆ ಅಂತ ಚಂದನ್ ದಿವಾಕರ್ ಜೊತೆ ಮಾತಾಡಿದ್ರು. ದಿವಾಕರ್ ಅವರ ಗುಣ ಚಂದನ್ ಗೆ ಇಷ್ಟವಾಯ್ತು. ಇಬ್ಬರ ನಡುವೆ ಗೆಳೆತನ ಬೆಳೆಯಿತು.
ಬಿಗ್ ಬಾಸ್ ಮನೆಯಲ್ಲಿ ಒಂದು ದಿನ ಚಂದನ್, ದಿವಾಕರ್ ಗೆ ನೀನೇನು ಅಂತ ತೋರಿಸಬೇಕು ಕಣೋ… ನೀನು ಗೆಲ್ ಬೇಕು. ಗೆಲ್ತೀಯ ಅಂತ ಹೇಳಿದ್ದರು. ಅದೇರೀತಿ ಚಂದನ್ ಅವರ ಗೆಲುವನ್ನು ದಿವಾಕರ್ ಬಯಸಿದ್ರು.
ಅಂತಿಮವಾಗಿ ಕನ್ನಡಿಗರು ಚಂದನ್ ಮತ್ತು ದಿವಾಕರ್ ಇಬ್ಬರ ಯಶಸ್ಸನ್ನೂ ಬಯಸಿ ಒಬ್ಬರನ್ನು ವಿನ್ನರ್ ಆಗಿ , ಇನ್ನೊಬ್ಬರನ್ನು ರನ್ನರ್ ಅಪ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯ ಗೆಳೆತನವನ್ನು ಕೊನೆಯ ತನಕ ಉಳಿಸಿಕೊಂಡು ಹೋಗ್ತೀವಿ ಅಂತ ಚಂದನ್ ಮತ್ತು ದಿವಾಕರ್ ಇಬ್ಬರೂ ಮನಬಿಚ್ಚಿ ಹೇಳುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ದಿವಾಕರ್ ಮಾಡೋ ಸಿನಿಮಾಕ್ಕೆ ತಾನು ಸಂಗೀತ ನಿರ್ದೇಶನ ಮಾಡ್ತೀನಿ ಅಂತ ಚಂದನ್ ಹೇಳಿದ್ದಾರೆ. ಜೊತೆಗೆ ದಿವಾಕರ್ ಗಾಗಿಯೇ ಒಂದು ಕಥೆ ಮಾಡಿದ್ದೇನೆ. ಸಾಧ್ಯವಾದ್ರೆ ಅದನ್ನು ನಿರ್ದೇಶಿಸುತ್ತೇನೆ ಎಂದು ಸಹ ಚಂದನ್ ಹೇಳಿದ್ದಾರೆ.
ಇವರಿಬ್ಬರ ಸ್ನೇಹ ಚಿರಕಾಲ ಇರಲಿ. ಇಬ್ಬರಿಗೂ ದೊಡ್ಡ ಯಶಸ್ಸು, ಕೀರ್ತಿ ಸಿಗಲಿ. ಒಳ್ಳೆಯತನ ಗೆದ್ದೇ ಗೆಲ್ಲುತ್ತೆ.