ನ್ಯೂಸ್ ಆ್ಯಂಕರ್ ಒಬ್ಬರು ಇತಿಹಾಸ ನಿರ್ಮಿಸಿದ್ದಾರೆ.ಯುವರಾಜ ಮೊಹಮ್ಮದ್ ಮುಂದಾಳತ್ವದಲ್ಲಿ ಆಧುನಿಕತೆಯತ್ತ ಸಾಗುತ್ತಿರುವ ಸೌದಿ ಅರೇಬಿಯಾದ ಆ್ಯಂಕರ್ ಇತಿಹಾಸ ಸೃಷ್ಠಿಸಿದವರು!
ಸರ್ಕಾರಿ ಸ್ವಾಮ್ಯದ ಚಾನಲ್ 1 ಸುದ್ದಿವಾಹಿನಿಯ ವೇಮ್ ಅಲ್ ಡಕೀಲ್ ಎಂಬ ಮಹಿಳಾ ನ್ಯೂಸ್ ಆ್ಯಂಕರ್ ಮೊದಲ ಬಾರಿಗೆ ರಾತ್ರಿ ನ್ಯೂಸ್ ಓದುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ನಿರೂಪಕಿಯರಿಗೆ ಬೆಳಗಿನ ಸಮಯ ಕಾರ್ಯಕ್ರಮಗಳನ್ನು ನಿರೂಪಿಸಲು ಮಾತ್ರ ಅವಕಾಶವಿತ್ತು.
ರಾತ್ರಿ ನಿರೂಪಿಸುವಂತಿರಲಿಲ್ಲ.ಸಂಜೆ ಮತ್ತು ಪ್ರೈಮ್ ನ್ಯೂಸ್ ಗಳನ್ನು ಪುರುಷರೇ ವಾಚಿಸಬೇಕಿತ್ತು. ಇದಕ್ಕೀಗ ಬ್ರೇಕ್ ಬಿದ್ದಿದ್ದು, ಮಹಿಳಾ ಆ್ಯಂಕರ್ ಗಳೂ ಕೂಡ ರಾತ್ರಿ ಹೊತ್ತು ನ್ಯೂಸ್ ಓದಬಹುದಾಗಿದೆ.