ಯುವತಿಗೆ ಪ್ರೀತಿಸು ಅಂತ ಅಶ್ಲೀಲವಾಗಿ ಮಾತಾಡಿ ಹಿಂಸೆ ನೀಡುತ್ತಿದ್ದ ಯುವಕನ ವಿರುದ್ಧ ಬೆಂಗಳೂರಿನ ಜೆ.ಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ಮೆಸೆಂಜರ್ ಮೂಲಕ ಯುವತಿಗೆ ಕಾಟ ಕೊಡ್ತಿದ್ದ ಶಿವ ಮತ್ತು ಆತನಿಗೆ ಸಹಾಯ ಮಾಡ್ತಿದ್ದ ತ್ಯಾಗರಾಜ್ ಆರೋಪಿಗಳು.
ತನ್ನ ಜೊತೆ ಮಾತಾಡದೇ ಇದ್ರೆ , ಪ್ರೀತಿ ಮಾಡದೇ ಇದ್ರೆ ಕೊಲೆ ಮಾಡೋದಾಗಿ ಬೆದರಿಕೆ ಒಡ್ಡುತ್ತಿದ್ದ ಎಂದು ಜೆ.ಪಿ ನಗರದ ವತ್ಸಲ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರೋ ಯುವತಿ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.