ಚಾಲನಾ ಪರವಾನಿಗೆ ಬಹಳ ಮುಖ್ಯವಾದ ದಾಖಲೆಯಾಗಿದ್ದು, ನಿಮ್ಮ ವಾಹನವನ್ನು ದೇಶದ ಯಾವುದೇ ಭಾಗದಲ್ಲಾದರೂ ನಿಶ್ಚಿಂತೆಯಿಂದ ಚಾಲನೆ ಮಾಡಲು ಬೇಕಾದ ಅತ್ಯಗತ್ಯ ಪತ್ರವಾಗಿದೆ. ಆದರೆ ಈ ಲೈಸೆನ್ಸ್ ಕಳೆದು ಹೋದರೆ ಏನು ಮಾಡೋದು ?
ಹೊಸ ನಿಯಮಗಳ ಪ್ರಕಾರ, ನೀವು ಹೊಸ ಲೈಸೆನ್ಸ್ ಪಡೆಯಲು ಆರ್‌ಟಿಓ ಕಚೇರಿಗೆ ದೌಡಾಯಿಸಬೇಕಾದ ಅಗತ್ಯವಿಲ್ಲ, ಅದನ್ನು ನೀವು ಮನೆಯಲ್ಲೇ ಕುಳಿತು ಪಡೆಯಬಹುದಾಗಿದೆ.
ನಿಮ್ಮ ಲೈಸೆನ್ಸ್ ಕಳುವಾದರೆ ಮೊದಲು ನೀವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಒಂದು ವೇಳೆ ನಿಮ್ಮ ಹಳೆ ಲೈಸೆನ್ಸ್ ಹರಿದಿದ್ದರೆ ಅಥವಾ ಹಾಳಾಗಿದ್ದರೆ, ನೀವು ನಿಮ್ಮ ಹಳೆಯ ಲೈಸೆನ್ಸ್ ಅನ್ನು ಇಲಾಖೆಗೆ ಸಲ್ಲಿಸಬೇಕು.
ಚಾಲನಾ ಪರವಾನಿಗೆ ಪಡೆಯುವುದು ಹೀಗೆ:
* ಸಾರಿಗೆ ಇಲಾಖೆಯ ಜಾಲತಾಣಕ್ಕೆ ಭೇಟಿ ಕೊಡಿ.
* ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಎಲ್‌ಎಲ್‌ಡಿ ಅರ್ಜಿ ತುಂಬಿ.
* ದಾಖಲೆಯ ಪ್ರಿಂಟ್‌ಔಟ್ ಪಡೆದುಕೊಂಡು, ಅಗತ್ಯ ದಾಖಲೆಗಳನ್ನು ಅದರೊಂದಿಗೆ ಲಗತ್ತಿಸಿ.
* ಇದಾದ ಬಳಿಕ ದಾಖಲೆಗಳನ್ನು ಹತ್ತಿರದ ಆರ್‌ಟಿಓ ಕಚೇರಿಗೆ ಸಲ್ಲಿಸಿ.
* 30 ದಿನಗಳ ಬಳಿಕ ಚಾಲನಾ ಪರವಾನಿಗೆಯ ನಕಲು ಪ್ರತಿ ನಿಮ್ಮ ಮನೆಗೆ ಬರಲಿದೆ.
ಆಫ್ಲೈನ್ ಮೂಲಕ ಚಾಲನಾ ಪರವಾನಿಗೆ ಪಡೆಯುವುದು ಹೀಗೆ:
* ಚಾಲನಾ ಪರವಾನಿಗೆಯ ನಕಲಿ ಪ್ರತಿಯನ್ನು ಪಡೆಯಲು ಅರ್ಜಿಯನ್ನು ಆಫ್ಲೈನ್‌ನಲ್ಲಿ ಪಡೆಯಬಹುದಾಗಿದೆ.
* ಇದಕ್ಕಾಗಿ, ನೀಮಗೆ ಚಾಲನಾ ಪರವಾನಿಗೆ ವಿತರಿಸಿದ ಆರ್‌ಟಿಓ ಕಚೇರಿಗೆ ಭೇಟಿ ನೀಡಬೇಕು.
* ಇಲ್ಲಿ ನೀವು ಎಲ್‌ಎಲ್‌ಡಿ ಅರ್ಜಿ ಭರಿಸಿ ಸಲ್ಲಿಸಿ.
* ಈ ಅರ್ಜಿಯೊಂದಿಗೆ, ಇಲಾಖೆ ನಮೂದಿಸಿದ ಶುಲ್ಕ ಪಾವತಿ ಮಾಡಿ.
* ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ನಿಮಗೆ ಚಾಲನಾ ಪರವಾನಿಗೆಯ ನಕಲು ಪ್ರತಿ 30 ದಿನಗಳಲ್ಲಿ ಲಭ್ಯವಿರಲಿದೆ.
ಚಾಲನಾ ಪರವಾನಿಗೆಗೆ ಅರ್ಜಿ ಸಲ್ಲಿಸಿದ ಬಳಿಕ ನಿಮಗೆ ರಸೀದಿ ಸಿಗುತ್ತದೆ. ಆ ರಸೀದಿಯನ್ನು ನಿಮ್ಮ ಲೈಸೆನ್ಸ್ ಸಿಗುವವರೆಗೂ ಎಚ್ಚರಿಕೆಯಿಂದ ಇಟ್ಟುಕೊಳ್ಳಿ.