ತೇಜಸ್ ಎಂಬಾತನ್ನ ಕಿಡ್ನಾಪ್ ಮಾಡಿ 10 ಲಕ್ಷ ರೂ ಗೆ ಬೇಡಿಕೆ ಇಟ್ಟು ಹಣ ಪಡೆದಿದ್ದಾರೆ ಅನ್ನೋ ಗಂಬೀರ ಆರೋಪಕ್ಕೆ ಗುರಿಯಾಗಿದ್ದ ಚಿಕ್ಕಮಗಳೂರು ನಗರದ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳಗಾವಿಯ ಸವದತ್ತಿ ತಾಲೂಕಿನ ಮುರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕನನ್ನು ಅಪಹರಿಸಲು ಕುಮ್ಮಕ್ಕು ನೀಡಿದ್ದ ಮತ್ತು 10 ಲಕ್ಷ ಪಡೆದಿದ್ದಾರೆ ಎಂಬ ಆರೋಪ ಕಲ್ಲಪ್ಪ ಅವರ ಮೇಲೆ ಕೇಳಿ ಬಂದಿತ್ತು. ಪೋಲೀಸ್ ಅಧಿಕಾರಿಯೊಬ್ಬರು ಈ ರೀತಿಯಾಗಿ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ವಿಚಾರ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಹಾಗೂ ಖಂಡನೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಡಿವೈಎಸ್‌ಪಿ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಗಳು ಕೇಳಿ ಬರುತ್ತಿತ್ತು.
ಈ ಬೆಳವಣಿಗೆಗಳಿಂದ ಮನನೊಂದಿದ್ದ ಕಲ್ಲಪ್ಪ ಸೋಮವಾರ ಸಂಜೆ ಪತ್ನಿಯ ಅಜ್ಜಿ ಮನೆಗೆ ಬಂದಿದ್ದರು. ಆದ್ರೆ ಇಂದು ಬೆಳಿಗ್ಗೆ ನೇಣಿ ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಒಟ್ಟಾರೆ ಹಣದಾಸೆಗೆ ಅಧಿಕಾರಿಯೊಬ್ಬರು ತಾವೇ ತಮ್ಮ ಬದುಕುಗೆ ದುರಂತ ಅಂತ್ಯ ಹಾಡಿದ್ದಾರೆ.
- ಶ್ರೀ
POPULAR STORIES :
ಮನುಷ್ಯತ್ವ ಇಲ್ಲದ ಮೃಗನೊಬ್ಬ ಟೆರಸ್ ಮೇಲಿಂದ ನಾಯಿಯನ್ನು ಎಸೆದವರ್ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!
ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!
ನೋಡ್ರಿ ಇಲ್ಲಿದೆ ಕೋಟಿಗೊಬ್ಬ2 ಟ್ರೇಲರ್..! ಒಂದಲ್ಲ ಎರಡೆರಡು ಟ್ರೇಲರ್ ಒಂದು ಕನ್ನಡ ಇನ್ನೊಂದು?