ಆಕೆ ಮದುವೆಯಾಗಿ ಐದು ವರ್ಷವಾಗಿತ್ತು! ಸಂಸಾರ ನೆಟ್ಟಗೇ ಇತ್ತು, ಆದ್ರೆ ಅವಳ ಲೈಫ್‍ನಲ್ಲಿ ಬಂದ ಫೇಸ್‍ಬುಕ್‍ಗೆಳೆಯ ಅವಳ ಕನಸನ್ನೆಲ್ಲಾ ಹಾಳು ಮಾಡಿಬಿಟ್ಟಿದ್ದ! ಜೊತೆ ತೆಗೆಸಿಕೊಂಡ ಫೋಟೋಗಳನ್ನೇ ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡಿ ಹಾಸಿಗೆಗೆ ಬರುವಂತೆ ಆಹ್ವಾನವಿತ್ತ, ಪೀಡಿಸಿದ! ಕೊನೆಗೆ ಕೊಲೆಯಾಗಿ ಹೋದ! ಫೇಸ್‍ಬುಕ್ ಗೆಳೆತನ ನಂಬಿದ ಆಕೆ ಈಗ ಪರಪ್ಪನ ಅಗ್ರಹಾರ ಸೇರಿದ್ದಾಳೆ!
ಹೌದು, ಅದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನ ಚಂದ್ರನಗರ! ಅಲ್ಲಿನ ನಿವಾಸಿ ಸುಮಾ, ಈಕೆ ಐದು ವರ್ಷದ ಹಿಂದೆ ಬಡಗಿ ರಾಘವೇಂದ್ರನನ್ನು ಮದುವೆಯಾಗಿದ್ದಳು! ವಿವಾಹಿತ ಜೀವನ ನಡೆಸುತ್ತಿರುವ ನಡುವೆ ಫೇಸ್‍ಬುಕ್‍ನಲ್ಲಿ ತಟ್ಟೆಗುಪ್ಪೆ ಗ್ರಾಮದ ಕಿರಣ್ ಎಂಬಾತನ ಪರಿಚಯ ಆಗುತ್ತೆ! ಪರಿಚಯ ಸ್ನೇಹವಾಗುತ್ತೆ! ತುಂಬಾ ಕ್ಲೋಸ್ ಆಗಿ ಬಿಡ್ತಾರೆ! ಫ್ರೆಂಡ್ಸ್ ಅಂತ ಹಾಯ್. ಬಾಯ್ ಎಲ್ಲಾ ಫೇಸ್‍ಬುಕ್ ಮೆಸೆಂಜರ್‍ನಲ್ಲಿ ಇದ್ದಿದ್ರೆ ಚೆನ್ನಾಗಿರ್ತಾ ಇತ್ತೇನೋ?! ಅವಳಿಗೆ ಅದೆಂಥಾ ತೆವಲು ಮೆಟ್ಟಿತ್ತೋ ಅವನ ಜೊತೆ ಮಡಿಕೇರಿ ಟ್ರಿಪ್ ಹೊರಟು ಬಿಟ್ಟಿದ್ಲು! ಫ್ರೆಂಡ್ಸ್ ಜೊತೆ ಹೊರ ಹೋಗೋದು ತಪ್ಪಲ್ಲ, ಗಂಡನಿಗೆ ಹೇಳಿ, ಫ್ರೆಂಡ್ಸ್ ಎಲ್ಲ ಒಟ್ಟಾಗಿ ಅಥವಾ ಫ್ರೆಂಡ್ಸ್ ಫ್ಯಾಮಿಲಿ ಮಂದಿಯಲ್ಲಾ ಸೇರಿ ಟ್ರಿಪ್ ಹೋಗೋದು ಬಿಟ್ಟು ಅದೇಕೇ ಈ ಫೇಸ್‍ಬುಕ್ ಗೆಳೆಯ ಕಿರಣ್ ಜೊತೆ ಮಡಿಕೇರಿಗೆ ಹೋದ್ಲೋ?!
ಸರಿ, ಮಡಿಕೇರಿಗೆ ಹೋಗಿ ಸುತ್ತಿ, ತಿಂದು, ತಿರುಗಿ ಬಂದಿದ್ರೆ ಸಾಕಿತ್ತೇನೋ? ಅದಕ್ಕೂ ಮಿಗಿಲಾಗಿ ಆಕೆ ಫೇಸ್‍ಬುಕ್‍ಗೆಳೆಯನ ಜೊತೆ ಮೊಬೈಲ್‍ನಲ್ಲಿ ಫೋಟೋ ಕ್ಲಕ್ಕಿಸಿಕೊಂಡಿದ್ದಳು! ಹೀಗೆ ಮಡಿಕೇರಿ ನೋಡಿಕೊಂಡು ಬಂದ ಬಳಿಕ ಕಿರಣ್ ತನ್ನ ನೈಜ ರೂಪವನ್ನು ತೋರಿಸ್ತಾನೆ! ಜೊತೆಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಪೀಡಿಸ್ತಾನೆ! ಮಲಗುವಂತೆ ಕಾಟ ಕೊಡ್ತಾನೆ! ಅದಕ್ಕೆ ಸುಮಾ ಒಪ್ಪದಿದ್ದಾಗ ಮಡಿಕೇರಿ ಪ್ರವಾಸದಲ್ಲಿ ತೆಗೆಸಿಕೊಂಡಿದ್ದ ಫೋಟೋ ತೋರಿಸಿ, ನೀನು ಬರದಿದ್ದರೆ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ,ಅಷ್ಟೇ ಅಲ್ಲ, ಆಕೆ ಬರದಿದ್ದಾಗ ಫೇಸ್‍ಬುಕ್‍ಗೆ ತಮ್ಮ ಫೋಟೋವನ್ನು ಹಾಕಿದ್ದಾನೆ!
ಇದರಿಂದ ಸುಮಾ ಒಂಟಿಯಾಗಿ ಎರಡುದಿನಗಳ ಕಾಲ ಮಡಿಕೇರಿಯಲ್ಲಿ ಕಿರಣ್ ಜೊತೆ ಪ್ರವಾಸ ಮಾಡಿದ್ದು, ತನಗೆ ಸುಳ್ಳು ಹೇಳಿ ಅವನೊಡನೆ ಹೋಗಿದ್ದಕ್ಕೆ ಸಹಜವಾಗಿ ಸುಮಾಳ ಗಂಡ ರಾಘವೇಂದ್ರಗೆ ನಖಶಿಖಾಂತ ಉರಿದಿದೆ! ಅದು ಸಹಜ ಬಿಡಿ. ಸರಿ, ಆಮೇಲೆ ಮತ್ತೂ ಪೀಡಿಸುತ್ತಿದ್ದ ಕಿರಣ್‍ಗೆ ಅವನ ಪೋಷಕರೇ ಬುದ್ಧಿ ಹೇಳಿದರೂ ಅವನು ಕೇಳಲಿಲ್ಲ! ನಂತರ ತಾಳುವಷ್ಟು ತಾಳಿದ ರಾಘವೇಂದ್ರ ಮೇ4ರಂದು ತನ್ನ ಗೆಳೆಯರನ್ನು ಮನೆಗೆ ಕರೆಸಿಕೊಂಡು ಹೆಂಡತಿ ಮೂಲಕ ಕಿರಣ್‍ಗೆ ಕರೆಮಾಡಿ, ಬರಮಾಡಿ ಕೊಂಡ! ನಂತರ ಕೊಠಡಿಯಲ್ಲಿ ಕೂಡಿ ಕಟ್ಟಿಹಾಕಿ ಇಷ್ಟಬಂದಂತೆ ಹೊಡೆಯುತ್ತಾರೆ! ಪರಿಣಾಮ, ಕಿರಣ್‍ಗೆ ರಕ್ತಸ್ತ್ರಾವ ಉಂಟಾಗಿ ಪ್ರಜ್ಞಾಹೀನ ಸ್ಥಿತಿ ತಲುಪುತ್ತಾನೆ! ನಂತರ ತಾವೇ ಚಿಕಿತ್ಸೆ ನೀಡ್ತಾರೆ. ಫಲಕಾರಿ ಆಗಲ್ಲ ಅಂತ ಗೊತ್ತಾದಾಗ ಆತನ ಮಾವನಿಗೆ ಕರೆಮಾಡಿ ವಿಷಯ ತಿಳಿಸಿಸ್ತಾರೆ. ಆಮೇಲೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗುತ್ತೆ..! ಒಂದು ತಿಂಗಳು ಸಾವು ಬದುಕಿನ ನಡುವೆ ಹೋರಾಡಿ ಸೋತ ಕಿರಣ್ ಜೂ5ರಂದು ಸಾವನ್ನಪ್ಪಿದ್ದಾನೆ! ಈಗ ಕೊಲೆ ಪ್ರಕರಣದಲ್ಲಿ ಸುಮಾ, ರಾಘವೇಂದ್ರ ದಂಪತಿ ಹಾಗೂ ಅವರಿಗೆ ನೆರವಾದ ಬನಶಂಕರಿ ನಾಗೇಶ್, ರಾಜರಾಜೇಶ್ವರಿ ನಗರದ ಆಂಥೋಣಿ, ಸಾರಕ್ಕಿ ಲತೀಶ್ ಪೊಲೀಸರ ಅತಿಥಿಯಾಗಿದ್ದಾರೆ!
ಗಂಡನಿಗೆ ಯಾಮಾರಿಸಿ, ಫೇಸ್‍ಬುಕ್ ಗೆಳೆಯನ ಜೊತೆ ಮಡಿಕೇರಿ ಸುತ್ತಿದಾಕೆ ಈಗ, ಪರಪ್ಪನ ಅಗ್ರಹಾರದಲ್ಲಿ ಕಾಲಕಳೆಯುವಂತಾಗಿದೆ! ಇದು ಬೇಕಿತ್ತಾ?
POPULAR STORIES :
ರಾಜೀನಾಮೆ ನಂತರ ಮೊದಲಬಾರಿಗೆ ಮೀಡಿಯಾ ಮುಂದೆ ಅನುಪಮಾ ಏನ್ ಹೇಳಿದ್ರು ಗೊತ್ತಾ?!
ಹೇರ್ ಟ್ರಾನ್ಸ್‍ಪ್ಲಾಂಟ್ ಮಾಡಿಸ್ಕೋತೀರಾ..!? ಸಾವು ಗ್ಯಾರಂಟಿ..!! ಹುಷಾರ್..!!?
ದೆಹಲಿಗೆ ಬಾಂಬಿಡ್ತಾನಂತೆ ದಾವೂದ್..! ನರರಾಕ್ಷಸನನ್ನು ಹಿಡಿಯೋ ತಾಕತ್ತಿಲ್ಲವೇ..!?
`ಭಾರತದಿಂದ ಮುಸ್ಲೀಮರನ್ನು ಓಡಿಸಬೇಕು..!?’ ಸಾದ್ವಿ ಪ್ರಾಚಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ #Video
ಅನುಪಮ ಶೆಣೈಗೆ ಬಿಜೆಪಿ ಟಿಕೆಟ್..! ಇದೀಗ ಬಂದ ಸುದ್ದಿ..!
`ಫೇಸ್’ಬುಕ್ ಆಟ ಮುಗಿದಿಲ್ಲವೇ..!? ತೆರೆಮರೆಯಿಂದ ಹೊರಬನ್ನಿ ಮೇಡಂ..!
ಚೀನಾದಲ್ಲಿ ರಂಜಾನ್ ನಿಷೇಧ..! ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಧಾರ..!?
ಪಾಶುಪತಾಸ್ತ್ರ- ಟಿಪ್ಪು ಸುಲ್ತಾನನಿಗೂ ಇದಕ್ಕೂ ಇರುವ ನಂಟೇನು??????
ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!