ಫೇಸ್‍ಬುಕ್‍ನಲ್ಲಿ ಗೃಹಣಿಯ ನಕಲಿ ಅಕೌಂಟ್ ತೆರೆದ ಯುವಕ ಅರೆಸ್ಟ್..!

Date:

ವಿವಾಹಿತ ಮಹಿಳೆಯನ್ನು ಆತಿಯಾಗಿ ಪ್ರೀತಿಸಿ, ಆಕೆಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ದೊರೆಯದೇ ಹೋದಾಗ ಗೃಹಣಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಯುವಕ ಈಗ ಪೊಲೀಸರ ಅಥಿತಿಯಾಗಿದ್ದಾನೆ.
ಗೃಹಿಣಿಗೆ ಒನ್ ವೇ ಲವ್ ಮಾಡ್ತಾ ಇದ್ದ ಈ ಹುಚ್ಚು ಯುವಕ ತನ್ನ ಪ್ರೇಮ ನಿವೇಧನೆಗೆ ಆಕೆಯ ಕಡೆಯಿಂದ ಯಾವುದೇ ಉತ್ತರ ದೊರೆಯದೇ ಇದ್ದಾಗ ಗೃಹಣಿಯ ನಕಲಿ ಖಾತೆ ತೆರೆದು ಅದರಲ್ಲಿ ವಿಧ ವಿಧದ ಫೋಟೋಗಳನ್ನು ಹಾಕುತ್ತಿದ್ದ ಎನ್ನಲಾಗಿದೆ. ಫೋಟೋ ಶಾಪ್ ಮೂಲಕ ಮಹಿಳೆಯ ಫೋಟೋವನ್ನು ಎಡಿಟ್ ಮಾಡಿ ಆಕೆಯ ಹೆಸರಿನಲ್ಲೆ ಅಕೌಂಟ್ ಕ್ರಿಯೇಟ್ ಮಾಡಿದ್ದ ಆಸಾಮಿ, ಆಕೆಯ ವಿಭಿನ್ನ ಫೋಟೋಗಳನ್ನು ಅಪ್‍ಡೇಟ್ ಮಾಡ್ತಾ ಇದ್ದ. ಅಷ್ಟೇ ಅಲ್ಲದೇ ಫೋಟೋಗಳಿಗೆ ನಾನಿವತ್ತು ರೆಡ್ ಸ್ಯಾರಿ ಹುಟ್ಟಿದ್ದೇನೆ, ಇಂದು ನಾನು ಹಾಲು ತರಲು ಹೋಗಿದ್ದೆ ಎಂಬ ಸ್ಟೇಟಸ್‍ಗಳನ್ನೂ ಕೂಡ ಹಾಕಲಾಗಿತ್ತು.
ಇದರಿಂದ ಅಲ್ಲಿನ ಏರಿಯಾಗಳಲ್ಲಿ ಈ ಗೃಹಣಿ ಸಿಕ್ಕಾ ಪಟ್ಟೆ ಫೇಮಸ್ ಆಗಿ ಹೋಗಿದ್ಲು. ಈ ವಿಷಯ ತಿಳಿದ ಪತಿ ತನ್ನ ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಆದರೆ ಆಕೆ ನಾನು ಫೇಸ್ಬುಕ್ ಹೋಗ್ಲಿ ಇಂಟರ್‍ನೆಟ್ ಸಹಾ ಬಳಸುತ್ತಿಲ್ಲ ಎಂದು ಹೇಳಿದ್ದಾಳೆ. ತಕ್ಷಣವೇ ನಕಲಿ ಅಕೌಂಟ್ ಬಗ್ಗೆ ಗಮನಕ್ಕೆ ಬಂದ ಪತಿ ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾನೆ. ವಿಚಾರಣೆ ಕೈಗೆತ್ತಿಕೊಂಡ ಪೊಲೀಸರಿಗೆ ಒಂದು ಕಂಪನಿಯ ವೈಫೈ ಬಳಸಿ ಈ ರೀತಿ ಕಾರ್ಯ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆ ಕಂಪನಿಯ 50 ಉದ್ಯೋಗಿಗಳ ಮಾಹಿತಿ ಕಲೆ ಹಾಕಿದಾದ ನಕಲಿ ಅಕೌಂಟ್ ತೆರೆದದ್ದು ಜತಿನ್ ಪರಮಾರ್ ಎಂದು ತಿಳಿದು ಬಂದಿದೆ. ಈ ಯುವಕ ಮಹಿಳೆ ವಾಸಿಸುತ್ತಿದ್ದ ಪ್ರದೇಶದಲ್ಲೇ ವಾಸಿಸುತ್ತಿರುವುದು ಪತ್ತೆಯಾಗಿದ್ದು, ದೂರು ನೀಡಲಾಗಿದ್ದನ್ನು ತಿಳಿದ ಕೂಡಲೇ ಯುವಕ ಆ ನಕಲಿ ಖಾತೆಯನ್ನು ಡಿಲೀಟ್ ಮಾಡಿದ್ದಾನೆ ಎನ್ನಲಾಗಿದೆ. ಇದೀಗ ಆರೋಪಿ ಜತೀನ್ ತಪ್ಪೊಪ್ಪಿಕೊಂಡಿದ್ದು ಪೊಲೀಸ್ ವಶದಲ್ಲಿದ್ದಾನೆ.

Like us on Facebook  The New India Times

POPULAR  STORIES :

ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!

ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?

ಕಾವೇರಿಗಾಗಿ ಮಣ್ಣು ತಿಂದು ವಿನೂತನ ಪ್ರತಿಭಟನೆ..!

ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!

ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...