ರೌಡಿಗಳು ಪೊಲೀಸರ ಮೇಲೆ ನಡೆಸಿದ ದಾಳಿ, ಪೊಲೀಸ್ ಅಧಿಕಾರಿಯೊಬ್ಬರ ಪತ್ನಿಯ ಮಾಂಗಲ್ಯ ಸರ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಸಮಧಾನ ವ್ಯಕ್ತಪಡಿಸಿರುವ ಗೃಹಸಚಿವ ರಾಮಲಿಂಗರೆಡ್ಡಿ ರೌಡಿಗಳು, ಅತ್ಯಾಚಾರಿಗಳು, ಸರಗಳ್ಳರನ್ನು ಮುಲಾಜಿಲ್ಲದೆ ಎನ್ಕೌಂಟರ್ ಮಾಡಿ ಎಂದು ಪೊಲೀಸರಿಗೆ ಹೇಳಿದ್ದಾರೆ…!
ಕಾನೂನು ಸುವ್ಯವಸ್ಥೆ ಕಾಪಾಡೋದು ನಮ್ಮ ಕರ್ತವ್ಯ.ಅದಕ್ಕಾಗಿಯೇ ಪೊಲೀಸರಿಗೆ ಗನ್ ನೀಡಿರುವುದು. ಅದಿರೋದು ಅಪರಾಧಿಗಳನ್ನು ಶಿಕ್ಷಿಸಲು. ಆಭರಣಗಳಂತೆ ಇಟ್ಟುಕೊಳ್ಳುವುದಕ್ಕಲ್ಲ. ಕ್ರಿಮಿನಲ್ ಗಳನ್ನು ಮಟ್ಟಹಾಕಿ. ಪೊಲೀಸರ ಹಿಂದೆ ನಾನಿರ್ತೀನಿ ಎಂದು ಹೇಳಿದ್ದಾರೆ.