`ಪ್ಯಾಬ್ಲೋ ಎಮಿಲಿಯೋ ಎಸ್ಕೋಬಾರ್ ಗವಿರಿಯಾ’ ಇಷ್ಟು ದೊಡ್ಡ ಹೆಸರನ್ನಿಟ್ಟುಕೊಂಡ ಈ ವ್ಯಕ್ತಿ ಕೊಲಂಬಿಯಾದ ಅತ್ಯಂತ ಭಯಂಕರ ಡ್ರಗ್ ಡೀಲರ್ ಎಂದು ಗುರುತಿಸಿಕೊಂಡಿದ್ದ. ಆದ್ದರಿಂದ ಈತನನ್ನು ಕಿಂಗ್ ಆಫ್ ಕೊಕೇನ್ ಎಂದು ಕರೆಯಲಾಗುತ್ತಿತ್ತು. ಈತ ಕೊಕೇನನ್ನು ಚಿಕ್ಕ ಚಿಕ್ಕ ಸೂಟ್ ಕೇಸ್ ಗಳಲ್ಲಿಟ್ಟು ಮಾರುತ್ತಿರಲಿಲ್ಲ. ಬದಲಿಗೆ ಟನ್ ಗಟ್ಟಲೇ ಕೊಕೇನನ್ನು ಒಂದೇ ಬಾರಿಗೆ ಮಾರಾಟ ಮಾಡುತ್ತಿದ್ದ. ಇದರಿಂದ ಗವಿರಿಯಾ ಅಪಾರ ಪ್ರಮಾಣದ ಹಣವನ್ನು ಸಂಗ್ರಹಿಸಿದ್ದ. 800ಕ್ಕೂ ಹೆಚ್ಚು ಅರಮನೆಗಳನ್ನು ಕಟ್ಟಿಸಿದ್ದ, ಫುಟ್ಬಾಲ್ ಟೀಮ್ ಖರೀದಿಸುವುದು, ಆಸ್ಪತ್ರೆಗೆ ದಾನ ಮಾಡುವುದು, ಶಾಲೆ, ಆಸ್ಪತ್ರೆ ಕಟ್ಟಿಸುವುದು ಆತನಿಗಿದ್ದ ಒಳ್ಳೆಯ ಬುದ್ದಿಗಳು. ಆದರೂ ಕೂಡಾ ಆತನ ಬಳಿ ಅಪಾರ ಪ್ರಮಾಣದ ಹಣವಿತ್ತು. ಅದನ್ನು ದೇಶದ ವಿವಿಧೆಡೆ ಅಡಗಿಸಿಟ್ಟಿದ್ದ.
ಆದರೆ ಅದೃಷ್ಟ ಅವನಿಗಿರಲಿಲ್ಲ. ಆದ್ದರಿಂದ ಸಿಐಎ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಂಡು ಸಾವನ್ನಪ್ಪಿದ. ಆಗ ಆತ ಸಾವನ್ನಪ್ಪಿದ ಸ್ಥಳದಲ್ಲಿ ಒಂದು ದೊಡ್ಡ ಮೊತ್ತದ ಹಣ ಸಿಕ್ಕಿತೇ ವಿನಃ ಮತ್ತಿನ್ನೇನೂ ಸಿಐಎ ಅಧಿಕಾರಿಗಳಿಗೆ ಸಿಕ್ಕಿರಲಿಲ್ಲ.
ಗವಿರಿಯಾ ಸತ್ತು 23 ವರ್ಷ ಕಳೆದ ಮೇಲೆ ಆತನ ಸಂಪತ್ತು ಸಿಕ್ಕಿದೆ. ಅದೂ ಕೂಡಾ ಕಡುಬಡವನಿಗೆ..! ಯೆಸ್.. 3000 ಡಾಲರ್ ನೀಡಿ ಜಮೀನು ಖರೀದಿಸಿ ಕೃಷಿ ಕಾರ್ಯದಲ್ಲಿ ನಿರತನಾಗಿದ್ದ ಜೋಸ್ ಮರಿನಾ ಕಾರ್ತೋಲೋಸ್ ಎಂಬ ವ್ಯಕ್ತಿಗೆ ಇಂದು ಬಂಪರ್ ಲಾಟರಿ ಹೊಡೆದಿದೆ. ಜಮೀನಿನಲ್ಲಿ ಒಂದು ಬಾರಿ ಗಿಡನೆಡಲೆಂದು ಅಗೆಯುತ್ತಿದ್ದಾಗ ಏನೋ ಸಪ್ಪಳ ಕೇಳಿಸಿದೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮತ್ತೊಮ್ಮೆ ಅಗೆಯಲು ಆರಂಭಿಸಿದಾಗಲೂ ಅದೇ ರೀತಿಯ ಸಪ್ಪಳ ಕೇಳಿದಾಗ ಕುತೂಹಲದಿಂದ ಅದೇ ಜಾಗದಲ್ಲಿ ಚೆನ್ನಾಗಿ ಅಗೆದಾಗ ಆತನ ಕಣ್ಣನ್ನೇ ಆತ ನಂಬಲಾರದಂತಹ ಸ್ಥಿತಿಗೆ ತಲುಪಿದ್ದ. ಏಕೆಂದರೆ ಆ ಸ್ಥಳದಲ್ಲಿ ಅಪಾರ ಪ್ರಮಾಣದ ಹಣ ಕಂಡಿತು.
ಅದು 500 ಡಾಲರ್ ಆಗಿರಲಿಲ್ಲ, 1000 ಡಾಲರ್ ಕೂಡಾ ಆಗಿರಲಿಲ್ಲ, 10000 ಡಾಲರ್ ಕೂಡಾ ಆಗಿರಲಿಲ್ಲ, ಬದಲಿಗೆ 600,000,000 ಡಾಲರ್ ಆಗಿತ್ತು. ಅದನ್ನು ಭಾರತೀಯ ರೂಪಾಯಿಯಲ್ಲಿ ಲೆಕ್ಕ ಹಾಕುವುದಾದರೆ 40020270000.00 ಇಷ್ಟು ಹಣವಾಗುತ್ತದೆ..! ಅಂದರೆ ನಾಲ್ಕು ಲಕ್ಷ ಕೋಟಿಗೂ ಹೆಚ್ಚು..!
ಈ ಹಣವನ್ನು ಜೋಸ್ ಏನು ಮಾಡುತ್ತಾನೋ ಗೊತ್ತಿಲ್ಲ. ಒಂದು ವೇಳೆ ಕೊಲಂಬಿಯಾ ಸರ್ಕಾರ ಈ ಹಣವನ್ನು ಪಡೆದು ಸಮಾಜ ಕಲ್ಯಾಣ ಕಾರ್ಯಗಳಿಗೆ ಬಳಸಬಹುದೇನೋ..? ಅಥವಾ ಅದರಲ್ಲಿ ಒಂದಷ್ಟು ಭಾಗ ಜೋಸ್ ಗೆ ನೀಡಿ ಉಳಿದದ್ದನ್ನು ತನ್ನ ಬೊಕ್ಕಸಕ್ಕೆ ಸೇರಿಸಿಕೊಳ್ಳಬಹುದೇನೋ..? ಮುಂದಾಗುವುದನ್ನು ಇಂದು ಯಾರಾದರೂ ನಿರ್ಧರಿಸಲು ಸಾಧ್ಯವೇ..?
- ರಾಜಶೇಖರ ಜೆ
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ನಿಜವಾದ ಭಾರತೀಯರು ಇಲ್ಲಿದ್ದಾರೆ ನೋಡಿ..! ದೇಶಕ್ಕಾಗಿ ಪ್ರಾಣದ ಹಂಗು ತೊರೆದ ವೀರರಿವರು..!
`ಟೀ’ ಮಾರುತ್ತಿರುವ ಪದವೀಧರ ಸೋದರರ ಕಥೆ..!
ಪ್ರವಾಹದ ಮಧ್ಯೆಯೂ ರಾಜಕೀಯ ಬೇಕಿತ್ತಾ..? ಆಹಾರ ಪೊಟ್ಟಣಗಳ ಮೇಲೆ ಅಮ್ಮ ಸ್ಟಿಕ್ಕರ್ಸ್..!
ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ..!
`ಗ್ರಾಮೀಣ ಜನರಿಗಾಗಿ’ ಕೆಲಸ ಬಿಟ್ಟುಬಂದ ಇಂಜಿನಿಯರ್ಸ್..!
`ಕೊಹಿನೂರು ವಜ್ರ’ ಪಾಕಿಸ್ತಾನದ್ದಂತೆ..! `ಕೊಹಿನೂರು ವಜ್ರ’ದ ಮೇಲೂ ಬಿತ್ತು ಪಾಕ್ ಕಣ್ಣು..!
ಇವರು ನಮ್ಮ ಬೆಂಗಳೂರಿನ ತ್ಯಾಜ್ಯೋಧ್ಯಮಿ..! ಕಸ ಆಯುವಾತನಿಗೆ ವಿಶ್ವಸಂಸ್ಥೆಯಿಂದ ಕರೆ..!