ಫೇಸ್ ಬುಕ್ ನಲ್ಲಿ ಡೇಟಿಂಗ್ ಮಾಡಬಹುದು…!

Date:

ಕೈಯಲ್ಲೊಂದು‌ ಒಳ್ಳೆಯ ಮೊಬೈಲ್, ಡೇಟಾ ಪ್ಯಾಕ್ ಇದ್ರೆ ಸಾಕು….ಬೆರಳ ತುದಿಯಲ್ಲೇ ಏನ್ ಬೇಕಾದ್ರು ಸಿಗುತ್ತೆ. ಫೇಸ್ ಬುಕ್ ಇಂದು ಹೊಸಬರನ್ನು ಪರಿಚಯ ಮಾಡಿಕೊಂಳ್ಳಲು, ಸ್ನೇಹ-ಪ್ರೀತಿ ಬೆಸೆಯಲು ಕಾರಣವಾಗಿದೆ.‌ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಡೇಟಿಂಗ್ ಅವಕಾಶ ಮಾಡಿಕೊಡಲಿದೆ. ಇದು ಡೇಟಿಂಗ್ ಪ್ರಿಯರಿಗೆ ಸಿಹಿ ಸುದ್ದಿಯಾಗಿದ್ದು ಫೇಸ್ ಬುಕ್ ಇನ್ನೂ ಹತ್ತಿರವಾಗಲಿದೆ.


ಯಸ್,‌ಫೇಸ್ ಬುಕ್ ಡೇಟಿಂಗ್ ಆ್ಯಪ್ ವೊಂದನ್ನು ಲಾಂಚ್ ಮಾಡಲು ಉದ್ದೇಶಿಸಿದೆ. ಡೇಟಿಂಗ್ ಆ್ಯಪ್ ಗಳಲ್ಲಿ ಮುಂಚೂಣಿಯಲ್ಲಿದ್ದ ಟಿಂಡರ್ ಆ್ಯಪ್ ಸ್ಪರ್ಧೆಯೊಡ್ಡಲು ಎಫ್ ಬಿ ಮುಂದಾಗಿದೆ. ಈ ವರ್ಷದ ಕೊನೆಯವೊಳಗೆ ಫೇಸ್ ಬುಕ್ ಡೇಟಿಂಗ್ ಆ್ಯಪ್ ಬರಲಿದೆ.
ಫೇಸ್ ಬುಕ್ ನಲ್ಲಿ ಈ ಆ್ಯಪ್ ಪ್ರತ್ಯೇಕವಾಗಿಯೇ ಇರಲಿದೆಯಂತೆ.ಯಾರ ಜೊತೆ ಡೇಟಿಂಗ್ ನಡೆಸುತ್ತಿದ್ದೀರಿ ಅಥವಾ ಯಾರಿಗೆ ನಿಮ್ಮ ಸಂದೇಶ ತಲುಪಬೇಕು ಎಂಬ ಎಲ್ಲಾ ವಿಚಾರಗಳನ್ನು ಗೌಪ್ಯವಾಗಿ ‌ಇಡಲಿದೆ.


ನಿಮ್ಮ ಮೊದಲ ಹೆಸರಿನಿಂದ ಆ್ಯಪ್ ನಲ್ಲಿ ನಿಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಬಹುದು. ನೀವು ತೆರೆದಿರುವ ಪ್ರೊಫೈಲ್ ಯಾರಿಗೂ ಕಾಣುವುದಿಲ್ಲ. ನೀವು ಯಾರೊಂದಿಗೆ ಡೇಟಿಂಗ್ ನಡೆಸಲು ಇಚ್ಚಿಸಿದ್ದೀರಿ ಅವರಿಗೆ ಮಾತ್ರ ಅದು ಕಾಣುತ್ತದೆ.
ಈ ಆ್ಯಪ್ ನಲ್ಲಿ ನೀವು ನಿಮ್ಮ ಹತ್ತಿರದ ಪಟ್ಟಣಗಳಲ್ಲಿ ನಡೆಯುವ ಕಾರ್ಯಕ್ರಮ ಗಳನ್ನೂ ಬ್ರೌಸ್ ಮಾಡಬಹುದು. ಆ್ಯಪ್ ನಲ್ಲಿ ಅಪ್ ಲೋಡ್ ಮಾಡುವ ಯಾವುದೇ ಮಾಹಿತಿ ಬಹಿರಂಗ ಆಗಲ್ವಂತೆ.
ಆದರೆ ಇವೆಲ್ಲಾ ಎಷ್ಟು ಸುರಕ್ಷಿತ ಅನ್ನೋದು‌ ಪ್ರಶ್ನಿಸಬೇಕಾದ ವಿಷಯವೇ. ಯಾಕಂದ್ರೆ ಇತ್ತೀಚೆಗೆ ಎಫ್ ಬಿ ಡೇಟಾ ಕಳ್ಳತನ ಆಗಿರುವ ಬಗ್ಗೆ ನಿಮ್ಗೂ ಗೊತ್ತಿದೆ ಅಲ್ವಾ?

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...