ಚೈನಾ ಪ್ರಾಡಕ್ಟ್ಸ್ ಅಂದ್ರೆನೇ ನಕಲಿ ಅನ್ನೋದು ಎಲ್ಲರಿಗೂ ಗೊತ್ತಿರೋದೇ. ಆದ್ರೆ ಇದೀಗ ಮತ್ತೊಂದು ಆಘಾತಕಾರಿ ವಿಷಯ ಹೊರಬಿದ್ದಿದೆ. ಅದೇನಂದ್ರೆ ನಕಲಿ ಉತ್ಪನ್ನ ಮಾರಾಟದಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ ಎಂದು ವರದಿಯೊಂದು ಬಹಿರಂಗ ಪಡಿಸಿದೆ.
ಹೌದು ನಕಲಿ ಉತ್ಪನ್ನ ಮಾರಾಟದಲ್ಲಿ ಚೀನಾ ನಂ.1 ಸ್ಥಾನದಲ್ಲಿದ್ದರೆ, ಭಾರತ 5ನೇ ಸ್ಥಾನದಲ್ಲಿದೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ ಮತ್ತು ಯುರೋಪಿನ್ ಒಕ್ಕೂಟದ ಬೌದ್ಧಿಕ ಸಂಪತ್ತು ಕಚೇರಿ ಈ ಅಧ್ಯಯನ ನಡೆಸಿದ್ದು, ನಕಲಿ ಉತ್ಪನ್ನಗಳ ರಫ್ತಿನಲ್ಲಿ ಚೀನಾ, ಟರ್ಕಿ, ಸಿಂಗಾಪುರ, ಥಾಯ್ಲೆಂಡ್ ಮತ್ತು ಭಾರತ ಕ್ರಮವಾಗಿ ಮೊದಲ ಐದು ಸ್ಥಾನ ಪಡೆದುಕೊಂಡಿವೆ.
ಮೊಬೈಲ್, ಹ್ಯಾಂಡ್ ಬ್ಯಾಗ್, ಫರ್ಫ್ಯೂಮ್, ಮೆಷಿನ್‌ನ ಬಿಡಿಭಾಗ, ಪಾದರಕ್ಷೆ ಸೇರಿದಂತೆ ಪ್ರತಿವೊಂದು ವಸ್ತುಗಳನ್ನು ನಕಲಿ ಮಾಡಲಾಗುತ್ತಿದೆ. ಇಂಥ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟ ತಡೆಯಲು ಬಹುತೇಕ ದೇಶಗಳಲ್ಲಿ ಯಾವುದೇ ವ್ಯವಸ್ಥೆ ಇಲ್ಲದೇ ಇರುವುದೇ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಘಟಿತ ಜಾಲ ಬೇರು ಬಿಡಲು ಪ್ರಮುಖ ಕಾರಣ.
ವಿವಿಧ ದೇಶಗಳು ಹೀಗೆ ನಕಲಿ ಉತ್ಪನ್ನಗಳನ್ನು ತಯಾರು ಮಾಡುತ್ತಿರುವುದರಿಂದ ಅವುಗಳ ಮೂಲ ಉತ್ಪಾದಕರಿಗೆ ಸಹಜವಾಗೇ ಭಾರೀ ನಷ್ಟವಾಗುತ್ತಿದೆ. ಹೀಗೆ ನಷ್ಟ ಅನುಭವಿಸುತ್ತಿರುವ ರಾಷ್ಟ್ರಗಳ ಪೈಕಿ ಅಮೆರಿಕ, ಇಟಲಿ, ಫ್ರಾನ್ಸ್, ಸ್ವಿಜರ್ಲೆಂಡ್ ಮತ್ತು ಜಪಾನ್ ಕ್ರಮವಾಗಿ ಮೊದಲ 5 ಸ್ಥಾನ ಪಡೆದುಕೊಂಡಿವೆ.
ಮೇಡ್ ಇನ್ ಚೀನಾ ಅಂದ್ರೆ ಅದು ಡ್ಯೂಪ್ಲಿಕೇಟ್ ಅನ್ನೋ ಮಾತಿತ್ತು. ಇನ್ಮುಂದೆ ಮೇಡ್ ಇನ್ ಇಂಡಿಯಾ ಅಂದ್ರೂ ಅನುಮಾನದ ದೃಷ್ಟಿಯಿಂದಲೇ ನೋಡಬೇಕಾಗತ್ತೆ.
- ಶ್ರೀ
POPULAR STORIES :
ಒಂದು ಚೂರು ಬಿಡದೆ ರೈಲ್ವೆಸ್ಟೇಷನ್ನನ್ನೇ ಕದ್ದೊಯ್ದ ಕಳ್ಳರು..
ಏಡುಕೊಂಡಲವಾಡ ಗೋವಿಂದಾ ಗೋವಿಂದ… ತಿಮ್ಮಪ್ಪನ ಚಿನ್ನವೆಲ್ಲಾ ಮೋದಿ ಯೋಜನೆಗೆ
5 ಸ್ಟಾರ್ ಹೋಟೆಲ್ … ಉಗ್ರವಾದಿಗಳಿಗೆ ಮಾತ್ರ..!
ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!
ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!