ಬರಲಿದೆ `ಬಲೂನ್ ಇಂಟರ್ನೆಟ್..'! ಹೊಸ ಯೋಜನೆಯಲ್ಲಿ ಭಾರತ ಸರ್ಕಾರದ ಜೊತೆ ಕೈ ಜೋಡಿಸಿದ ಗೂಗಲ್..!

1
79

ಅಂತರ್ಜಾಲ ಲೋಕದ ದೈತ್ಯ ಸರ್ಚ್ ಇಂಜಿನ್ ಗೂಗಲ್, ಸರ್ಕಾರದೊಂದಿಗೆ ಕೈ ಜೋಡಿಸಿದೆ..! ಮಾಹಿತಿ ತಂತ್ರಜ್ಞಾನ ಲೋಕದಲ್ಲಿ ಮತ್ತೊಂದು ಮಹತ್ವದ ಆವಿಷ್ಕಾರಕ್ಕೆ ಭಾರತ ಸರ್ಕಾರ ಮತ್ತು ಗೂಗಲ್ ಸಂಸ್ಥೆ ಪಣತೊಟ್ಟಿವೆ..! ಗೂಗಲ್ – ಸರ್ಕಾರದೊಂದಿಗೆ ಸೇರಿ ಭಾರತದಲ್ಲಿ ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ..! ಆ ಮಹತ್ವಾಕಾಂಕ್ಷೆ ಯೋಜನೆಯ ಬಗ್ಗೆ ಇಲ್ಲಿದೆ ವಿವರ..!
ಯಸ್, ಇಂಟರ್ನೆಟ್ ದಿಗ್ಗಜ ಗೂಗಲ್ ಸರ್ಕಾರದೊಂದಿಗೆ ಸೇರಿ ಒಂದೊಳ್ಳೆ ಪ್ರಾಯೋಗಿಕ ಯೋಜನೆಯನ್ನು ಹಾಕಿಕೊಂಡಿದೆ..! ಆ ಯೋಜನೆಯೇ ಬಲೂನ್ ಇಟರ್ನೆಟ್ ಪ್ರಾಜೆಕ್ಟ್..!
ಈ ಯೋಜನೆಯಂತೆ ಅಂತರ್ಜಾಲವನ್ನು ದೊಡ್ಡದಾದ ಬಲೂನ್ ಮೂಲಕ ಸಂಪರ್ಕಿಸುವುದಾಗಿದೆ..! ಭೂಮಿಯಿಂದ 20 ಕಿಲೋಮೀಟರ್ ಎತ್ತರದಲ್ಲಿ ಬಲೂನ್ ಅಳವಡಿಸಿ.., ಅದರಿಂದ ಅಂತರ್ಜಾಲ ಸೇವೆಗಳನ್ನು ರವಾನಿಸಲಾಗುತ್ತೆ..!
ಅಂದಹಾಗೆ ಈ ಟೆಕ್ನಾಲಜಿ ಇದೇ ಮೊಟ್ಟಮೊದಲ ಪ್ರಯೋಗ ಅಲ್ಲ..! ಇದನ್ನು ಈಗಾಗಗಲೇ ನ್ಯೂಜಿಲ್ಯಾಂಡ್, ಕ್ಯಾಲಿಫೋರ್ನಿಯಾ ಮತ್ತು ಬ್ರೆಜಿಲ್ ಗಳಲ್ಲಿ ಪ್ರಯೋಗಿಸಲಾಗಿದೆ..! ಭಾರತಕ್ಕೆ ಇದು ಹೊಸತೇ..! ಈ ಪ್ರಾಯೋಗಿಕ ಯೋಜನೆಗೆ ಈಗ ಭಾರತದ ಸರ್ಕಾರವೂ ಸಮ್ಮತಿ ನೀಡಿದೆ..! ಗೂಗಲ್, ಬಿಎಸ್ಎನ್ಎಲ್ ಜೊತೆ ಸೇರಿ ಈ ತಂತ್ರಜ್ಞಾನವನ್ನು ಪರೀಕ್ಷಿಸುತ್ತೆ..!
ಈ ಹೊಸ ತಂತ್ರಜ್ಞಾನ 4ಜಿ ಸೇವೆಗಳಿಗೆ ತುಂಬಾ ಅನುಕೂಲಕಾರಿ ಆಗಿದ್ದು, ಮೊಬೈಲ್ ಟವರ್ ಗಳ ಬದಲಿಗೆ ನೇರವಾಗಿ ಸಂಜ್ಞೆಗಳು 4ಜಿ ಮೊಬೈಲೆಗೆ ಸಾಗುವಂತಾಗುತ್ತದೆ..! ಅದೇರೀತಿ ಅಂತರ್ಜಾಲ ಸೇವೆ ದೇಶದ ಹಲವಾರು ಭಾಗಗಳಿಗೆ ಬಹಳಷ್ಟು ವೇಗವಾಗಿ ತಲುಪಲು ಕೂಡ ಸಹಕಾರಿ ಆಗುತ್ತೆ ಎಂದು ಗೂಗಲ್ ಹೇಳ್ತಾ ಇದೆ..! ಗೂಗಲ್ ಪ್ರಕಾರ ಈ ಯೋಜನೆಯಂತೆ ಪ್ರತಿಯೊಂದು ಬಲೂನ್ ಸುತ್ತಲಿನ 40 ಕಿ.ಮೀ ವ್ಯಾಪ್ತಿ ಪ್ರದೇಶಗಳಿಗೆ 4ಜಿ ವೇಗದ ಅಂತರ್ಜಾಲ ಸೇವೆಯನ್ನು ಒದಗಿಸುತ್ತದಂತೆ..! ಈ ಯೋಜನೆ ಯಶಸ್ವಿಯೊಂದಿಗೆ ಭಾರತದ ಹಳ್ಳಿ ಹಳ್ಳಿಗೂ ಅಂತರ್ಜಾಲ ಸಂಪರ್ಕ ಕಲ್ಪಿತವಾಗಲಿ ಅನ್ನೋ ಆಸೆ ಭಾರತೀಯರದ್ದು.

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

ನಮ್ಮ ಕನ್ನಡದ ರಿಯಲ್ ಹೀರೋಗಳಿವರು..! ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿಕೊಳ್ಳಿ..!

ನೂರು ವರ್ಷದ ನಂತರ ಕನ್ನಡ ಹೇಗಿರುತ್ತೆ ಗೊತ್ತಾ..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಅಆಇಈ ಕಲಿಕೆ..!

ನವೆಂಬರ್ ಬಂತು ಅಂದ್ರೆ ಕನ್ನಡದ ರಕ್ತ ಕೊತಕೊತ ಅಂತ ಕುದಿಯುತ್ತೆ..! ನೀವೂ ನವೆಂಬರ್ ಕನ್ನಡಿಗರಾ ಸ್ವಾಮಿ..?

ವೆಲ್ ಕಮ್ ಟು ಸತ್ತವರ ಹೋಟೆಲ್..! ಜಪಾನ್ ನಲ್ಲಿ ನಿರ್ಮಾಣವಾಗಿದೆ ವಿಚಿತ್ರ ಹೋಟೆಲ್

ಇಂಥಾ ಪುಟ್ಟ ಮಕ್ಕಳ ಲೈಫ್ ಬಗ್ಗೆ ಯಾವತ್ತಾದ್ರು ಯೋಚನೆ ಮಾಡಿದ್ದೀವಾ..?!

ಅರಿವಿಲ್ಲದೇ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ ಜೋಕೆ..! ಚೀನಾದಿಂದ ಬರುತ್ತಿವೆ ಪ್ಲಾಸ್ಟಿಕ್ ಮೇಡ್ ತಿನಿಸು

ಚಿಂದಿ ಆಯೋ ವೃದ್ಧನ ಬದುಕು ಬದಲಾಗಿದ್ದು ಹೇಗೆ ಗೊತ್ತಾ..?! ಗೆದ್ದೇ ಗೆಲ್ಲುತ್ತದೆ ಒಳ್ಳೇತನ..!

ಭಿಕ್ಷುಕ ಅವರ ಕಾಲಿಗೆ ಬಿದ್ದ..! ಅವರು ಅವನಿಗೆ `ಸ್ಯಾಂಡ್ವಿಚ್’ ಕೊಟ್ಟರು ಆದರೆ…..?! ಭಿಕ್ಷೆ ಹಾಕೋ ಮೊದಲು ಈ ರಿಯಲ್ ಸ್ಟೋರಿ ಓದಿ

ಹುಡುಗಿಯರು ಹುಡುಗರಲ್ಲಿ `ಯಾವುದನ್ನು’ ಇಷ್ಟಪಡ್ತಾರೆ ಗೊತ್ತಾ..?! ಹುಡಗರಲ್ಲಿ ಏನನ್ನು ನೋಡಿ ಹುಡುಗಿಯರು ಅಟ್ರ್ಯಾಕ್ಟ್ ಆಗ್ತಾರೆ..!?

1 COMMENT

LEAVE A REPLY

Please enter your comment!
Please enter your name here