ನೀವು ಫೇಸ್ ಬುಕ್ ಬಳಕೆದಾರರೇ…? ಹಾಗಾದ್ರೆ ಈ ಶಾಕಿಂಗ್ ನ್ಯೂಸ್ ಓದಲೇ ಬೇಕು…!
ಫೇಸ್ ಬುಕ್ ಮಾಹಿತಿ ಸೋರಿಕೆ ಹಗರಣದ ಕುರಿತು ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜುಕರ್ ಬರ್ಗ್ ಕೊನೆಗೂ ಅಂಕಿ ಅಂಶ ಒದಗಿಸಿದ್ದಾರೆ . ವಿಶ್ವದಾದ್ಯಂತ ಒಟ್ಟಾರೆ 8.7 ಕೋಟಿ ಫೇಸ್ ಬುಕ್ ಬಳಕೆದಾರರ ಮಾಹಿತಿ ಸೋರಿಕೆ ಆಗಿರಬಹುದು ಎಂದಿದ್ದಾರೆ. ಇದರಲ್ಲಿ ಭಾರತದ 5.6ಲಕ್ಷ ಬಳಕೆದಾರರ ಮಾಹಿತಿಯೂ ಸೇರಿದೆ ಎಂದು ತಿಳಿದು ಬಂದಿದೆ.

ಅಮೆರಿಕಾದ ಚುನಾವಣೆಯ ವೇಳೆಯಲ್ಲಿ ಪ್ರಚಾರದ ಉದ್ದೇಶಕ್ಕಾಗಿ ಹಾಗೂ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ವಿವಿಧ ಸಮಯದಲ್ಲಿ ಕೇಂಬ್ರಿಜ್ ಅನಾಲಿಟಿಕಾ ಎಂಬ ಕಂಪನಿ ಫೇಸ್ ಬುಕ್ ಬಳಕೆದಾರರ ಮಾಹಿತಿ ಕದ್ದಿದೆ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಇದಕ್ಕೆ ಫೇಸ್ ಬುಕ್ ಕ್ಷಮೆಯಾಚಿಸಿತ್ತು. ಒಟ್ಟಾರೆ 5 ಕೋಟಿ ಜನರ ಮಾಹಿತಿ ಸೋರಿಕೆಯಾಗಿದೆ ಎಂದು ಅಂದಾಜಿಸಿತ್ತು. ಆದರೆ, ಇದೀಗ 8.7ಕೋಟಿ ಜನರ ಮಾಹಿತಿ ಸೋರಿಕೆಯಾಗಿದೆ ಎಂಬ ಮಾಹಿತಿ ಸಿಕ್ಕಿದೆ…!
ಫೇಸ್ ಬುಕ್ ನ ಮೆಸೆಂಜರ್ ಆ್ಯಪ್ ನಲ್ಲಿಯೂ ಇಬ್ಬರು ವ್ಯಕ್ತಿಗಳು ನಡೆಸೋ ಸಂಭಾಷಣೆ ಕೂಡ ಸೋರಿಕೆ ಆಗುತ್ತದೆ ಎಂದು ಹೇಳಲಾಗುತ್ತಿದೆ.




