ಸೆಕ್ಸ್, ಸೆಕ್ಸ್, ಸೆಕ್ಸ್ ಅಂತ ಕಾಡ್ತಿದ್ದ ಬಾಯ್‍ಫ್ರೆಂಡ್ ಅನ್ನು ಪ್ರಿಯತಮೆ ಕತ್ತುಹಿಸುಕಿ ಕೊಲೆ ಮಾಡಿರೋ ಘಟನೆ ಬೆಂಗಳೂರಲ್ಲಿ ನಡೆದಿದೆ..!
ಮುತ್ತುರಾಜ್ ಕೊಲೆಯಾದವ. ಈತನ ಗೆಳತಿ ಸುನಂದಾ ಕೊಲೆಗಾತಿ. ಖಾಸಗಿ ಬಸ್ ಒಂದರಲ್ಲಿ ಕಂಡೆಕ್ಟರ್ ಆಗಿದ್ದ ಮುತ್ತುರಾಜ್ ಸುನಾಂದಳನ್ನು ಪ್ರೀತಿಸ್ತಾ ಇದ್ದ. ಇವರಿಬ್ಬರೂ ಲೀವ್ ಇನ್ ರಿಲೀಷನ್ ಶಿಪ್ ನಲ್ಲಿದ್ದರಂತೆ…!
ದಿನಾ ರಾತ್ರಿ ಕುಡಿದು ಬರ್ತಿದ್ದ ಮುತ್ತುರಾಜು ಸೆಕ್ಸ್‍ಗೆ ಒತ್ತಾಯ ಮಾಡ್ತಿದ್ದನಂತೆ…! ಇವನ ಸೆಕ್ಸ್ ಹುಚ್ಚು ತಡೆದುಕೊಳ್ಳಲಾಗದೆ ಸುನಂದಾ ಕತ್ತು ಹಿಸುಕಿ ಕೊಲೆಗೈದಿದ್ದಾಳೆ..!
ತನ್ನಿಂದ ಕೊಲೆಯಾದ ಪ್ರಿಯಕರನ ಶವವನ್ನು ಪಕ್ಕದ ರಸ್ತೆಯಲ್ಲಿ ಎಸೆದು, ಮದ್ಯಪಾನದಿಂದ ಸಾವನ್ನಪ್ಪಿದ್ದಾನೆ ಎಂಬ ಕಥೆಕಟ್ಟ ಹೊರಟಿದ್ದಾಳೆ..! ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಮುತ್ತುರಾಜು ಕುಡಿದು ಸತ್ತಿದ್ದಲ್ಲ..! ಉಸಿಗಟ್ಟಿ ಸತ್ತಿರೋದು ಅಂತ ಗೊತ್ತಾಗಿದೆ..! ಆರೋಪಿ ಸುನಂದಾಳನ್ನು ಕೋಣನ ಕುಂಟೆ ಪೊಲೀಸರು ಬಂಧಿಸಿದ್ದಾರೆ.