ಪ್ರಸಿದ್ಧ ಇ-ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ ಯ ಕೆಲವು ಉದ್ಯೋಗಿಗಳಿಗೆ ಶೀಘ್ರದಲ್ಲೇ ಲಕ್ಷಾಧಿಪತಿಗಳಾಗುವ ಯೋಗ ಬಂದಿದೆ!
ಕಂಪನಿಯನ್ನು ವಾಲ್ ಮಾರ್ಟ್ ಸ್ವಾಧೀನಪಡಿಸಿಕೊಂಡಿದ್ದರ ಫಲವಿದು. ಇದರಿಂದ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಕಂಪನಿಯ ಸಿಬ್ಬಂದಿ ಸಿರಿವಂತರಾಗುತ್ತಿದ್ದಾರೆ.
ಫ್ಲಿಪ್ ಕಾರ್ಟ್ ನಲ್ಲಿ ವಾಲ್ ಮಾರ್ಟ್ 1600ಕೋಟಿ ಡಾಲರ್ ಬಂಡವಾಳ ಹೂಡಿದೆ. ಇದೀಗ ಫ್ಲಿಪ್ ಕಾರ್ಟ್, ಉದ್ಯೋಗಿಯ ಷೇರು ಮಾಲೀಕತ್ವ ಯೋಜನೆ ( ಇಎಸ್ ಓಪಿ) ಗಳನ್ನು ನಗದಾಗಿ ಪರಿವರ್ತಿಸಿಕೊಳ್ಳಲು ಅನುಮತಿ ನೀಡಿರುವುದಾಗಿ ತಮ್ಮ ಸಿಬ್ಬಂದಿಗೆ ಪತ್ರ ಬರೆದಿದೆ.
1ಯೂನಿಟ್ ಗೆ 126 ಡಾಲರ್ ನಿಂದ 128 ಡಾಲರ್ (9,074 ರೂನಿಂದ 9,218 ರೂ) ಬೆಲೆಯಲ್ಲಿ ತಮ್ಮ ಷೇರನ್ನು ನಗದನ್ನಾಗಿ ಪರಿವರ್ತಿಸಿಕೊಳ್ಳಲು ಅನುಮತಿ ನೀಡಿದೆ.