ದುಬೈಗೆ ಹೋಗಿ ದುಡೀಬೇಕು ಅನ್ನೊವ್ರಿಗಿಲ್ಲಿದೆ ಒಂದು ಶುಭ ಸುದ್ದಿ.. ಇನ್ಮುಂದೆ ದುಬೈ ಹೋಗೋಕೆ ವೀಸಾ ಮಾಡಿಸ್ಬೇಕು ಅಂತ ನೀವೇನಾದ್ರೂ ಯೋಚ್ನೆ ಇಡ್ಕೊಂಡಿದ್ರೆ, ಅದಕ್ಕಾಗಿ ನೀವು ಮುಂಬೈಗೊ ಅಥವಾ ದೆಹಲಿಗೋ ಹೋಗ್ಬೇಕಾದ ಅಗತ್ಯನೇ ಇಲ್ಲ ನೋಡಿ.. ದುಬೈಗೆ ವೀಸಾ ನಮ್ಮ ಕಡೆಯಲ್ಲೆ ದೊರಕುತ್ತೆ ನೋಡಿ..! ಹೌದು ಭಾರತ ಹಾಗೂ ಯುಎಇ(ಯುನೈಟೆಡ್ ಅರಬ್ ಎಮಿರೇಟ್ಸ್) ಸಂಬಂಧ ಇದೀಗ ಮತ್ತಷ್ಟು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ದಕ್ಷಿಣ ಭಾರತದ ಸುಶಿಕ್ಷಿತ ರಾಜ್ಯ ಎಂಬ ಖ್ಯಾತಿ ಗಳಿಸಿರೋ ಕೇರಳದಲ್ಲಿ ಯುಎಇ ಸರ್ಕಾರ ಪ್ರಧಾನ ದೂತವಾಸವನ್ನು ಆರಂಭಿಸಿದೆ. ಇದರ ಸಹಾಯದಿಂದ ಭಾರತ ಹಾಗೂ ಯುಎಇ ನಡುವಿನ ವ್ಯವಹಾರ ಸಂಬಂಧ ಇನ್ನಷ್ಟು ಸುಲಭವಾಗಲಿದೆ. ಅಷ್ಟೇ ಅಲ್ಲ ಮೂರ್ನಾಲ್ಕು ದಿನಗಳ ಕಾಲ ಪ್ರಯಾಣ ಬೆಳೆಸಿ ಮುಂಬೈಗೋ ಅಥವಾ ಡೆಲ್ಲಿಗೋ ಹೋಗಿ ದುಬೈಗೆ ವೀಸಾ ಮಾಡಿಸೋ ಜಂಜಾಟ ಇನ್ನು ದಕ್ಷಿಣ ಭಾರತದ ಜನರಿಗೆ ಇರೋದಿಲ್ಲ. ಇನ್ನು ಯುಎಇನ ಹಲವಾರು ಪ್ರದೇಶಗಳಲ್ಲಿ ಭಾರತೀಯ ಪ್ರಜೆಗಳು ಹೆಚ್ಚಾಗಿ ದುಡಿಯುತ್ತಿದ್ದಾರೆ ಅದರಲ್ಲೂ ಬಹುಪಾಲು ಭಾರತೀಯರಲ್ಲಿ ಕೇರಳಿಗರೇ ಹೆಚ್ಚು. ಈ ಹಿನ್ನಲೆಯಲ್ಲಿ ಯುಎಇ ಸರ್ಕಾರ ಕೇರಳ ರಾಜ್ಯದ ತಿರುವನಂತಪುರಂನಲ್ಲಿ ಪ್ರಧಾನ ದೂತವಾಸವನ್ನು ಬುಧವಾರ ಅಧಿಕೃತವಾಗಿ ಆರಂಭಿಸಿದೆ. ಪ್ರಧಾನ ದೂತವಾಸ ಕಛೇರಿ ಉದ್ಘಟನಾ ಸಮಾರಂಬಕ್ಕೆ ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಉಭಯ ದೇಶಗಳ ಗಣ್ಯರು ಭಾಗಿಯಾಗಿದ್ದರು. ಕೊಚ್ಚಿ ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ದುಬೈ ಕೇರಳ ರಾಜ್ಯದಲ್ಲಿ ಬಹುಪಾಲು ಭಂಡವಾಳವನ್ನು ಹೂಡಿದೆ. ಈ ಹಿಂದೆ ತಿರುವನಂತಪುರಂನಲ್ಲಿ ರಷ್ಯಾ, ಜರ್ಮನಿ, ಮಾಲ್ಡೀವ್ಸ್, ಶ್ರೀಲಂಕಾ ದೂತವಾಸದ ಕಛೇರಿಗಳು ಮಾತ್ರ ಇತ್ತು ಇದೀಗ ಅರಬ್ ದೇಶದ ದೂತವಾಸ ಕಛೇರಿಯೂ ಪ್ರಾರಂಭವಾಗಿದೆ.
Like us on Facebook The New India Times
POPULAR STORIES :
ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!