ಇನ್ಮುಂದೆ ಶಾಲೆಗಳಿಗೆ ಕಟ್ಟಬೇಕಿಲ್ಲ ಲಕ್ಷಗಟ್ಟಲೆ ಡೊನೇಷನ್..!

Date:

ಇವತ್ತಿನ ದಿನದಲ್ಲಿ ಹೆತ್ತವರಿಗೆ ಮಕ್ಕಳ ಶಿಕ್ಷಣದ್ದೇ ದೊಡ್ಡ ಚಿಂತೆಯಾಗಿ ಬಿಟ್ಟಿದೆ. ಮಕ್ಕಳ ಭವಿಷ್ಯ ಚನ್ನಾಗಿರಬೇಕು ಅಂತ ಕನಸು ಕಾಣೊ ಪೋಷಕರಿಗೆ ಶಾಲೆಗಳ ಯದ್ವಾತದ್ವಾ ಡೊನೇಷನ್ ಹೊಂದಿಸೋದೆ ತಲೆ ನೋವಾಗಿತ್ತು. ಖಾಸಗಿ ಶಾಲೆಗಳ ಎಗ್ಗಿಲ್ಲದೆ ಸಾಗಿದ್ದ ವಂತಿಗೆ ವಸೂಲಿಗೆ ಹೈಕೋರ್ಟ್ ಬ್ರೇಕ್ ಹಾಕಿದೆ. ಇಷ್ಟು ದಿನ ಶಿಕ್ಷಣ ಸಂಸ್ಥೆಗಳ ಹಗಲು ದರೋಡೆಯನ್ನ ಕಣ್ಣು ಮುಚ್ಚಿಕೊಂಡು ಸಾತ್ ನೀಡಿದ್ದ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಮೊಟಕಿದೆ.
ಶಿಕ್ಷಣ ಇಲಾಖೆಯ ಆಜ್ಞೆಗೂ ಕಿಮ್ಮತ್ತು ಕೊಡದೆ ಖಾಸಗಿ ಶಾಲೆಗಳು ನಿಯಮ ಬಾಹಿರವಾಗಿ ಪೋಷಕರಿಂದ ಫೀ ರೂಪದಲ್ಲಿ ಹಣ ವಸೂಲಿ ಮಾಡುತ್ತಿದ್ದವು. ಖಾಸಗಿ ಶಾಲೆಗಳ ಈ ಹಗಲು ದರೋಡೆಗೆ ಬೇಸತ್ತ ಬೆಂಗಳೂರಿನ ನಾಲ್ಕು ಪ್ರತಿಷ್ಟಿತ ಶಾಲೆಗಳ ಮುನ್ನೂರಕ್ಕೂ ಹೆಚ್ಚು ಮಕ್ಕಳು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಡಿಡಿಪಿಐ, ಬಿಇಒಗಳ ನಿಷ್ಕ್ರಿಯತೆಗೆ ತೀವ್ರ ತರಾಟೆ ತೆಗೆದುಕೊಂಡಿತು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೆಲವೊಂದು ಮಾರ್ಗಸೂಚಿ ಅಳವಡಿಸಿಕೊಳ್ಳುವಂತೆ ನಿರ್ದೇಶನ ಕೊಟ್ಟಿದೆ.
ಅದರ ಪ್ರಕಾರ ಇನ್ನು ಮುಂದೆ ಯಾವ ಶಾಲೆ ಎಷ್ಟು ಶುಲ್ಕ ಪಡೆಯಬೇಕು ಎಂಬುದನ್ನ ರಾಜ್ಯ ಸರ್ಕಾರ, ಪೋಷಕರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಒಟ್ಟಾಗಿ ಸಭೆ ಸೇರಿ ನಿರ್ಧಾರ ತೆಗೆದು ಕೊಳ್ಳಬೇಕೆಂದು ತೀರ್ಪಿನಲ್ಲಿ ಹೇಳಿದೆ. ಹೈಕೋರ್ಟ್ ತೀರ್ಪಿನಂತೆ ಶಿಕ್ಷಕರ ನೌಕರರ ಸಂಬಳ ಶಾಲೆಯ ವೆಚ್ಚದ ಆಡಿಟ್ ವರದಿ ಆಧಾರದ ಮೇಲೆ ಇನ್ನು ಮುಂದೆ ಶುಲ್ಕ ಪಡೆಯಲಾಗುವುದು.
ಒಟ್ಟಾರೆ ಹೈಕೋರ್ಟ್ ತೀರ್ಪಿನಿಂದ ರಾಜ್ಯದಾದ್ಯಂತ ಪೋಷಕರಿಗೆ ರಿಲೀಫ್ ಸಿಕ್ಕಿದಂತಾಗಿದೆ. ಹಾಗೆ ಯದ್ವಾ ತದ್ವಾ ಲಕ್ಷಗಟ್ಟಲೆ ಫೀ ಕಲೆಕ್ಟ್ ಮಾಡ್ತಿದ್ದ ಖಾಸಗಿ ಶಾಲೆಗಳ ಆಟಾಟೋಪಕ್ಕೂ ಬ್ರೇಕ್ ಹಾಕಿದಂತಾಗಿದೆ.

  • ಶ್ರೀ

POPULAR  STORIES :

ನೀವು ಫೇಸ್‍ಬುಕ್‍ನಲ್ಲಿ ಫೇಮಸ್ಸಾದ್ರೆ ಸುಲಭದಲ್ಲಿ ಸಾಲ ಸಿಗುತ್ತೆ..!

ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ..ಮೂತ್ರ ಹೊಯ್ದರೆ ಬಂಗಾರವಾದೆ..! #Gold in Cow

ಹಾಳಾಗಿ ಹೋಗ್ತೀಯಾ…! ಕೊಳ್ಳೇಗಾಲ ಅಂದಾಕ್ಷಣ ಸಿಎಂ ಕಾಲ್ಕಿತ್ತಿದ್ದು ಯಾಕೆ..?

ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?

ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!

ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?

Share post:

Subscribe

spot_imgspot_img

Popular

More like this
Related

ದೇಹದ ಮೇಲೆ ಕಾಣಿಸುವ ಹುಟ್ಟುಮಚ್ಚೆಗಳು ಆರೋಗ್ಯಕ್ಕೆ ಅಪಾಯವೇ?

ದೇಹದ ಮೇಲೆ ಕಾಣಿಸುವ ಹುಟ್ಟುಮಚ್ಚೆಗಳು ಆರೋಗ್ಯಕ್ಕೆ ಅಪಾಯವೇ? ದೇಹದ ಮೇಲೆ ಹುಟ್ಟುಮಚ್ಚೆಗಳು ಇರುವುದು...

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...