ಸೌದಿ ಅರೇಬಿಯಾ ತನ್ನ ಧಾರ್ಮಿಕ ಕಟ್ಟಳೆಗಳಿಗೆ ತಿದ್ದುಪಡಿ ತರುವ ಮೂಲಕ ಆಧುನಿಕತೆಯತ್ತ ಮುಂದಡಿ ಇಡುತ್ತಿದೆ. ಮಹಿಳೆಯರಿಗೂ ಡ್ರೈವಿಂಗ್ ಲೈಸೆನ್ಸ್ ಕೊಡುವುದಾಗಿ ಹೇಳಿದ್ದ ಸೌದಿ ಅರೇಬಿಯಾ ಕೊನೆಗೂ ಇದೀಗ ಮಹಿಳೆಯರಿಗೆ ವಾಹನ ಚಾಲನಾ ಪರವಾನಗಿಯನ್ನು ನೀಡಿದೆ.
ದಶಕಗಳಿಂದ ಸೌದಿ ಅರೇಬಿಯಾದಲ್ಲಿ ಮಹಿಳೆಯರು ವಾಹನ ಚಲಾಯಿಸುವುದನ್ನು ನಿಷೇಧವಿತ್ತು. ಅದನ್ನೀಗ ಅಲ್ಲಿನ ಸರ್ಕಾರ ಸಂಪೂರ್ಣವಾಗಿ ತೆಗೆದುಹಾಕಲು ತೀರ್ಮಾನಿಸಿದೆ.
ಜೊತೆಗೆ ಪ್ರಮುಖ ಐದು ನಗರಗಳಲ್ಲಿ ವಾಹನ. ಚಾಲನಾ ತರಬೇತಿ ಶಾಲೆ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ.