ಸಿದ್ದರಾಮಯ್ಯಗೆ ವರುಣಾ ಕ್ಷೇತ್ರ ಲಕ್ಕಿಯಂತೆ…!

admin
0 Min Read

ತಂದೆ ಸಿದ್ದರಾಮಯ್ಯಗೆ ವರುಣಾ ಕ್ಷೇತ್ರ ಲಕ್ಕಿ, ಅಲ್ಲಿಂದಲೇ ಅವರು ಸ್ಪರ್ಧಿಸಿದರೇ ಒಳಿತು ಎಂದು
ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಅಪ್ಪ ವರುಣಾದಿಂದ ಗೆದ್ದು ಸಿಎಂ ಆದ್ರು. ಹೀಗಾಗಿ ಅವರಿಗೆ ವರುಣಾ ಕ್ಷೇತ್ರ ಲಕ್ಕಿ. ಕೊನೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ವರುಣಾದಿಂದ ಸ್ಪರ್ಧಿಸಬೇಕು ಅನ್ನೋದು ಜನರ ಇಚ್ಛೆ.
ಕೋಲಾರ ಸೇರಿ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಆಹ್ವಾನಿಸುತ್ತಿದ್ದಾರೆ. ಆದ್ರೆ, ಅಪ್ಪ ವರುಣಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ನನ್ನ ಆಸೆಯೂ ಆಗಿದೆ. ವರುಣಾದಿಂದ ಸ್ಪರ್ಧಿಸಿದರೆ ನಾನು ಅವರ ಪರವಾಗಿ ಪ್ರಚಾರ ಕೈಗೊಳ್ಳುತ್ತೇನೆ‌ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ರು.

Share This Article
Leave a Comment