ನಕಲಿ 'ಹರ್ಬಲ್ ಪೆಟ್ರೋಲ್' ಸಂಶೋಧಕನಿಗೆ 3 ವರ್ಷ ಜೈಲು ಶಿಕ್ಷೆ..!

Date:

ಗಿಡಮೂಲಿಕೆಗಳಿಂದಲೇ ನಾನು ಪೆಟ್ರೋಲ್ ತಯಾರಿಸಬಲ್ಲೆ ಎಂದು ಹೇಳಿಕೊಂಡು ಸಾವಿರಾರು ಜನರನ್ನು ನಂಬಿಸಿದ್ದ ನಕಲಿ ಸಂಶೋಧಕ ರಾಮನ್ ಪಿಳ್ಳೈ ಈಗ ಪೊಲೀಸ್ ಅಥಿತಿಯಾಗಿದ್ದಾನೆ. ಗಿಡಮೂಲಿಕೆಗಳಿಂದಲೇ ಪೆಟ್ರೋಲ್ ತಯಾರಿಸಬಲ್ಲೆ ಎಂದು ಹೇಳುತಾ ರಾತ್ರೋ ರಾತ್ರಿ ಫುಲ್ ಫೇಮಸ್ ಆಗಿದ್ದ ಪಿಳ್ಳೈಗೆ ತಮಿಳುನಾಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮೂರು ವರ್ಷಗಳ ಕಾಲ ಜೈಲುಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ ಹರ್ಬಲ್ ಪೆಟ್ರೋಲ್ ತಯಾರಿಕೆಯಲ್ಲಿ ಈತನಿಗೆ ಸಹಕಾರಿಯಾಗಿದ್ದ ಆರ್.ವೇಣು ದೇವಿ, ಎಸ್. ಚಿನ್ನಸ್ವಾಮಿ, ಆರ್. ರಾಜಶೇಖರನ್, ಹಾಗೂ ಎಸ್.ಕೆ ಭರತ್ ಅವರಿಗೂ ನ್ಯಾಯಾಲಯ ಮೂರು ವರ್ಷಗಳ ಕಾಲ ಜೈಲು ಶೀಕ್ಷೆ ನೀಡಿದೆ.

thequint%2f2016-10%2f377f0653-db71-49b0-b55c-8626f2ab876f%2framar-pillai-1
1995ರ ವೇಳೆಯಲ್ಲಿ ಹರ್ಬಲ್ ಪೆಟ್ರೋಲ್ ಸಂಶೋಧಿಸಿರುವಾಗಿ ಸಖತ್ ಪ್ರಚಾರ ಗಿಟ್ಟಿಸಿಕೊಂಡಿದ್ದ ಈತ ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇಕಾದ ಗಿಡಮೂಲಿಕೆಗಳನ್ನೆಲ್ಲಾ ಹಾಕಿ ನಕಲಿ ಪೆಟ್ರೋಲ್ ಸೃಷ್ಠಿ ಮಾಡಿದ್ದ. ಅಷ್ಟೇ ಅಲ್ದೆ ಈತ ಅದನ್ನು ಕೇವಲ ಐದು ರೂ. ದರದಂತೆ ಮಾರಾಟ ಮಾಡ್ತೀನಿ ಅಂತ ಬೊಗಳೆ ಬೇರೆ ಬಿಟ್ಟಿದ್ದ. ಕನಿಷ್ಠ ಫ್ರೌಡ ಶಾಲೆಯ ಮೆಟ್ಟಿಲೇರದ ಇವನಿಗೆ ಅಂದಿನ ತಮಿಳುನಾಡು ಸಿಎಂ ಕರುಣಾನಿಧಿ ಅವರೇ ಬೆಂಬಲ ನೀಡಿದ್ರು ಅಂದ್ರೆ ವಿಪರ್ಯಾಸವೇ ಸರಿ..! ಪೆಟ್ರೋಲ್ ತಯಾರಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಪೇಟೆಂಟ್ ದೊರತಿದೆಯಾಗಿಯೂ, ತಾನು ತಯಾರಿಸಿದ ಪೆಟ್ರೋಲನ್ನು ಕೇವಲ ಐದು ರೂ. ಗೆ ಮಾರಾಟ ಮಾಡುವುದಾಗಿಯೂ ಪುಕಾರು ಹರಡಿಸಿದ್ದ.

herbal-fuel
ಇನ್ನು ಈತನ ಸಂಶೋಧನೆಯ ಕುರಿತಾಗಿ ಸಂಶಯಗೊಂಡಿದ್ದ ವಿಜ್ಞಾನಿಗಳು ಆತನ ಹರ್ಬಲ್ ಪೆಟ್ರೋಲ್‍ನ್ನು ಪುಣೆಯ ರಸಾಯನ ವಿಜ್ಞಾನ ಸಂಸ್ಥೆಯಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಅಲ್ಲಿಂದ ಡೆಹರಾಡೂನ್ ಪೆಟ್ರೋಲಿಯಂ ಸಂಶೋಧನಾ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಲಾಯಿತು. ಆ ಬಳಿಕವೇ ಈ ನಕಲಿ ಪೆಟ್ರೋಲಿಯಂ ಕೇವಲ ಕಣ್ಕಟ್ಟು ಎಂದು ತಿಳಿದು ಬಂದಿದ್ದು..! ಇದನ್ನು 1999-2000ನೇ ಇಸವಿಯಲ್ಲಿ ಗಂಭೀರವಾಗಿ ತೆಗೆದುಕೊಂಡು ಸರ್ಕಾರ ಸಿಬಿಐ ತನಿಖೆಗೆ ವಹಿಸಿಕೊಟ್ಟಿತು. ಅಲ್ಲದೇ ಇದರ ಹಿಂದೆ ಯಾರ್ಯಾರ ಕೈವಾಡವಿದೆ ಎಂಬ ಮಾಹಿತಿ ತಿಳಿಸುವಂತೆ ಕೋರ್ಟ್ ಸಿಬಿಐಗೆ ಸೂಚನೆ ನೀಡಿತ್ತು. ಸಂಪೂರ್ಣ ತನಿಖೆ ನಡೆಸಿದ ಸಿಬಿಐ ಇದು ನಕಲಿ ಪೆಟ್ರೋಲ್ ಎಂದು ಧೃಢ ಪಡಿಸಿತು. ಈತ ಪೆಟ್ರೋಲಿಯಂ ಉತ್ಪನ್ನಗಳಿಗೆ ಕೆಲವೊಂದು ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿ ಮೋಸ ಮಾಡ್ತಾ ಇದ್ದ ಎಂದು ಕೋರ್ಟ್‍ಗೆ ವರಧಿ ನೀಡಿತು. ಅಲ್ಲದೇ ಇದರ ಹಿಂದೆ ಒಂದು ದೊಡ್ಡ ಗ್ಯಾಂಗ್ ಕೂಡ ಇತ್ತು ಎಂಬುದಾಗಿ ಸಿಬಿಐ ಮೂಲಗಳು ಮಾಹಿತಿ ನೀಡಿತ್ತು.. ತಾನು ತಯಾರಿಸಿದ ನಕಲಿ ಹರ್ಬಲ್ ಪೆಟ್ರೋಲ್ ಮಾರಾಟ ಮಾಡುವುದಕ್ಕಾಗಿಯೇ ಈತ ಏಜೆಂಟ್‍ಗಳನ್ನು ಸೃಷ್ಠಿ ಮಾಡಿಕೊಂಡಿದ್ದನಂತೆ.. ಅದರಿಂದ ಕೋಟ್ಯಾಂತರ ಡೆಪಾಸಿಟ್‍ಗಳನ್ನೂ ಕೂಡ ಮಾಡಿಕೊಂಡಿದ್ದ. ನಕಲಿ ಪೆಟ್ರೋಲಿಯಂಗಳಿಂದಲೇ ಜನರನ್ನು ವಂಚಸಿ ಬರೋಬ್ಬರಿ 2.27 ಕೋಟಿ ಹಣ ಸಂಪಾದನೆ ಮಾಡಿದ್ದ ಎಂದು ಸಿಬಿಐ ತನ್ನ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿತ್ತು. ಇದರ ಆದಾರದ ಮೇಲೆ ತಮಿಳುನಾಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಎಲ್ಲಾ ಐವರು ಆರೋಪಿಗಳಿಗೆ ಮೂರು ವರ್ಷಗಳ ಜೈಲುವಾಸ ಹಾಗೂ ಒಟ್ಟು 30 ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಿದೆ.

Like us on Facebook  The New India Times

POPULAR  STORIES :

ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?

ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!

ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!

ಪ್ರಧಾನಿ ಅಂಗಳಕ್ಕೆ ತಲುಪಿದ ಜಗನ್-ಚಂದ್ರಬಾಬು ಬ್ಲಾಕ್‍ಮನಿ ಫೈಟ್..!

ಇನ್ನು ಕ್ರಿಕೆಟ್ ಮೈದಾನದಲ್ಲಿ 14 ಜನ ಫೀಲ್ಡರ್..!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...