ಇದು ಸಿನಿಮಾ ಕಥೆಯಂತಿರೋ ರಿಯಲ್ ಸ್ಟೋರಿ. 25 ವರ್ಷದ ಹಿಂದಿನ ಕಥೆ..! ಸಾರೋ ಮುನ್ಷಿ ಖಾನ್ ಎಂಬ ಐದು ವರ್ಷದ ಪುಟ್ಟ ಬಾಲಕ ಅಣ್ಣನೊಂದಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿರ್ತಾನೆ..! ಬಡ ಅಣ್ಣನದು ರೈಲು ಗುಡಿಸಿ ಸ್ವಚ್ಛಮಾಡುವ ಕೆಲಸ..! ಹೇಗೂ ಅಣ್ಣನ ಜೊತೆ ರೈಲೇರಿದ್ದೇನೆ, ಅಣ್ಣ ನನ್ನ ಎಲ್ಲೂ ಬಿಟ್ಟು ಹೋಗಲಾರನೆಂಬ ನಂಬಿಕೆ ಪುಟ್ಟ ಬಾಲಕ ಮುನ್ಷಿಗೆ..! ಅಣ್ಣನ ಜೊತೆ ಎಲ್ಲಾ ಕಡೆಯು ಹೋಗುತ್ತಿದ್ದ ಮುನ್ಷಿ ಅವತ್ತು ಕೂಡ ತಾನು ತುಂಬಾ ಇಷ್ಟ ಪಡೋ ಅಣ್ಣನ ಜೊತೆ ಹೋಗ್ತಾ ಇರ್ಬೇಕಾದ್ರೆ, ಇದ್ದಕ್ಕಿದ್ದಂತೆ ತುಂಬಾ.. ಸುಸ್ತಾಗುತ್ತೆ..! ಆಯಾಸವೆನಿಸುತ್ತೆ. ರೈಲಿನಿಂದ ಇಳಿಯುವಾಗ ಅಣ್ಣ ನನ್ನನ್ನು ಎಬ್ಬಿಸಿ ಕರೆದುಕೊಂಡು ಹೋಗ್ತಾನೆಂದು ನಂಬಿದ್ದ ಐದು ವರ್ಷದ ಮುನ್ಷಿ ನಿದ್ರೆಗೆ ಜಾರ್ತಾನೆ..! ಮಲಗಿದ ಕೂಡಲೇ ಇವನಿಗೆ ಜೋರು ನಿದ್ರೆ ಬರುತ್ತೆ..! ಎಚ್ಚರವೇ ಆಗಲ್ಲ..! ಎಚ್ಚರವಾದಾಗ ಕೋಲ್ಕತ್ತದಲ್ಲಿ ರೈಲು ನಿಂತಿರುತ್ತೆ..! ಪಕ್ಕದಲ್ಲಿ ಅಣ್ಣ ಇರಲ್ಲ..! ಹೆಚ್ಚು ಕಡಿಮೆ ಆ ಹುಡುಗ 1200ಕಿಮೀ ದೂರ ಬಂದಿರ್ತಾನೆ..! ಜೊತೆಯಲ್ಲೇ ಕರೆದುಕೊಂಡು ಬಂದಿದ್ದ ಅಣ್ಣ ಬಿಟ್ಟು ಹೋಗಿದ್ದಾನೆ ಅಂತ ಗೊತ್ತಾಗಿ ತುಂಬಾನೇ ನೊಂದು ಕೊಳ್ತಾನೆ ಬಾಲಕ ಮುನ್ಷಿ..! ಅಳುತ್ತಾನೆ.. ಬಿಕ್ಕಿ ಬಿಕ್ಕಿ ಅಳುತ್ತಾ ಅಣ್ಣನನ್ನು ಕರೆಯುತ್ತಾನೆ..! ಅಣ್ಣನಿಗಾಗಿ ಹುಡುಕಿ ಸುಸ್ತಾದ..ಮನೆಯ ದಾರಿ ಗೊತ್ತಿಲ್ಲ..! ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡಲು ಆರಂಭಿಸ್ತಾನೆ..!
ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿ ಕೊಳ್ತಾ ಇದ್ದ ಈ ಮುನ್ಷಿಯನ್ನು ಒಂದು ಎನ್.ಜಿ.ಓ ದವರು ಕರೆದುಕೊಂಡು ಹೋಗ್ತಾರೆ..! ನಂತರ ಟಾಸ್ಮೆನಿಯಾದ ದಂಪತಿಗಳು ಈತನನ್ನು ದತ್ತು ಪಡೆದು ಸಾಕುತ್ತಾರೆ..!
ಹೊಸ ಮನೆಯಲ್ಲಿ ಜೀವನ ಕಂಡುಕೊಂಡ ಬಾಲಕ ಮುನ್ಷಿಗೆ ತಾನು ಹುಟ್ಟಿದ ಕುಟುಂಬದ ನೆನಪು ಸದಾ ಕಾಡ್ತಾ ಇರುತ್ತೆ..! ನಾನು ನನ್ನ ಕುಟುಂಬವನ್ನು ನೋಡ್ಬೇಕೆಂಬ ಆಸೆ ಆತನಲ್ಲಿ ಜೀವಂತವಾಗಿರುತ್ತೆ..! ಈ ಹುಡುಗ ಇವತ್ತು 30 ವರ್ಷ ಆಸುಪಾಸಿನ ವ್ಯಕ್ತಿ..!
ತನ್ನ ಹುಟ್ಟೂರ ಬಗ್ಗೆ ಅಲ್ಪಸ್ವಲ್ಪ ಮಾಹಿತಿಯನ್ನು ತಿಳಿದಿದ್ದ ಸಾರೋ ತನ್ನ ಸುಮಾರು 25 ವರ್ಷಗಳ ನಂತರವೂ ಹುಟ್ಟೂರನ್ನು ಪತ್ತೆಹಚ್ಚಲು ಶುರುಮಾಡ್ತಾನೆ..!
ಗೂಗಲ್ ಅರ್ಥ್ ಸಹಾಯದಿಂದ ಹುಟ್ಟೂರಿನ ಹುಡುಕಾಟ ನಡೆಸುತ್ತಾರೆ. ಎಷ್ಟೆಲ್ಲಾ ಕಷ್ಟಪಟ್ಟು ಹುಡುಕಿದರೋ ಅದು ಅವರಿಗೆ ಮಾತ್ರ ಗೊತ್ತು..! ಕೊನೆಗೂ ಕೋಲ್ಕತ್ತದಿಂದ 1200 ಕಿ.ಮೀ ದೂರದ 14 ಗಂಟೆಗಳ ಪ್ರಯಾಣ ಅವಧಿಯ ಚಿಕ್ಕದಾದ `ಖಾಂಡ್ವಾ’ ಎಂಬ ಹಳ್ಳಿ ಗೂಗಲ್ ಅರ್ಥ್ ಸಹಾಯದಿಂದ ಸಿಗುತ್ತೆ..! ಆ ಹಳ್ಳಿಗೆ ಹೋಗುತ್ತಿದ್ದಂತೆ ಮುನ್ಷಿಗೆ ಬಾಲ್ಯದ ನೆನಪು, ತಾನು ಬಾಳ್ಯದಲ್ಲಿ ಕಳೆದ ಮನೆಯ ನೆನಪಾಗುತ್ತೆ..! ದಾರಿ ಗೊತ್ತಾಗುತ್ತೆ..! ಅಮ್ಮನನ್ನು ನೋಡುವ ಖುಷಿಯಲ್ಲಿ ಓಡೋಡಿ ಮನೆಯ ಬಳಿ ಹೋದ್ರೆ.. ಮನೆ ಬೀಗ ಹಾಕಿತ್ತು..! ಅಕ್ಕಪಕ್ಕದವರನ್ನು ವಿಚಾರಿಸಿ, ತನ್ನ ಪರಿಚಯವನ್ನು ಮಾಡಿಕೊಂಡ ಮುನ್ಷಿಗೆ ಅಲ್ಲಿಯ ಜನ ಅವರ ಅಮ್ಮ ಇರುವ ಮನೆಯನ್ನು ತೋರಿಸಿದ್ರು..!
ಅಮ್ಮನನ್ನು ನೋಡಿ ತುಂಬಾನೇ ಖುಷಿಯಾಯ್ತು..! ಮುನ್ಷಿ ಕಣ್ಣಲ್ಲಿ ಅಮ್ಮ 34 ವರ್ಷದ ಮಹಿಳೆಯಂತೇ ಇದ್ದಳು..! ಆದರೆ ಇವತ್ತು ಆ ಅಮ್ಮ 60ರ ಆಸುಪಾಸಿನ ವೃದ್ಧೆ..! ಅಮ್ಮನನ್ನು ನೋಡಿ ಮೊದಲಿಗೆ ನಂಬಲಾಗದೇ ಇದ್ರೂ ಮುಖದ ವರ್ಚಸ್ಸಿನಿಂದ ಅಮ್ಮ ಅನ್ನೋದು ಗೊತ್ತಾಯ್ತು..! ಅಮ್ಮನ ಬಳಿ ಹೋಗಿ ಕತೆಯನ್ನೆಲ್ಲಾ ಹೇಳಿ, ತಬ್ಬಿಕೊಂಡು ಮುದ್ದಾಡಿದ್ರು ಮುನ್ಷಿ..! ಮಗ ಬದುಕಿಯೇ ಇಲ್ಲ.., ಅವನಿಗೇ ಏನೋ ಆಗಿದೆ ಅಂತ ದುಃಖದಲ್ಲೇ ಕಾಲಕಳೆಯುತ್ತಿದ್ದ ಆ ತಾಯಿಯ ಸಂತಸಕ್ಕೂ ಪಾರವೇ ಇರ್ಲಿಲ್ಲ..!
ಗೂಗಲ್ ಅರ್ಥ್ ನಿಂದಾಗಿ 25 ವರ್ಷದ ನಂತರ ಮುನ್ಷಿಗೆ ತನ್ನ ತಾಯಿ ಸಿಕ್ಕಳು..ಆ ತಾಯಿಗೆ ಮಗ ಸಿಕ್ಕಿದ್ದಾನೆ..! ಇದು ತುಂಬಾನೇ ಖುಷಿ ವಿಚಾರ.
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com