ಎಂಥೆಂಥಾ ಚಾಲೆಂಜ್ ಮಾಡ್ತಾರೆ..! ಆ ಚಾಲೆಂಜಲ್ಲಿ ಗೆಲ್ಬೇಕು ಅಂತ ಹಠ ಹಿಡಿದು ಪ್ರಾಣವನ್ನೇ ಕಳ್ಕೊತ್ತಾರೆ ಅಂತಾದ್ರೆ ಏನ್ ಹುಚ್ಚು..?!
ಇಂತಹದ್ದೇ ಹುಚ್ಚು ಚಾಲೆಂಜ್ ಗೆಲ್ಲೋಕೆ ಪಣ ತೊಟ್ಟ ವ್ಯಕ್ತಿ ಸೀದಾ ಈ ಲೋಕವನ್ನೇ ಬಿಟ್ಟು ಹೋಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೇಲಿ ನಡ್ದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ ತಮ್ಮನಹಳ್ಳಿ ಗ್ರಾಮದಲ್ಲಿ ಒಂದಿಷ್ಟು ಜನ ನಿನ್ನೆ ರಾತ್ರಿ ಕುಡಿತದ ಪಾರ್ಟಿ ಇಟ್ಕೊಂಡಿದ್ರು. ಆಗ ಪುರುಷೋತ್ತಮ್ (45)ಎಂಬ ವ್ಯಕ್ತಿ ನವೀನ್ ಎಂಬುವವರ ವಿರುದ್ಧ ‘ನನಗೆ 5 ಕ್ವಾಟರ್ ಕುಡಿದ್ರೂ ಏನೂ ಆಗಲ್ಲ’ ಅಂತ ಚಾಲೆಂಜಿಂಗ್ ಮಾಡಿ ಕುಡಿದಿದ್ದಾನೆ. ಆಗ ಅಮಲು ಹೆಚ್ಚಾಗಿ ಬಿದ್ದ ಪುರುಷೋತ್ತಮನನ್ನು ಸ್ನೇಹಿತರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರ್ಕೊಂಡ್ ಹೋಗಿದ್ದಾರೆ…ಅಷ್ಟರಲ್ಲಾಗಲೇ ಪುರುಷೋತ್ತಮ್ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಎಣ್ಣೆ ಹೊಡಿಯೋದ್ ಬಿಡೋದ್ ನಿಮ್ ಇಷ್ಟ..ಹೊಡಿದೇ ಇದ್ರೆ ಭಾರಿ ಒಳ್ಳೇದು. ಹೊಡಿಯೋರು ಇತಿಮಿತಿಯಲ್ಲಿ ಎಣ್ಣೆ ಹಾಕೋದ್ ಬಿಟ್ಟು ಚಾಲೆಂಜ್ ಮಾಡಿ, ಅದರಲ್ಲೇ ಮುಳುಗಿ ಸಾಯ್ಬೇಡಿ.