ಹಲವು ಬಾರಿ ನಾವು ಆಗೊಮ್ಮೆ ಈಗೊಮ್ಮೆ ಮಂದ ಬೆಳಕನ್ನು ಹೊರಹೊಮ್ಮಿಸುವ ಮಿಂಚುಹುಳಗಳನ್ನು ಬೇಸಗೆಯ ರಾತ್ರಿ ಹೊತ್ತಿನಲ್ಲಿ ನೋಡಿರಬಹುದು.ಆದ್ರೆಇದ್ಯಾಕೆ ಹೀಗೆ ಎಂದು ನಿಮಗನ್ನಿಸಲಿಲ್ಲವೇ??
ಸಾಮಾನ್ಯವಾಗಿ 2000 ಕ್ಕೂ ಅಧಿಕ ಮಿಂಚುಹುಳಗಳ ತಳಿಗಳಿವೆಯಂತೆ.
ಇವುಗಳಲ್ಲೂ ಕೆಮಿಕಲ್ ಲೋಚಾವಿದೆ ಎಂದು ಹೇಳಬಹುದು.ಹೌದು!ಈ ಹುಳಗಳು ತಮ್ಮ ಶರೀರದಲ್ಲಿ ಒಂದು ವಿಧದ ರಾಸಾಯನಿಕ ವಸ್ತುವನ್ನು ಉತ್ಪಾದಿಸುತ್ತದೆ,ಈ ಕಾರಣದಿಂದಲೇ ಇದು ರಾತ್ರಿ ಹೊತ್ತಿನಲ್ಲಿ ಮಿಂಚುತ್ತದೆ.ಇದನ್ನೆ ಬಯೋ-ಲುಮಿನೆಸೀನ್ ಎಂದು ಹೇಳಲಾಗುತ್ತಿದೆ.ಇದೊಂದು ಲೈಟ್ ಬಲ್ಬನಂತಹ ಪ್ರಕ್ರಿಯೆ ಅಂತೂ ಖಂಡಿತ ಅಲ್ಲ ಯಾಕೆಂದರೆ ಬಲ್ಬ್ ಪ್ರಕಾಶದ ಜೊತೆಯಲ್ಲಿ ಬಿಸಿಯನ್ನು ಉತ್ಪಾದಿಸುತ್ತದೆ ಆದ್ರೆ ಮಿಂಚು ಹುಳಗಳು ತಣ್ಣನೆಯ ಪ್ರಕಾಶವನ್ನು ಹೊರಹಾಕುತ್ತದೆ ಅಷ್ಟೇ.
ಓಕ್ಸಿಜನ್ ನೊಂದಿಗೆ ಕ್ಯಾಲ್ಷಿಯಂ,ಅಡೆನೊಸೈನ್ ಟ್ರೈಫೋಸ್ಫೇಟ್ (ATP)ಹಾಗೂ ಲೂಸಿಫೆರಿನ್ ಲೂಸಿಫೆರೆಸ್ ಇರುವುದರಿಂದ ಲೈಟ್ ಉತ್ಪಾದನೆಯಾಗುತ್ತದೆ.ಅಂದರೆ ಮಿಂಚು ಹುಳದ ದೇಹದಲ್ಲಿ ಎರಡು ಕೆಮಿಕಲ್ ಉತ್ಪಾದನೆಯಾಗುತ್ತದೆ:ಲೂಸಿಫೆರೇಸ್ ಹಾಗೂ ಲೂಸಿಫೆರೇನ್.ಲೂಸಿಫೆರೇನ್ ಎಂಬುದು ಬಿಸಿಯನ್ನು ನಿಯಂತ್ರಿಸುತ್ತದೆ ಹಾಗೂ ವ್ಯವಸ್ಥಿತವಾದ ರೀತಿಯಲ್ಲಿ ಇದು ಪ್ರಕಾಶಿಸುತ್ತದೆ ಆದರೆ ಲೂಸಿಫೆರೇಸ್ ಎಂಬುದು ದೇಹದಲ್ಲುತ್ಪಾದನೆಯಾಗುವ ಕಿಣ್ವ ವಾಗಿದ್ದು ಹೊರಹೊಮ್ಮುವ ಲೈಟ್ ನ್ನು ನಿಯಂತ್ರಿಸುತ್ತದೆ.ATP ಎಂಬುದು ಎಲ್ಲಾ ಜೀವಿಗಳ ದೇಹದಲ್ಲಿರೋ ಒಂದು ರಾಸಾಯನಿಕ ಇದು ಮಿಂಚು ಹುಳಕ್ಕೆ ಎನರ್ಜಿಯನ್ನು ಉತ್ಪಾದಿಸಲು ಸಹಾಯ ಮಾಡುವುದರ ಮೂಲಕ ಬೆಳಕು ಹೊರಹೊಮ್ಮುತ್ತದೆ.
ಅದಾಗ್ಯೂ ವಿಜ್ಝಾನಿಗಳು ಮಿಂಚುಳಗಳ ಮಿಟುಕಿಸುವ ಮಾದರಿಯ ಬಗ್ಗೆ ಏನನ್ನೂ ಖಚಿತವಾಗಿ ಹೇಳಲಿಲ್ಲ.ಇದು ಇನ್ನೂ ಒಂದು ಭೇದಿಸಲಾಗದೇ ಉಳಿದಿರೋ ವಿಷಯ.ಯಾಕಂದ್ರೆ ಅವರಿಗೆ ಈ ಮಾದರಿಯು ಮಿಂಚುಹುಳದ ಶರೀರದಿಂದಲೇ ನಿಯಂತ್ರಿಸಲ್ಪಡುವುದೇ ಅಥವಾ ಓಕ್ಸಿಜನ್ ಸಪ್ಲೈಯಿಂದಲೇ ಎಂದು ತಿಳಿಯುತ್ತಿಲ್ಲ.ಆದ್ರೆ ಈ ಫ್ಲಾಶ್ ನ್ನು ಅವುಗಳು ಯಾಕೆ ಹೊರಹಾಕುತ್ತವೆ ಎಂಬ ವಿಷ್ಯವನ್ನವರು ಕಂಡುಹುಡುಕಿದ್ದಾರೆ.ಹೌದು!ಮಿಂಚು ಹುಳಗಳು ತಮ್ಮ ಸಂಗಾತಿಯನ್ನು ಹುಡುಕಿಕೊಳ್ಳಲು ಮತ್ತು ಅವರ ನಡುವಿನ ಸಂಭಾಷಣೆಗೂ ಅವುಗಳು ಈ ರೀತಿಯಾಗಿ ಮಿಟುಕುತ್ತದಂತೆ.ಅಂದಲ್ಲಿ ಈ ಪ್ರೀತಿ-ಪ್ರೇಮ ಎಲ್ಲಾ ಜೀವಿಗಳಲ್ಲೂ ಇದೆ ಅಂತಾಯ್ತು ನೋಡಿ.
ಮಿಂಚು ಹುಳಗಳನ್ನು ಹಿಡಿದಿಟ್ಟಲ್ಲಿ ಅವುಗಳು ಮಿಟುಕಲಾರವೇ ಎಂಬ ಸಂದೇಹ ನಿಮಗಿದ್ದಲ್ಲಿ ಅದಕ್ಕೆ ಉತ್ತರ ಖಂಡಿತ ಇದು ಸಾಧ್ಯ.ಅವುಗಳು ಮಿಟುಕಬೇಕಾದರೆ ಶಕ್ತಿ ಉತ್ಪಾದನೆಯಾಗಬೇಕು,ಶಕ್ತಿ ಉತ್ಪಾದನೆಗೆ ಅವುಗಳು ಸಂಚರಿಸಬೇಕು ಎಂದು ನಿಮಗನ್ನಿಸಿದಲ್ಲಿ ಇಲ್ಲ ಅವುಗಳು ಮಿಟುಕಬೇಕಾದರೆ ಅವುಗಳು ಸಂಚರಿಸಬೇಕಾಗಿಲ್ಲ ಎಂಬುದನ್ನು ಬಯೋ ಲುಮಿನೆಸೆನ್ ವಿಜ್ಝಾನಿಯಾಗಿರೋ ಸ್ಟೀವನ್ ಹಾಡೋಕ್‍ರವರು ಮೋಂಟರೇ ಬೇ ಅಕ್ವಾರಿಯಂ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ನಡೆದ ಸಂಶೋಧನೆಯಿಂದ ತಿಳಿಸಿದ್ದಾರೆ.
ನಿಮಗಿದಿಷ್ಟು ಮಾಹಿತಿ ಸಾಕಲ್ವೇ? ಇನ್ನೊಮ್ಮೆ ಮಿಂಚುಳ ನೋಡಿದ್ರೆ ಸರ್ವಂ ಕೆಮಿಕಲ್ ಮಯಂ ಅಂದ್ಕೋತೀರಾ??
- ಸ್ವರ್ಣಲತ ಭಟ್
POPULAR STORIES :
ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!
ಸ್ಯಾಮ್ ಸಂಗ್ ಕಂಪನಿಯು ಭೀಕರ ರಹಸ್ಯದ ಬಗ್ಗೆ ಬಾಯ್ಮುಚ್ಕೊಂಡು ತೆಪ್ಪಗಿರೋಕೆ ಕೆಲಸಗಾರರಿಗೆ ಭಾರೀ ಮೊತ್ತ ನೀಡಿತ್ತಂತೆ
ಈ ಹಾಡನ್ನು ಕೇಳಿದವ್ರೆಲ್ಲಾ ಸುಸೈಡ್ ಮಾಡ್ಕೊಂಡ್ರಂತೆ…!
ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!
ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು
ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video