ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ ಸಂಬಂಧ ಎಸ್ಐಟಿ, ಬಿ.ನಾಗೇಂದ್ರ, ಬಸನಗೌಡ ದದ್ದಲ್ ಪಿಎಗಳು ಹೇಳಿಕೆ ಕೊಟ್ಟ ಆಧಾರದಲ್ಲಿ ವಿಚಾರಣೆ ಮಾಡಿದ್ದಾರೆ. ಇವತ್ತೂ ಅವರ ವಿಚಾರಣೆ ಮುಂದುವರೆಯಲಿದೆ. ಈ ಮಧ್ಯೆ ಇಡಿಯವರು ದಾಳಿ ಮಾಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ದಾಳಿ ಬಗ್ಗೆ ಇಡಿಯವರಾಗಲೀ, ಸಿಬಿಐನವರಾಗಲೀ ರಾಜ್ಯ ಸರ್ಕಾರಕ್ಕೆ ತಿಳಿಸಲ್ಲ. ಅವರು ದಾಳಿ ಮಾಡುವ ಕೆಲಸ ಮಾಡಿದ್ದಾರೆ. ಅದು ಅವರ ಕೆಲಸ. ಇದರಿಂದ ಸರ್ಕಾರಕ್ಕೆ ಮುಜುಗರ ಆಗಿದೆ ಅನ್ನುವ ಪ್ರಶ್ನೆ ಬರಲ್ಲ. ಇಡಿ ದಾಳಿಯಿಂದ ವಾಲ್ಮೀಕಿ ನಿಗಮದ ಅವ್ಯವಹಾರದಲ್ಲಿ ನಾಗೇಂದ್ರ ಹಾಗೂ ದದ್ದಲ್ ಅವರ ಪಾತ್ರವಿದೆ ಎಂತ ನಾವು ಊಹೆ ಮಾಡುವುದಕ್ಕೆ ಆಗುವುದಿಲ್ಲ ಎಂದರು.
ED ದಾಳಿಯಿಂದ ಸರ್ಕಾರಕ್ಕೆ ಮುಜುಗರ ಆಗಿದೆ ಅನ್ನುವ ಪ್ರಶ್ನೆ ಬರಲ್ಲ !
Date: