ಹೆಸರೇ ಹೇಳುವ ಹಾಗೆ ಇದೊಂದು ಮನಸ್ಥಿತಿ. ಒಬ್ಬ ವ್ಯಕ್ತಿ ತನ್ನ ಬಗ್ಗೆ ಮತ್ತು ಬೇರೆಯವರ ಬಗ್ಗೆ ವಿಚಿತ್ರವಾದ ಸುಳ್ಳು ಊಹೆಗಳನ್ನು ಮಾಡಿಕೊಂಡು ಅದೇ ಸತ್ಯವೆಂದು ಬದುಕುತ್ತಿರುತ್ತಾನೆ. ಇದು ಹೀಗೆಯೇ ಸಂಭವಿಸುತ್ತದೆ ಎಂದು ನಿಖರವಾಗಿ ಹೇಳುವುದು ತುಸು ಕಷ್ಟ. ಈ ಕಾಯಿಲೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ಇದಕ್ಕೆ ತಕ್ಕ ಉದಾಹರಣೆ ಎಂದರೆ, ಆನೆಯನ್ನು ವರ್ಷಗಳ ಕಾಲ ಕಟ್ಟಿ ಹಾಕಿ ನಂತರ ಅದನ್ನು ಬಿಚ್ಚಿದರೂ ಅದಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ ಎಂದೇ ಭಾವಿಸುತ್ತದೆ. ಇದೇ ರೀತಿಯ ಅನುಭವ ಮನುಷ್ಯನಲ್ಲೂ ಆಗುತ್ತದೆ. ಇದೂ ಕೂಡ ದ್ವಂದ್ವ ಮನಸ್ಥಿತಿಯೇ .
ಇದನ್ನು ಗುಣಪಡಿಸಬಹುದೇ?
ವಿಶ್ವದ 26 ಕೋಟಿ ಜನ ದ್ವಂದ್ವ ಮನಸ್ಥಿತಿಯಿಂದ ಬಳಲುತ್ತಿದ್ದಾರೆ. ದ್ವಂದ್ವ ಮನಸ್ಥಿತಿ ಎನ್ನುವುದು ಒಂದು ಮಾನಸಿಕ ಕಾಯಿಲೆ. ಇದಕ್ಕೆ ಸರಿಯಾದ ಚಿಕಿತ್ಸೆ ಸಿಕ್ಕರೆ ಶೇ. 90ರಷ್ಟು ಜನರನ್ನು ಗುಣ ಪಡಿಸಬಹುದು. ಆದರೆ ದ್ವಂದ್ವ ಮನಸ್ಥಿತಿಯನ್ನು ಹೊಂದಿರುವವರು ಶೇ.70ಕ್ಕಿಂತ ಹೆಚ್ಚಿನ ಜನ ಇದನ್ನು ಕಾಯಿಲೆ ಎಂದೇ ಪರಿಗಣಿಸದೇ ಹಾಗೆಯೇ ಸುಮ್ಮನಿದ್ದು ಬಿಡುತ್ತಾರೆ.
ಈ ಕಾಯಿಲೆಯ ಲಕ್ಷಣಗಳೇನು?
ಈ ಕಾಯಿಲೆಯಿಂದ ಬಳಲುವವರು ಹಲವಾರು ತೊಂದರೆಗಳನ್ನು ಅನುಭವಿಸುತ್ತಾರೆ. ಸರಿಯಾಗಿ ನಿದ್ದೆ ಬಾರದಿರುವುದು, ಒಂದು ವಸ್ತುವನ್ನು ನೋಡುತ್ತಾ ಇದ್ದರೆ ಅದನ್ನೇ ನೋಡುತ್ತಾ ಇರುವುದು, ಅತೀ ಹೆಚ್ಚು ಕೋಪ ಅಥವಾ ಅತೀ ಹೆಚ್ಚು ದುಃಖ ಬರುವುದು, ಜೋರಾಗಿ ಅಳುವುದು, ಬೇರೆಯವರ ಜತೆ ಬೆರೆಯಲು ಹಿಂಜರಿಯುವುದು ಅಥವಾ ತಮ್ಮನ್ನು ತಾವೇ ಮಾತನಾಡಿಕೊಳ್ಳುವುದು ಈ ರೋಗದ ಸಾಮಾನ್ಯ ಲಕ್ಷಣಗಳು.
ದ್ವಂದ್ವಮನಸ್ಥಿತಿ ಬಗ್ಗೆ ಇರುವ ಮೂಢ ನಂಬಿಕೆಗಳು ಮತ್ತು ನಿಜಾಂಶಗಳು
ದ್ವಂದ್ವಮನಸ್ಥಿತಿಯನ್ನು ಸ್ಪ್ಲಿಟ್ ಪರ್ಸಾನಾಲಟಿ ಎಂದೇ ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ ಇವೆರಡರ ನಡುವೆ ಬಹಳ ವ್ಯತ್ಯಾಸವಿದೆ. ದ್ವಂದ್ವ ಮನಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಯೋಚನೆಗಳು ಗೊಂದಲದಲ್ಲಿ , ಭ್ರಮೆಯಲ್ಲಿ ಬದುಕಿರುತ್ತಾನೆ. ಆದರೆ ಸ್ಪ್ಲಿಟ್ ಪರ್ಸಾನಾಲಟಿಯಲ್ಲಿ ಯಲ್ಲಿ ಒಬ್ಬ ವ್ಯಕ್ತಿ ವಿಭಿನ್ನವಾದ ಎರಡು ವ್ಯಕ್ತಿತ್ವಗಳನ್ನು ಹೊಂದಿರುತ್ತಾನೆ. ದ್ವಂದ ಸುಲಭವಾಗಿ ಗುಣಪಡಿಸಬಹುದಾದ ಖಾಯಿಲೆ. ಮಾನಸಿಕ ತಜ್ಞರ ಮಾರ್ಗದರ್ಶನದಲ್ಲಿ ಇದನ್ನು ಸುಲಭವಾಗಿ ಗುಣಪಡಿಸಬಹುದು.ಇದಲ್ಲದೇ ಇವರಿಂದ ಯಾರಿಗೂ ತೊಂದರೆ ಯಾಗುವುದಿಲ್ಲ. ಇವರು ಸದಾ ಭ್ರಮಾ ಲೋಕದಲ್ಲಿಯೇ ವಿಹರಿಸುತ್ತಿರುತ್ತಾರೆ ಅಷ್ಟೇ ಯಾರಿಗೂ ಯಾವುದೇ ರೀತಿಯಲ್ಲಿಯೂ ತೊಂದರೆ ಕೊಡುವುದಿಲ್ಲ.
-ಶ್ರದ್ಧಾ
POPULAR STORIES :
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!