ದುಬೈನಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಮೊಟ್ಟ ಮೋದಲ ಬಾಲಿವುಡ್ ಪಾರ್ಕ್ ಇದೇ ವರ್ಷದ ಅಕ್ಟೋಬರ್‍ನಲ್ಲಿ ಅದ್ಧೂರಿಯಾಗಿ ಅನಾವರಣಗೊಳ್ಳಲಿದ್ದು, ಅದಕ್ಕೆ ಪೂರ್ವ ತಯಾರಿಯಾಗಿ ಬಾಲಿವುಡ್‍ನ ಸ್ಟಾರ್ ಆಕ್ಟರ್‍ಗಳಾದ ಶಾರೂಖ್ ಖಾನ್, ಹೃತಿಕ್ ರೋಷನ್, ಸಲ್ಮಾನ್ ಖಾನ್, ಅಮೀರ್ ಖಾನ್ ಹಾಗೂ ಫರ್ಹಾನ್ ಅಕ್ತರ್‍ರವರು ಈ ಬಾಲಿವುಡ್ ಪಾರ್ಕ್‍ಗೆ ತಮ್ಮಲ್ಲಾದ ಸಹಕಾರವನ್ನು ನೀಡುತ್ತಿದ್ದಾರೆ.
2012ರಲ್ಲಿ ಆರಂಭಗೊಂಡ ಈ ಬಾಲಿವುಡ್ ಪಾರ್ಕ್ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ತೆರೆ ಕಾಣಲಿದ್ದು ಲೈವ್ ಶೋ ಹಾಗೂ ಆಕರ್ಷಕ ಸೆಟ್‍ನಿಂದ ಜನರನ್ನು ರಂಜಿಸಲು ಸಜ್ಜಾಗಿದೆ.
ಈ ಆಕರ್ಷಕ ಬಾಲಿವುಡ್ ಪಾರ್ಕ್‍ನಲ್ಲಿ ಬಾಲಿವುಡ್ ಸ್ಟಾರ್ ಆಕ್ಟರ್‍ಗಳ ಸೂಪರ್ ಹಿಟ್ ಸಿನಿಮಾಗಳಾದ ಶಾರೂಖ್ ಖಾನ್ ಅವರ ‘ಡಾನ್’ ಮತ್ತು ‘ರಾ ಒನ್’ ಸಿನಿಮಾ, ಸಲ್ಮಾನ್‍ರ ‘ದಬಾಂಗ್’, ಅಮೀರ್ ಖಾನ್ ಅವರ ‘ಲಗಾನ್’ ಫರ್ಹಾನ್ ಅವರ ‘ಜಿಂಗಗಿ ನಾ ಮಿಲೇಗಿ ದೊಬಾರಾ’ ಹಾಗೂ ಹೃತಿಕ್ ಅವರ ‘ಕ್ರಿಷ್’ ಸಿನಿಮಾಗಳನ್ನು ವೈವಿಧ್ಯ ರೀತಿಯಲ್ಲಿ ಚಿತ್ರೀಕರಿಸಲಾಗಿದೆ.
ಈ ಕುರಿತು ಮಾತನಾಡಿದ ಬಾಲಿವುಡ್ ಪಾರ್ಕ್ ನಿರ್ಮಾಣದ ಮುಖ್ಯಸ್ಥ ರೀಡ್ ಖಜೂರ್ ಅಲ್ ನುಯಾಮಿ, ವಿಶ್ವದ ಮೊಟ್ಟ ಮೊದಲ ಬಾಲಿವುಡ್ ಪಾರ್ಕ್ ಇದಾಗಿದ್ದು ಕೋಟ್ಯಾಂತರ ಅಭಿಮಾನಿಗಳಿಗಾಗಿಯೇ ಆಕರ್ಷಕವಾಗಿ ವಿನ್ಯಾಸಗೊಳಿಸಿ ಈ ಪಾಕ್‍ನ್ನು ನಿರ್ಮಾಣ ಮಾಡಲಾಗಿದೆ ಎಂದಿದ್ದಾರೆ.
ಈ ಬಾಲಿವುಡ್ ಪಾರ್ಕ್‍ನಲ್ಲಿ ನಾವು ಕೆಲವೊಂದು ಅವಾರ್ಡ್ ವಿನ್ನಿಂಗ್ ಸಿನಿಮಾಗಳನ್ನು ತೆಗೆದುಕೊಳ್ಳಲಾಗಿದ್ದು, ಪ್ರಖ್ಯಾತ ಪ್ರೊಡ್ಯುಸರ್, ನವೀನ ಮಾದರಿಯ ಡಿಸೈನರ್‍ಗಳು, ಕ್ರಿಯೇಟಿವ್ ವ್ರೈಟರ್ ಹಾಗೂ ಡೈರೆಕ್ಟರ್ಸ್ ಟೀಮ್‍ಗಳನ್ನೊಳಗೊಂಡ ಅತ್ಯುತ್ತಮ ಬಾಲಿವುಡ್ ಸಿನಿಮಾಗಳನ್ನು ಈ ಪಾರ್ಕ್‍ನಲ್ಲಿ ತೋರಿಸಲಾಗುತ್ತದೆ ಎಂದು ಜನರಲ್ ಮ್ಯಾನೇಜರ್ ಥೋಮಸ್ ಜೆಲ್ಯುಮ್ ಹೇಳಿದ್ದಾರೆ.
POPULAR STORIES :
ಸುಲಭವಾಗಿ ಸಾಗಿಸಲು ಹೆಣದ ಮೂಳೆ ಮುರಿದು ಮುದ್ದೆ ಮಾಡಿದ್ದರು…!
ಲೈಫ್‍ನಲ್ಲಿ ಹೇಗೆ ಡಿಸಿಪ್ಲಿನ್ ಕಾಪಾಡೋದು,,? ಸ್ವಲ್ಪ ಜಪಾನಿಯರನ್ನ ನೋಡಿ..!
ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!
ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?
ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!
ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!
ಆಹಾರವನ್ನು ಕೈಯಲ್ಲೇ ಸೇವಿಸುವುದು ಉತ್ತಮ ಯಾಕೆ???
ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!
ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..