ದೇಶದ ಮೊದಲ `ಅಂಧರ ಸ್ನೇಹಿ' ರೈಲ್ವೇ ನಿಲ್ದಾಣ..! ಮೈಸೂರು ರೈಲ್ವೇ ನಿಲ್ದಾಣದಲ್ಲೀಗ ಬ್ರೈಲ್ ಲಿಪಿಯಲ್ಲಿ ರೈಲ್ವೇ ವೇಳಾಪಟ್ಟಿ..!

admin
2 Min Read

ಅಂಧರು ಓದಿ ಅರ್ಥಮಾಡಿಕೊಳ್ಳುವ ಲಿಪಿ ಬ್ರೈಲ್. ಈ ಬಗ್ಗೆ ನಿಮಗೆ ಗೊತ್ತಿದೆ. ಈಗ ಅಂಧರಿಗೆ ಅಂತಲೇ ಬ್ರೈಲ್ ಟ್ಯಾಬ್ಲೆಟ್ ಆವಿಷ್ಕಾರಗೊಂಡಿರುವುದೂ ನಿಮಗೆ ಗೊತ್ತಿರಬಹುದು..! ಟೆಕ್ನಾಲಜಿ ಎಷ್ಟೇ ಮುಂದುವರೆದರೂ ದೃಷ್ಟಿಹೀನ ಅದರ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಅನ್ನೋ ಅಪವಾದವನ್ನು ಬ್ರೈಲ್ ಟ್ಯಾಬ್ಲೆಟ್ ದೂರ ಮಾಡಿದೆ. ಸರಿ, ಬ್ರೈಲ್ ಟ್ಯಾಬ್ಲೇಟ್ ಮೂಲಕ ಅಂಧರು ಹೊಸ ತಂತ್ರಜ್ಞಾನವನ್ನೇನೋ ಬಳಸುವಂತಾಗಿದೆ. ಆದರೆ ನಮ್ಮ ಭಾರತದಲ್ಲಿನ ಬಸ್ ಸ್ಟಾಪ್ ಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ ಕಣ್ಣು ಕಾಣದವರು ಬೇರೆಯವರನ್ನೂ ಮಾಹಿತಿಗಾಗಿ ಆಶ್ರಯಿಸಲೇಬೇಕಲ್ಲವೇ..?! ರೈಲ್ವೇ ನಿಲ್ದಾಣಗಳಲ್ಲಿನ ನಕ್ಷೆ ಮತ್ತು ರೈಲುಗಳ ವೇಳಾಪಟ್ಟಿ ಬ್ರೈಲ್ ಲಿಪಿಯಲ್ಲಿದ್ದರೆ ಎಷ್ಟೋ ಅಂಧರಿಗೆ ಅನುಕೂಲ ಆಗುತ್ತದೆ ಅಲ್ಲವೇ..?! ಇಷ್ಟುದಿನ ಭಾರತದ ಯಾವ ಮೂಲೆಯಲ್ಲೂ ಈ `ಅಂಧರ ಸ್ನೇಹಿ’ ರೈಲ್ವೆ ನಿಲ್ದಾಣ ಇರಲಿಲ್ಲ..! ಆದರೆ ಈಗ ನಮ್ಮ ಕರ್ನಾಟಕದ ಮೈಸೂರಿನಲ್ಲೊಂದು `ಅಂಧರ ಸ್ನೇಹಿ’ ರೈಲ್ವೇ ನಿಲ್ದಾಣವನ್ನು ನೋಡಲು ಸಾಧ್ಯವಿದೆ..!
ನಿನ್ನೆ ಅಷ್ಟೇ, ಸಂಸದ ಪ್ರತಾಪ್ ಸಿಂಹನವರು ಈ ಬ್ರೈಲ್ ಲಿಪಿಯಲ್ಲಿರುವ ರೈಲು ವೇಳಾಪಟ್ಟಿಯನ್ನು ಮತ್ತು ಟ್ಯಾಕ್ಟೈಲ್ ಮ್ಯಾಪ್ (ಸ್ಪರ್ಶ ನಕ್ಷೆ)ಯನ್ನು ಉದ್ಘಾಟಿಸಿದ್ದಾರೆ. ಟ್ಯಾಕ್ಟೈಲ್ ಮ್ಯಾಪ್ ಸಹಾಯದಿಂದ ಅಂಧರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕಿರುವ ದೂರವನ್ನು ತಿಳಿಯಬಹುದು. ಪ್ಲಾಟ್ಪಾರ್ಮ್ಸ್, ಕೌಂಟರ್ಸ್, ವಾಶ್ರೂಮ್ , ಶೌಚಾಲಯಗಳು ಮೊದಲಾದವುಗಳನ್ನು ತಿಳಿಯಬಹುದು..! ಈ ಟ್ಯಾಕ್ಟೈಲ್ ಮ್ಯಾಪ್ ಅನ್ನು `ಅನುಪ್ರಯಾಸ್’ ಎಂಬ ಸರ್ಕಾರೇತರ ಸಂಸ್ಥೆಯವರು ತಯಾರಿಸಿದ್ದಾರೆ..! ಅದೇ ರೀತಿ ರೈಲು ವೇಳಾಪಟ್ಟಿಯನ್ನು ಬ್ರೈಲ್ ಲಿಪಿಯಲ್ಲಿರುವ ವೇಳಾಪಟ್ಟಿ ಮೂಲಕ ತಿಳಿಯಲು ಸಾಧ್ಯವಾಗುತ್ತೆ..! ಈ ವ್ಯವಸ್ಥೆ ಮೈಸೂರು ಬಿಟ್ಟರೆ ದೇಶದ ಯಾವ ಭಾಗದಲ್ಲೂ ಇಲ್ಲ..! ಈ ಮೂಲಕ ಮೈಸೂರು ರೈಲ್ವೇ ನಿಲ್ದಾಣ ದೇಶದ ಮೊಟ್ಟಮೊದಲ `ಅಂಧರ ಸ್ನೇಹಿ’ ರೈಲ್ವೇ ನಿಲ್ದಾಣ ಎಂಬ ಕೀರ್ತಿಗೆ ಪಾತ್ರವಾಗಿದೆ.

Contents
  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

ನಮ್ಮ ಕನ್ನಡದ ರಿಯಲ್ ಹೀರೋಗಳಿವರು..! ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿಕೊಳ್ಳಿ..!

ನೂರು ವರ್ಷದ ನಂತರ ಕನ್ನಡ ಹೇಗಿರುತ್ತೆ ಗೊತ್ತಾ..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಅಆಇಈ ಕಲಿಕೆ..!

ನವೆಂಬರ್ ಬಂತು ಅಂದ್ರೆ ಕನ್ನಡದ ರಕ್ತ ಕೊತಕೊತ ಅಂತ ಕುದಿಯುತ್ತೆ..! ನೀವೂ ನವೆಂಬರ್ ಕನ್ನಡಿಗರಾ ಸ್ವಾಮಿ..?

ವೆಲ್ ಕಮ್ ಟು ಸತ್ತವರ ಹೋಟೆಲ್..! ಜಪಾನ್ ನಲ್ಲಿ ನಿರ್ಮಾಣವಾಗಿದೆ ವಿಚಿತ್ರ ಹೋಟೆಲ್

ಇಂಥಾ ಪುಟ್ಟ ಮಕ್ಕಳ ಲೈಫ್ ಬಗ್ಗೆ ಯಾವತ್ತಾದ್ರು ಯೋಚನೆ ಮಾಡಿದ್ದೀವಾ..?!

ಅರಿವಿಲ್ಲದೇ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ ಜೋಕೆ..! ಚೀನಾದಿಂದ ಬರುತ್ತಿವೆ ಪ್ಲಾಸ್ಟಿಕ್ ಮೇಡ್ ತಿನಿಸು

ಚಿಂದಿ ಆಯೋ ವೃದ್ಧನ ಬದುಕು ಬದಲಾಗಿದ್ದು ಹೇಗೆ ಗೊತ್ತಾ..?! ಗೆದ್ದೇ ಗೆಲ್ಲುತ್ತದೆ ಒಳ್ಳೇತನ..!

ಭಿಕ್ಷುಕ ಅವರ ಕಾಲಿಗೆ ಬಿದ್ದ..! ಅವರು ಅವನಿಗೆ `ಸ್ಯಾಂಡ್ವಿಚ್’ ಕೊಟ್ಟರು ಆದರೆ…..?! ಭಿಕ್ಷೆ ಹಾಕೋ ಮೊದಲು ಈ ರಿಯಲ್ ಸ್ಟೋರಿ ಓದಿ

ಹುಡುಗಿಯರು ಹುಡುಗರಲ್ಲಿ `ಯಾವುದನ್ನು’ ಇಷ್ಟಪಡ್ತಾರೆ ಗೊತ್ತಾ..?! ಹುಡಗರಲ್ಲಿ ಏನನ್ನು ನೋಡಿ ಹುಡುಗಿಯರು ಅಟ್ರ್ಯಾಕ್ಟ್ ಆಗ್ತಾರೆ..!?

Share This Article
Leave a Comment