No menu items!
12.4 C
Munich
Wednesday, April 29, 2026

ತಾಲೂಕು ಆಸ್ಪತ್ರೆಯಲ್ಲಿ ಡೇಟ್ ಬಾರ್ ಔಷಧಿ…!

Must read

ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆ ಅವ್ಯವಸ್ಥೆ ಕಂಡು ‘ವೈದ್ಯಾಧಿಕಾರಿಗಳಿಗೆ ನ್ಯಾಯಾಧೀಶರಿಂದ ಫುಲ್ ಕ್ಲಾಸ್’ ತೆಗೆದುಕೊಂಡಿದ್ದಾರೆ. ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಗೆ ಮಂಡ್ಯ ಜಿಲ್ಲಾ ನ್ಯಾಯಾಧೀಶೆ ನಳಿನಿ ಕುಮಾರಿ ದಿಢೀರ್ ಭೇಟಿ ನೀಡಿದ್ರು.

 

ಔಷಧಿ ಸಂಗ್ರಹ ಕೊಠಡಿಯಲ್ಲಿ ಅವಧಿ ಮೀರಿದ ಔಷಧಿ ಕಂಡು ಗರಂ ಆದ ಜಡ್ಜ್, ಯಾಕೆ ಇಷ್ಟು ದಿನ ಎಕ್ಸ್ಪೈರ್ಡ್ ಮೆಡಿಸನ್ ಇಟ್ಟುಕೊಂಡಿದ್ದೀರಿ‌. ಅವಧಿ ಮೀರಿದ್ರೆ ಆ ಔಷಧಿಗಳನ್ನ ಡಿಸ್ಪೋಜ್ ಮಾಡಬೇಕು.

ರೋಗಿಗಳಿಗೆ ನೀಡುವ ಸ್ಥಳದಲ್ಲಿ ಅವಧಿ ಮೀರಿದ ಔಷಧಿ ಇದ್ರೆ ನಿಮ್ಮ ವಿರುದ್ಧ ಕೇಸ್ ಆಗುತ್ತೆ ಎಂದು ಜಡ್ಜ್ ನಳಿನಿ ಕುಮಾರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೂಡಲೇ ಅವಧಿ ಮೀರಿದ ಔಷಧಿಗಳನ್ನ ವಾಪಸ್ ಕಳುಹಿಸುವಂತೆ ಸೂಚನೆ ನೀಡಿದ್ರು. ಜೊತೆಗೆ ಹೆರಿಗೆ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ, ದಾಖಲಾತಿ ವಿಭಾಗಕ್ಕೂ ನ್ಯಾಯಾಧೀಶರು ಭೇಟಿ ನೀಡಿ ಪರಿಶೀಲಿಸಿ ಶುಚಿತ್ವ ಕಾಪಾಡಿಕೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article