`ಕಾಡಿಗೆ ಬೆಂಕಿ' ಐವತ್ತು ಸಾವಿರ ಜನರು ಸುಟ್ಟು ಕರಕಲಾದರು..!?

Date:

raaa
ಬಿರು ಬೇಸಿಗೆಗೆ ಕಾಡಿಗೆ ಬೆಂಕಿ ಬೀಳುವುದು ಸಾಮಾನ್ಯ. ಒಣಗಿದ ಹುಲ್ಲು, ಒಣಗಿದ ಪುರಲೆಗಳಿಗೆ ನಿಧಾನವಾಗಿ ಹೊತ್ತಿಕೊಳ್ಳುವ ಬೆಂಕಿ ಕ್ರಮೇಣ ಒಣಗಿದ ಮರಗಳನ್ನು ಆವರಿಸಿ ದೊಡ್ಡಮಟ್ಟದಲ್ಲಿ ಬೆಂಕಿ ರುದ್ರನರ್ತನ ಶುರುವಾಗುತ್ತದೆ. ಉತ್ತರಾಖಂಡದಲ್ಲಿ ಆಗಿದ್ದು ಇದೆ. ಅಲ್ಲಿನ ಕಾಡುಗಳಲ್ಲಿ ಕಾಡ್ಗಿಚ್ಚು ಸರ್ವೇಸಾಮಾನ್ಯ. ಆದರೆ ಹಿಂದೆಲ್ಲಾ ಈ ಬಾರಿಯಷ್ಟು ವ್ಯಾಪಕವಾಗಿರಲಿಲ್ಲ. ಬೆಂಕಿ ಯಾವ ಪರಿ ಕಾಡುಗಳನ್ನು ಆವರಿಸಿತ್ತೆಂದರೇ ಅದನ್ನು ನಿಯಂತ್ರಿಸಲು ಆರು ಸಾವಿರ ಸಿಬ್ಬಂದಿ ಪ್ರಯತ್ನಪಟ್ಟಿದ್ದರು. ಎಲ್ಲವನ್ನೂ ಗಮನಿಸಿದಾಗ ಆರಂಭದಲ್ಲೇ ಮುಂಜಾಗರೂಕತೆ ಕಾಳಜಿಗಳಿದ್ದಿದ್ದರೇ ಸಾವಿರಾರು ಎಕರೆ ಕಾಡುನಾಶವಾಗುವುದನ್ನು ತಪ್ಪಿಸಬಹುದಿತ್ತು. ಸಧ್ಯಕ್ಕೆ ನಾಶವಾಗಿರುವ ಕಾಡಿನ ಬಗ್ಗೆ ಚರ್ಚಿಸುವುದಕ್ಕಿಂತ ಮತ್ತಷ್ಟು ನಾಶವಾಗುತ್ತಿರುವ ಕಾಡನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಆದರೆ ಬೆಂಕಿಯನ್ನು ಆರಿಸಿದಷ್ಟು ಅದು ವ್ಯಾಪಕವಾಗತೊಡಗಿದ್ದೇ ಸುರಿದ ಮಳೆ ನಿಟ್ಟುಸಿರುಬಿಡುವಂತೆ ಮಾಡಿದೆ.

ಜಗತ್ತಿನ ಅತೀದೊಡ್ಡ ಕಾಡ್ಗಿಚ್ಚು ಸಂಭವಿಸಿದ್ದು 1997ರಲ್ಲಿ. ಇಂಡೋನೇಷ್ಯಾದಲ್ಲಿ 20 ಲಕ್ಷ ಎಕರೆ ಕಾಡು ಕಾಡ್ಗಿಚ್ಚಿಗೆ ಭಸ್ಮವಾಗಿತ್ತು. ದಟ್ಟ ಹೊಗೆ ಸಿಂಗಾಪುರ, ಬ್ರೂನಿ, ಥೈಲೆಂಡ್, ವಿಯೆಟ್ನಾಂ, ಫಿಲಿಫಿನ್ಸ್ ನಾದ್ಯಂತ ವ್ಯಾಪಿಸಿಕೊಂಡಿತ್ತು. ಸುಮಾರು 20 ಲಕ್ಷ ಎಕರೆ ವ್ಯಾಪ್ತಿಯ ಅರಣ್ಯ ನಾಶವಾಗಿತ್ತು. ತೀವ್ರ ವಾಯುಮಾಲಿನ್ಯದಿಂದಾಗಿ ಜನ ಜೀವನ ದುಸ್ತರವಾಗಿತ್ತು. 1987 ಚೀನಾದ ಈಶಾನ ಹೆಲಿಂಗಾಜಿಯಾಂಗ್ ಪ್ರಾಂತ್ಯದ ಡ್ಯಾಕ್ಸಿಂಗಾಲಿಂಗ್ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ 24 ಲಕ್ಷ ಎಕರೆ ಅರಣ್ಯ ಸುಟ್ಟುಬೂದಿಯಾಗಿತ್ತು. 200ಕ್ಕೂ ಹೆಚ್ಚು ಮಂದಿ ದುರಂತ ಸಾವಿಗೀಡಾದರು. 50 ಸಾವಿರಕ್ಕೂ ಹೆಚ್ಚು ಮನೆಗಳು ದಹಿಸಿತ್ತು. 2003ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿಗೆ ಎರಡು ಲಕ್ಷದ ಎಂಬತ್ತು ಸಾವಿರ ಎಕರೆ ಕಾಡು ಭಸ್ಮವಾಗಿತ್ತು. ಮೂರು ಸಾವಿರ ಮನೆಗಳು ಸುಟ್ಟು ಭಸ್ಮವಾಗಿದ್ದವು. 15 ಮಂದಿ ಮೃತಪಟ್ಟಿದ್ದರು. ಸುಮಾರು ಮೂರು ತಿಂಗಳ ಕಾಲ ಈ ಬೆಂಕಿ ಉರಿದಿತ್ತು. ಇವತ್ತಿಗೂ ಆ ದುರಂತವನ್ನು ಕೇಡರ್ ಫೈರ್ ಎಂದು ಕರೆಯಲಾಗುತ್ತದೆ. ಹಾಗೆಯೆ 2007ರಲ್ಲಿ ಗ್ರೀಸ್ನ ಬೇಸಿಗೆ ಭಾರೀ ಅನಾಹುತವನ್ನೇ ಸೃಷ್ಟಿಸಿತ್ತು. ಇಲ್ಲಿನ ಫೆಲೊಪ್ಪೊನ್ನೆಸ್ ದ್ವೀಪದ ಬಹುತೇಕ ಭಾಗವನ್ನು ಬೆಂಕಿ ಆಹುತಿ ತೆಗೆದುಕೊಂಡಿತ್ತು. ಇಲ್ಲಿನ ಕಾಡ್ಗಿಚ್ಚಿನಿಂದಾಗಿ 6.70 ಲಕ್ಷ ಎಕರೆ ನಾಶವಾಗಿತ್ತು. 84 ಮಂದಿ ಮೃತಪಟ್ಟಿದ್ದರು. 2009 ಫೆಬ್ರವರಿಯಲ್ಲಿ ಆಸ್ಟೇಲಿಯಾದ ವಿಕ್ಟೋರಿಯಾ ಪ್ರದೇಶದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಲ್ಲಿ 173 ಮಂದಿಯ ಜೀವವನ್ನು ಸುಟ್ಟಿತ್ತು. 11 ಲಕ್ಷ ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಬೆಂಕಿಯ ಪರಿಣಾಮ ಎರಡೇ ದಿನದಲ್ಲಿ ಉಷ್ಣತೆ 38 ಡಿಗ್ರಿ ಸೆಲ್ಸಿಯಸ್ ಗೆ ಏರಿತ್ತು. ಕಡೆಯದಾಗಿ 2010ರಲ್ಲಿ ರಷ್ಯಾದ ಪಶ್ಚಿಮ ಭಾಗದಲ್ಲಿ ಬೇಸಿಗೆಯಲ್ಲಿ ಬಿದ್ದ ಬೆಂಕಿ ವ್ಯಾಪಕ ಹಾನಿ ಸೃಷ್ಟಿಸಿತ್ತು. ಸುಮಾರು 4.80 ಲಕ್ಷ ಎಕರೆ ಪ್ರದೇಶಕ್ಕೆ ಈ ಬೆಂಕಿ ವ್ಯಾಪಿಸಿಕೊಂಡಿತ್ತು. ಪರಿಣಾಮ 50 ಸಾವಿರ ಮಂದಿ ಮೃತಪಟ್ಟಿದ್ದರು. ನಾಲ್ಕು ತಿಂಗಳ ಕಾಲ ಸತತವಾಗಿ ಬೆಂಕಿ ಉರಿದಿತ್ತು. ಇದೀಗ ಉತ್ತರಾಖಂಡದ ಕಾಡ್ಗಿಚ್ಚು ಜಗತ್ತಿನ ಭೀಕರ ಕಾಡ್ಗಿಚ್ಚುಗಳ ಸಾಲಿಗೆ ಸೇರಿಕೊಂಡಿದೆ.

ಉತ್ತರಾಖಂಡದಲ್ಲಿ ಸುಮಾರು ಆರು ಸಾವಿರ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಹೆಲಿಕಾಪ್ಟರ್ ಮೂಲಕ ನೀರು ಹಾಕಿ ಬೆಂಕಿ ಆರಿಸುವ ಪ್ರಯತ್ನವಾಗಿತ್ತು. ದಟ್ಟವಾಗಿ ವ್ಯಾಪಿಸಿದ್ದ ಹೊಗೆಯಿಂದ ಹೆಲಿಕಾಪ್ಟರ್ ವೀವ್ನಿಂದ ಬೆಂಕಿಬಿದ್ದ ಪ್ರದೇಶಗಳನ್ನು ಗುರುತಿಸುವುದು ಕಷ್ಟವಾಗಿತ್ತು. ಕೇಂದ್ರ ಸಕರ್ಾರ ಬೆಂಕಿ ನಂದಿಸಲು ಬೇಕಾದ ಅಗತ್ಯ ಕ್ರಮಗಳಿಗಾಗಿ ಐದುಕೋಟಿ ರೂಪಾಯಿ ನಿಧಿ ಬಿಡುಗಡೆ ಮಾಡಿದೆ. ಕೊಂಚ ಮಟ್ಟಿಗೆ ಶಮನವಾದಂತೆ ಕಂಡುಬರುತ್ತಿರುವ ಬೆಂಕಿ, ಧಿಡೀರ್ ಅಂತ ಹೊತ್ತಿಕೊಂಡು ಕಾಡನ್ನು ನೆಲಸಮ ಮಾಡಿ ಮುನ್ನುಗ್ಗುತ್ತಿತ್ತು. ಉತ್ತರಾಖಂಡದ ಕಾಡುಗಳಲ್ಲಿ ಎಣ್ಣೆಯ ಅಂಶವಿರುವ ಪೈನ್ ಮತ್ತು ನಾಗಸಂಪಿಗೆ ಮರಗಳು ಹೇರಳವಾಗಿರುವುದರಿಂದ ಬೆಂಕಿಯ ಆರ್ಭಟ ತಹಬಂಧಿಗೆ ಬರಲಿಲ್ಲ. ಈ ಮರಗಳು ಬೆಂಕಿಯನ್ನು ಸೋಬಿಯಾಗಿ ಸೆಳೆದುಕೊಳ್ಳುತ್ತವೆ. ಬೆಂಕಿ ಹತ್ತಿಕೊಂಡ ಮೇಲೆ ಆರುವ ಮಾತೇ ಇಲ್ಲ. ಅಕ್ಕಪಕ್ಕವಿರುವ ಮರಗಳಿಗೆ ಬೆಂಕಿಯನ್ನು ಅಂಟಿಸಿ ಇಡೀ ಕಾಡನ್ನು ಅಪೋಶನಕ್ಕೆ ತೆಗೆದುಕೊಳ್ಳುತ್ತದೆ. ನಿಯಂತ್ರಣಕ್ಕೆ ಬರದಿದ್ದರೇ ಇಡೀ ಉತ್ತರಾಖಂಡ ಬೆಂಕಿಯ ಮುಂದೆ ಮಂಡಿಯೂರಲೇಬೇಕು..! ಉತ್ತರಾಖಂಡ, ಜಮ್ಮು-ಕಾಶ್ಮೀರದ ಕಾಡುಗಳನ್ನು ಬೆಂಕಿ ದಹಿಸುತ್ತದೆ ಎನ್ನುವುದೇ ಅಚ್ಚರಿಗೆ ಕಾರಣವಾಗಿದೆ. ಏಕೆಂದರೇ ಉತ್ತರಭಾರತದ ಈ ರಾಜ್ಯಗಳಲ್ಲಿ ಬಹುತೇಕ ಶೀತಲ ವಾತಾವರಣವಿರುತ್ತದೆ. ತಾಪಮಾನದ ಎಫೆಕ್ಟ್ ಈ ರಾಜ್ಯಗಳನ್ನು ಅಷ್ಟಾಗಿ ಬಾಧಿಸುವುದಿಲ್ಲ. ಈ ಹಿಂದೆಯೂ ಈ ಕಾಡುಗಳಲ್ಲಿ ಬೆಂಕಿಯ ಆಟ ನಡೆದಿದ್ದರೂ ಅದು ಆರಿಸುವಷ್ಟರ ಮಟ್ಟಿಗೆ ಸಾಮಾನ್ಯವಾಗಿತ್ತು. ಈ ಬಾರಿ ಯಾವುದೇ ಪ್ರಯತ್ನಗಳಿಗೂ ಜಗ್ಗದೇ ಮುನ್ನುಗ್ಗಿತ್ತು. ಸರ್ಕಾರದ ಪ್ರಯತ್ನಗಳು ಶರಣಾಗುವಂತೆ ಮಾಡಿತ್ತು.

ಉತ್ತರಾಖಂಡದಲ್ಲಿ ಈ ಪರಿಯಾಗಿ ಕಾಡ್ಗಿಚ್ಚು ಆತಂಕವನ್ನುಂಟು ಮಾಡುತ್ತಿರುವುದರ ಹಿಂದೆ ಪ್ರಕೃತಿಯ ಸಹಜತೆಗಿಂತ ಟಿಂಬರ್ ಮಾಫಿಯಾದ ಹಕೀಕತ್ತು ಅಡಗಿದೆ ಎನ್ನಲಾಗುತ್ತಿದೆ. ಉತ್ತರಾ ಭಾರತದ ಕಾಡುಗಳು ಹೆಚ್ಚು ಸಂಪದ್ಭರಿತವಾಗಿವೆ. ಬಹುಶಃ ಆ ಕಾರಣಕ್ಕೆ ಟಿಂಬರ್ ಮಾಫಿಯಾ ಅಲ್ಲಿ ಹೆಚ್ಚು ಕಣ್ಣಿಡುತ್ತದೆ. ಅವರಿಗೆ ಸ್ಥಳೀಯರು ಸಾಥ್ ಕೊಡುತ್ತಾರೆ. ಅಷ್ಟು ಮಾತ್ರವಲ್ಲ, ಅರಣ್ಯ ಇಲಾಖೆಯವರ ದುರಾಸೆಗಳ ಪೂರ್ಣಲಾಭ ಪಡೆದುಕೊಳ್ಳುತ್ತಾರೆ. ಅವರು ಲೂಟಿಕೋರರು. ದೇಶದ ಸಂಪತ್ತನ್ನು ಲೂಟಿ ಮಾಡಿ ಬೊಕ್ಕಸ ತುಂಬಿಕೊಳ್ಳುವುದೇ ಅವರ ವೃತ್ತಿ, ಅಜನ್ಮಸಿದ್ದ ಹಕ್ಕು. ಅದಕ್ಕಾಗಿ ಮೊದಲು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಸರ್ಕಾರದ ಅನ್ನ ತಿನ್ನುವವರ ದೋಸ್ತಿ ಮಾಡಿಕೊಳ್ಳುತ್ತಾರೆ. ಅವರಿಗಿಷ್ಟು ಬೆಂಡು ಬತ್ತಾಸು ತಿನ್ನಿಸಿ ಲೂಟಿ ಮಾಡುತ್ತಾರೆ. ಉತ್ತಭಾರತದ ಕಡೆ ಟಿಂಬರ್ ಮಾಫಿಯಾದ ಮಂದಿ ಅರಣ್ಯ ಇಲಾಖೆ ಜೊತೆ ಡೀಲ್ ಮಾಡಿಕೊಂಡು ಕಾಡಿನ ಬುಡಕ್ಕೆ ಕೊಡಲಿ ಇಡುತ್ತಾರೆ. ಕದಿಯುವುದರಲ್ಲೂ ಕೆಲವು ಚಾಣಾಕ್ಷ ನಡೆಗಳಿರುತ್ತವೆ. ಹಸಿಹಸಿ ಮರಗಳನ್ನು ಕಡಿದು ಸಾಗಿಸುವುದು ಕೊಂಚ ರಿಸ್ಕು. ಅದೇನೆ ಕಮಿಂಟ್ಮೆಂಟ್ಗಳಿದ್ದರೂ ತೀರಾ ರಿಸ್ಕ್ ತೆಗೆದುಕೊಳ್ಳಲು ಯಾರೂ ತಯಾರಿರುವುದಿಲ್ಲ. ಹಾಗಾಗಿ ಮಾಫಿಯಾ ಮಂದಿಯ ಜೊತೆ ಸರ್ಕಾರದ ಲಂಚಪುತ್ರರು ಒಪ್ಪಂದಕ್ಕೆ ಬಂದಿರುತ್ತಾರೆ. ಒಪ್ಪಂದದ ಪ್ರಕಾರ ಸ್ಥಳೀಯ ಕೆಲ ಹರಾಮಿಗಳ ಜೊತೆ ಮೀಟಿಂಗ್ ನಡೆಸುತ್ತಾರೆ. ಮರಗಳಿಗೆ ಅರೆಬರೆ ಕೊಡಲಿ ಏಟುಕೊಟ್ಟು ಮರಗಳನ್ನು ಸಾಯಿಸುತ್ತಾರೆ. ಸತ್ತಮರ ಒಣಗಿದಾಗ ಅದನ್ನು ಕಡಿದು, ಕದ್ದು ಸಾಗಿಸಲಾಗುತ್ತದೆ.

ಒಂದುವೇಳೆ ಅಲ್ಲೆಲ್ಲೋ ಒಬ್ಬಿಬ್ಬರು ಪ್ರಾಮಾಣಿಕ ಅಧಿಕಾರಿಗಳಿದ್ದರೇ ಒಣಗಿದ ಮರದ ಸಬೂಬು ಹೇಳಿ, ಹೇಗೋ ಬಚಾವಾಗುವ ಪ್ರಯತ್ನವಾಗುತ್ತದೆ. ಇದು ನಿರಂತರವಾದ, ಸೇಫಾದ ಅಡ್ಡದಾರಿಯಾಗಿರುವುದರಿಂದ ಟಿಂಬರ್ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ. ಉತ್ತರಾಭಾರತದಲ್ಲೂ ಆಗುತ್ತಿದ್ದದ್ದು ಇದೇ ರೀತಿಯ ಬೆಳವಣಿಗೆ. ಟಿಂಬರ್ ಮಾಫಿಯಾದ ಮಂದಿ ಸ್ಥಳೀಯರ ಜೊತೆ ಡೀಲ್ ಮಾಡಿಕೊಂಡು ಮರಗಳಿಗೆ ಕೊಡಲಿ ಏಟುಕೊಟ್ಟು ಮರಗಳನ್ನು ಒಣಗಿಸಿ ಸಾಗಿಸುವ ಪ್ರಕ್ರಿಯೆ ನಡೆದಿತ್ತು. ಕಾಡಿಗೆ ಕಾಡೇ ಬಹುತೇಕ ಒಣಗಿದ ಮರಗಳು, ಅದರ ಜೊತೆಗೆ ಎಣ್ಣೆಯ ಅಂಶವಿರುವ ಮರಗಳು- ಎಲ್ಲಾ ಸೇರಿ ಕಾಡ್ಗಿಚ್ಚಿನ ಅಟ್ಟಹಾಸಕ್ಕೆ ಕಾರಣವಾಗಿತ್ತು. ಇಷ್ಟು ಮಾತ್ರವಲ್ಲ. ಟಿಂಬರ್ ಮಾಫಿಯಾದ ಇನ್ನೊಂದು ಅಜೆಂಡಾವೂ ಇದೆ. ಬೆಂಕಿಯಲ್ಲಿ ಅರೆಬರೆ ಸುಟ್ಟ ಮರಗಳು ಲೀಗಲ್ ಆಗಿಯೇ ಕಡಿಮೆ ಬೆಲೆಗೆ ಸಿಗುತ್ತವೆ. ಹಾಗಾಗಿ ಮರಗಳಿಗಾಗಿ ಸ್ಥಳೀಯರ ಜೊತೆ ಸೇರಿಕೊಂಡು ಖುದ್ದು ಕಾಡಿಗೆ ಬೆಂಕಿಯಿಡುವ ಕೆಲಸವನ್ನು ಮಾಡುತ್ತಾರೆ. ಆ ಮೂಲಕ ಭೂರಿಬೋಜನ ಮಾಡುವ ಕುತಂತ್ರಗಳನ್ನು ಮಾಡುತ್ತಾರೆ. ಕದ್ದ ಮಾಲನ್ನು ಮೊದಲೇ ಸಾಗಿಸಿ ಸೇಫಾದ ಜಾಗದಲ್ಲಿಟ್ಟು ಆನಂತರ ಇಂತಹ ಕೃತ್ಯಗಳನ್ನು ಮಾಡುತ್ತಾರೆ.ಹಾಗೆಯೇ ಒಣಗಿದ ಹುಲ್ಲುಗಳಿಗೆ ಬೆಂಕಿಯಿಟ್ಟರೇ ಮುಂದಿನ ಅವಧಿಯಲ್ಲಿ ಹೇರಳವಾಗಿ ಹುಲ್ಲಿನ ಫಸಲು ಬರುತ್ತದೆ ಎಂಬ ನಂಬಿಕೆ ಕಾಡುಬದಿಯ ಜನರಿಗಿದೆ. ಹಾಗಾಗಿ ಒಣಗಿದ ಹುಲ್ಲುಗಳಿಗೆ ಅನಾಮತ್ತು ಬೆಂಕಿಯಿಟ್ಟುಬಿಡುತ್ತಾರೆ. ಇವತ್ತು ಉತ್ತರಾದ ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಚಾಚಿಕೊಳ್ಳಲು ಇದೂ ಕಾರಣವಿರಬಹುದು ಎನ್ನಲಾಗಿದೆ. ಆದರೆ ನಿಚ್ಚಳವಾಗಿ ಇದೇ ಕಾರಣದಿಂದ ಅನಾಹುತ ಸಂಭವಿಸಿರಬಹುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ಸ್ಪಷ್ಟಪಡಿಸುತ್ತಿಲ್ಲ. ಉತ್ತರಾಖಂಡದ ಕಾಡ್ಗಿಚ್ಚಿನ ಪರಮಾವಧಿ ನೋಡಿದ್ರೇ ಅದು ಪ್ರಕೃತಿ ಸಹಜವಾದ ವಿಕೋಪವಲ್ಲ. ಬದಲಾಗಿ ಬಲವಂತವಾಗಿ ಕಾಡಿಗೆ ಬೆಂಕಿಯಿಟ್ಟಿದ್ದು ಅತ್ಯಂತ ಸ್ಪಷ್ಟವಾಗುತ್ತದೆ. ದುಡ್ಡಿಗಾಗಿ ಇಂಥ ಹೀನಾ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಸ್ಥಳೀಯರಿಗೆ ಇವು ಅಪಾಯಕಾರಿ ಎಂಬುದರ ಅರಿವಿಲ್ಲ ಎನ್ನುವುದೇ ಬೇಸರದ ಸಂಗತಿ. ಆದರೆ ಅವರದ್ದೇ ತಪ್ಪಿಗೆ ಉತ್ತರಾಖಂಡದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಇಬ್ಬರು ಮಕ್ಕಳು, ಒಬ್ಬರು ಮಹಿಳೆ ಸೇರಿದ್ದಾರೆ. ವ್ಯಾಪಕ ಹೊಗೆ, ಧಗೆಯಿಂದ ಮತ್ತಷ್ಟು ಸಾವುನೋವಿನ ವರದಿಗಳು ಬರಬೇಕಿದೆ. ಪ್ರಕೃತಿಯನ್ನು ಕೆಣಕುವ ಮನುಷ್ಯನ ಸ್ವಯಂಕೃತಪರಾಧಗಳಿಗೆ ಪ್ರಕೃತಿ ಸೂಕ್ತವಾದ ಶಿಕ್ಷೆಯನ್ನೇ ಕೊಡುತ್ತಿದೆ ಎಂದರೇ ತಪ್ಪಾಗುವುದಿಲ್ಲ. ಏನೇ ಆದರೂ, ಪ್ರಕೃತಿ ಎಷ್ಟು ಅಂತ ಮನುಷ್ಯನ ದೌರ್ಜನ್ಯಗಳನ್ನು ಸಹಿಸಿಕೊಳ್ಳುತ್ತೆ ಹೇಳಿ.

ಇವುಗಳ ಜೊತೆಗೆ ಕಾಂಕ್ರಿಟ್ ಕಾಡನ್ನು ನಿರ್ಮಿಸಲು ಬಿಲ್ಡರ್ಗಳು ಮರಗಳನ್ನು ಕಡಿಯುವ ಪ್ರಕ್ರಿಯೆ ಇದೆ. ಇದರಿಂದ ತಾಪಮಾನದ ಬೇಗೆ ನೇರವಾಗಿ ತಾಕಿ ಬೆಂಕಿ ಹೊತ್ತಿಕೊಳ್ಳುತ್ತದೆ. ಹಾಗೆಯೇ ಮರಗಳನ್ನು ಕತ್ತರಿಸುವುದಕ್ಕಿಂತ ಬೆಂಕಿಯಿಟ್ಟು ನಾಶಮಾಡುವ ಪ್ರಯತ್ನಗಳೂ ಆಗುತ್ತವೆ. ಇವೆಲ್ಲವೂ ಕಾಡ್ಗಿಚ್ಚಿನ ಅಟ್ಟಹಾಸಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಉತ್ತರಾಖಂಡದ ಕುಮಾನ್ ಹಾಗೂ ಗರ್ವಾಲ್ ಅರಣ್ಯಪ್ರದೇಶಗಳಲ್ಲಿ ಕಾಡ್ಗಿಚ್ಚು ಸಹಜವಾಗಿ ಸಂಭವಿಸುತ್ತಿತ್ತು. ಆದರೆ ಈ ಬಾರಿ ಅದು ನಾಲ್ಕುಪಟ್ಟು ಹೆಚ್ಚಾಗಿದೆ. ದೊಡ್ಡಮಟ್ಟದ ಆತಂಕವನ್ನು ಸೃಷ್ಟಿಸಿರುವ ಉತ್ತರಾದ ಕಾಡ್ಗಿಚ್ಚಿನ ಹಿಂದೆ ಕಿಡಿಗೇಡಿಗಳ ಕೃತ್ಯವಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಬೆಂಕಿ ಆರಿದೆ, ತನಿಖೆ ನಡೆಯಬೇಕಿದೆ. ಆದರೆ ಟಿಂಬರ್ ಮಾಫಿಯಾದವರ ಮುಂದೆ ಕೈ ಚಾಚುವವರಿಂದ ನಿಷ್ಪಕ್ಷಪಾತವಾದ ತನಿಖೆಯನ್ನು ನಿರೀಕ್ಷಿಸುವಂತಿಲ್ಲ…!!

POPULAR  STORIES :

ಪ್ರಿಯಾಂಕ ಲಡ್ಡು, ರಾಹುಲ್ ಫುಡ್ಡು, ಶೀಲಾ ಉಪ್ಪಿನಕಾಯಿ..! ಉತ್ತರ ಪ್ರದೇಶದಲ್ಲಿ ಪ್ರಶಾಂತ್ `ಕೈ’ ಚಳಕ..!?

ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?

ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!

ಎರಡೂ ಕಿಡ್ನಿ ಕಳೆದುಕೊಂಡ ಗಿರೀಶ್ ಬದುಕಲಿಲ್ಲ..! ಏಕ್ ದಿನ್ ಕಾ ಪೊಲೀಸ್ ಕಮೀಷನರ್ ಇನ್ನಿಲ್ಲ..!

ಶಾರೂಕ್ ಖಾನ್ ಹತ್ಯೆಗೆ ಸಂಚು..! ಡಾನ್ `ಪೂಜಾರಿ’ ಅದ್ಯಾಕೆ ಮುಹೂರ್ತವಿಟ್ಟ..!?

ಸ್ನೇಹದಿಂದ ಪ್ರೀತಿಯತ್ತ… ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ!

ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!

Share post:

Subscribe

spot_imgspot_img

Popular

More like this
Related

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್​.ಎಲ್...

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್ ಬರುತ್ತೆ!

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್...