ಮಿಡತೆ ಕಂಡಾಗ ಸಿಕ್ಕಿತು ಗುಡ್ಡದ ಮೇಲಿನ ಪತಂಗ

Date:

ಹಾಡಿನ ಜಾಡು ಹಿಡಿದು….

||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…!‌ ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||

ಭಾಗ-20

ಎಡಕಲ್ಲು ಗುಡ್ಡದ ಮೇಲೆ 

ನಿರ್ದೇಶಕ ಪುಟ್ಟಣ್ಣ ಕಣಗಾಲ್‍ರ ಸಿನಿಮಾಗಳೇ ಹಾಗೆ. ಚಿತ್ರದ ಶೂಟಿಂಗ್ ಎಲ್ಲಾ ಆದ್ಮೇಲೆ ಸನ್ನಿವೇಶಕ್ಕೆ ತಕ್ಕಂತೆ ಹಾಡುಗಳನ್ನ ಬರೆದು ತಗೊಂಡ್ ಬರ್ರಪ್ಪ ಅಂತ ಹೇಳ್ತಾ ಇದ್ರು. ಜೊತೆಗೆ ಇಂತಿಂಥ ಸನ್ನಿವೇಶಗಳಲ್ಲಿ ಸಾಂಗ್ಸ್ ಬರ್ಬೇಕು ಅಂತ ಅವ್ರೇ ಡಿಸೈಡ್ ಮಾಡ್ತಾ ಇದ್ರು. ಇನ್ನು ಎಡಕಲ್ಲು ಗುಡ್ಡದ ಮೇಲೆ ಚಿತ್ರದ ನಿಲ್ಲು ನಿಲ್ಲೇ ಪತಂಗ ಅನ್ನೋ ಹಾಡು ಕೂಡ ಬಹಳ ಅದ್ಬುತವಾಗಿ ಮೂಡಿರುವಂತದ್ದು. ಶ್ರೀಮತಿ ಎನ್ನಿಸಿಕೊಂಡಾಕೆ ಪರಪುರುಷನ ಜೊತೆ ಸ್ನೇಹವನ್ನ ಮಾಡುತ್ತಾಳೆ. ಇದನ್ನ ಗಮನಿಸಿದ ಆಕೆಯ ತಂಗಿ ತಾಳ್ಮೆಯಿಂದ ಹಾಡಿನಲ್ಲಿ ತನ್ನ ಅಕ್ಕನಿಗೆ ಉತ್ತರ ಕೊಡುವುದು ಅದ್ಭುತ ವಾಗಿ ಮೂಡಿಬಂದಿದೆ.


ಇನ್ನು ಈ ಹಾಡು ಬರೆಸಬೇಕು ಅಂತಲೇ ಸಂಗೀತ ನಿರ್ದೇಶಕ ರಂಗರಾವ್, ಸಾಹಿತಿ ವಿಜಯನಾರಸಿಂಹ ಹಾಗೂ ಪುಟ್ಟಣ್ಣ ಒಂದು ಗೆಸ್ಟ್ ಹೌಸ್‍ಗೆ ಹೋಗ್ತಾರೆ. ಆಗ ರಾಂಗಾರಾವ್ ಟ್ಯೂನ್ ನುಡಿಸ್ತಾರೆ. ಪುಟ್ಟಣ್ಣ ಹೇಳ್ತಾರೆ…. ನೋಡೋ ವಿಜಯಾ ಈ ಸಿನ್ಮಾದಲ್ಲಿ ಮದ್ವೆ ಆದ್ಮೇಲೂ ಕೂಡ ಅಕ್ಕ, ಅಡ್ಡದಾರಿ ಹಿಡಿದಿರ್ತಾಳೆ. ಇದನ್ನ ಕಂಡ ತಂಗಿ ಹಾಡಿನಲ್ಲೆ ಅಕ್ಕನಿಗೆ ಬುದ್ದಿ ಮಾತು ಹೇಳಬೇಕು. ಈ ತಪ್ಪು ಕೆಲಸದಿಂದ ಆಚೆ ಬಾ ಎಂದು ಹೇಳಬೇಕು. ಇಂಥ ಸಂದರ್ಭಕ್ಕೆ ತಕ್ಕಂತೆ ಒಂದು ಹಾಡು ಬರೀ ಅಂದ್ರಂತೆ. ಇದೇ ಟೈಮಲ್ಲಿ ವಿಜಯನರಸಿಂಹ ಯೋಚ್ನೇ ಮಾಡ್ತಾ ಇದ್ದಾಗಲೇ ತಟ್ಟನೆ ಕರೆಂಟ್ ಹೊಯಿತು. ಕರೆಂಟ್ ಇಲ್ಲಾ ಅಂದಮೆಲೆ ಮೊಂಬತ್ತಿ ಉರಿಯೊದು ಸಹಜ ಅಲ್ವಾ… ಮೊಂಬತ್ತಿ ಹೊತ್ತಿದಾಗ ಅದರ ಸುತ್ತ ಒಂದು ಮಿಡತೆ ಸುತ್ತಾಡತೊಡಗಿತ್ತು. ಎಷ್ಟೇ ಓಡಿಸಿದ್ರು. ಅದು ಮತ್ತೆ ಅಲ್ಲಿಗೆ ಬರ್ತಾನೆ ಇತ್ತು. ಇದೇನಪ್ಪಾ ಇದು. ಬದುಕಿಕೊಳ್ಳಿ ಅಂತ ದೂರ ತಳ್ಳಿದ್ರು ಮತ್ತೆ ಇಲ್ಲೇ ಬರುತ್ತಲ್ಲಾ ಅಂಥ ಉದ್ಗಾರ ತೆಗೆದ್ರಂತೆ ವಿಜಯನಾರಸಿಂಹ. ಆಗಲೇ ಮೈಂಡ್‍ಗೆ ತಟ್ಟಂತ ಹೊಳೆದದ್ದು. ಮಿಡತೆ ಜಾಗಕ್ಕೆ ಪತಂಗವನ್ನು ಇಮ್ಯಾಜಿನ್ ಮಾಡ್ಕೊಂಡ ವಿಜಯಾ, ನಿಲ್ಲು ನಿಲ್ಲೆ ಪತಂಗಾ ಬೇಡ ಬೇಡ ಬೆಂಕಿಯ ಸಂಗ ಅಂತ ಸಾಲುಗಳನ್ನ ಪೋಣಿಸಿಯೆಬಿಟ್ರು. ಒಂದು ಹೆಣ್ಣಿಗೆ ಬುದ್ದಿ ಮಾತು ಹೇಳುವ ಅದ್ಬುತ ಸಾಲುಗಳು ವಿಜಯನಾರಸಿಂಹ ಅವ್ರ ಲೇಖನಿಯಿಂದ ಮೂಡಿಬಂತು.

-ಅಕ್ಷತಾ

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...