ಅವರಿಗೆ ಅರವತೈದು ವರ್ಷ..! ಆದರೂ ದುಡಿದೇ ತಿನ್ನಬೇಕೆಂಬ ಆಸೆ..! ಕೈಲಾದಷ್ಟು ದಿನ ಕೆಲಸ ಮಾಡಿ ಅನ್ನ ತಿನ್ನಬೇಕು ಅನ್ನೋ ಸ್ವಾಭಿಮಾನಿ ಅವರು..! ಸೋಮಾರಿಗಳ ಸಂತೆಯಲ್ಲಿ, ಪುಕ್ಕಟೆ ಕೊಟ್ಟೋರಿಗೆ ಚಪ್ಪಾಳೆ ಹೊಡೆದು ದುಡಿಯದೇ ತಿನ್ತಾ ಇರೋ ಅನೇಕರ ನಡುವೆ ಇವರೊಬ್ಬ ಮಾದರಿ ವ್ಯಕ್ತಿಯಾಗಿ ನಮಗೆ ಕಾಣುತ್ತಾರೆ..!
ಅವರೇ ಮಿಸ್ಟರ್ `ಫಕೀರಪ್ಪ ಜಾದವ್’. ಅವರಿಗೇನೇ ಅವರ ನಿಖರವಾದ ವಯಸ್ಸು ಎಷ್ಟೆಂದು ಗೊತ್ತಿಲ್ಲ..! ಸುಮಾರು 65ರ ಆಸುಪಾಸಿನ ವಯಸ್ಸಿನವ ನಾನು ಅನ್ನುತ್ತಾರೆ..! ಈ ನಮ್ಮ ಕನ್ನಡಿಗೆ ಫಕೀರಪ್ಪ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೀಪದಲ್ಲಿ ನಕಲು ಕೀ ಮಾಡಿಕೊಡ್ತಾ ಇದ್ದಾರೆ..! ಸುಮಾರು 45 ವರ್ಷಗಳಿಂದ ಇದೇ ಕೆಲವನ್ನು ಮಾಡ್ತಾ ಬಂದಿರುವ ಇವರ ಎಡಗಣ್ಣಿನ ದೃಷ್ಟಿ ಅಷ್ಟೇನು ಕಾಣುವುದಿಲ್ಲ..! ಅಪಘಾತವೊಂದರಿಂದಾಗಿ ಇವರ ಬಲಗಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದೆ..! ಅಷ್ಟೇ ಅಲ್ಲದೆ ಬಲ ಭಾಗದ ಕಣ್ಣಿನ ಆಪರೇಷನ್ ಆಗಬೇಕಿದೆ..! ಇಷ್ಟಿದ್ದರೂ ಇವರು ದಿನಾ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಈ ಕೀ ಮಾಡುವ ಕೆಲಸದ ಸಲುವಾಗಿಯೇ ಬಂದು ಹೋಗುತ್ತಿದ್ದಾರೆ..! ಹೆಂಡತಿಯ ಸಾವಿನ ನಂತರ ಇವರೊಬ್ಬರೇ ಹುಬ್ಬಳ್ಳಿಯಲ್ಲಿದ್ದಾರೆ,..! ಇಬ್ಬರು ಮಕ್ಕಳು ಹುಟ್ಟೂರಲ್ಲಿದ್ದಾರಂತೆ..! ಇವರ ಜೊತೆ ನೀವು ಇರಬಹುದಲ್ಲಾ..? ನೀವೇಕೆ ಕಷ್ಟಪಟ್ಟು ಇಂಥಾ ಪರಿಸ್ಥಿತಿಯಲ್ಲಿ ಇಲ್ಲಿತನಕ ಬಂದು ದುಡಿಯುತ್ತೀರಿ ಎಂದು ಕೇಳಿದ್ರೆ ಕೈಲಾದಷ್ಟು ದಿನಾ ದುಡಿದು ತಿನ್ನೊಣ ಅಂತ ಕೆಲಸ ಮಾಡ್ತಾ ಇದ್ದೀನಿ..! ಕೆಲಸ ಮಾಡಲು ಆಗದೇ ಇದ್ದ ಕಾಲಕ್ಕೆ ಮಕ್ಕಳ ಬಳಿ ಹೋಗುವುದು ಇದ್ದೇ ಇದೆಯಲ್ಲಾ ಅಂತ ಹೇಳ್ತಾರೆ..!
ಫ್ರೆಂಡ್ಸ್ ಈ ಸ್ಟೋರಿ, ಇಂಥಾ ಸ್ಟೋರಿಗಳನ್ನು ನಿಮಗೆ ಹೇಳೋ ಉದ್ದೇಶ ಒಂದೇ..ನಿಮ್ಮ ಸುತ್ತಮುತ್ತ, ನಿಮ್ಮವರೇ ದುಡಿಯುವ ವಯಸ್ಸಲ್ಲೂ ಅಪ್ಪ ಅಮ್ಮನಿಗೆ ಹೊರೆಯಾಗಿರಬಹದು..! ಇಂಥವರ ಸ್ಟೋರಿಯನ್ನು ನೀವು ಅವರಿಗೆ ತಿಳಿಸಿದ್ರೆ ಅಂಥಾ ಸೋಮರಿಗಳಲ್ಲಿ ಕೆಲವರಾದ್ರೂ ದುಡಿದು ತಿನ್ತಾರೆ..! ಅಪ್ಪ ಅಮ್ಮಗೆ ದುಡಿಯುವ ವಯಸ್ಸಲ್ಲೂ ಹೊರೆ ಆಗಲ್ಲ ಅನ್ನೋ ಆಸೆ ನಮ್ಮದು..!
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಇವರು ಬೆಂಗಳೂರಿನ ಉಕ್ಕಿನ ಮನುಷ್ಯ..! ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ..!
ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!
ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!
ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!
ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…
ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!
ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!