ಇಂದಿನ ಹುಡುಗಿಯರು ಸೀರೆ ಉಟ್ಟರೆ ನಡೆಯಲು ಬರುವುದಿಲ್ಲ ಅಂತ ನೆಪ ಹೇಳುತ್ತಾರೆ. ಆದ್ದರಿಂದ ಪ್ಯಾಂಟ್, ಟೀ ಶರ್ಟ್ ಧರಿಸುತ್ತಾರೆ. ಹೀಗಿರುವಾಗ ಆ ದೇವರು ಹುಡಗಿಗೆ ನಾಲ್ಕು ಕಾಲುಗಳನ್ನು ಕೊಟ್ಟಿದ್ದರೆ, ನಡೆಯಲು ಸಾಧ್ಯವಾಗುತ್ತಿತ್ತೇ..? ಎರಡು ಕಾಲಿನ ಹುಡುಗಿಯರೇ ಹೈಹೀಲ್ಸ್ ಧರಿಸಿ ನಡೆಯಲು ಹೆಣಗಾಡುವಾಗ, ನಾಲ್ಕು ಕಾಲಿದ್ದರೆ ಕುಂತಲ್ಲೇ ಕೂರುತ್ತಿದ್ದರೇನೋ..! ಆದರೆ ಓರ್ವ ಹುಡುಗಿ ಇದ್ದಳು. ಅವಳಿಗೆ ನಾಲ್ಕು ಕಾಲುಗಳು ಕೂಡಾ ಇದ್ದವು. ಆಕೆ ಎಲ್ಲರಂತೆ ಜೀವನ ನಡೆಸಿ ಇತಿಹಾಸದ ಪುಟ ಸೇರಿದಳು..!
ಆಕೆಯ ಹೆಸರು ಜೋಸಫನ್ ಕಾರ್ಬಿನ್ ಅಂತ, ಈಕೆಗೇ ಆ ದೇವರು ನಾಲ್ಕು ಕಾಲುಗಳನ್ನು ಕೊಟ್ಟಿದ್ದ. ಈಕೆ ಹುಟ್ಟಿದ್ದು 1868 ರಲ್ಲಿ. ಸಯಾಮಿ ಅವಳಿಗಳಂತೆ ದೇಹರಚನೆಯನ್ನು ಹೊಂದಿದ್ದ ಕಾರ್ಬಿನ್ ಗೆ ಬರೋಬ್ಬರಿ ನಾಲ್ಕು ಕಾಲುಗಳಿದ್ದವು. ಎರಡು ಕಾಲುಗಳು ಉದ್ಧವಿದ್ದು ಇನ್ನೆರಡು ಕಾಲುಗಳು ಸ್ವಲ್ಪ ಚಿಕ್ಕದಾಗಿವೆ. ಚಿಕ್ಕದಾದ ಕಾಲುಗಳಲ್ಲಿ ಶಕ್ತಿ ಇಲ್ಲದ್ದರಿಂದ ನಡೆಯಲು ಸಾಧ್ಯವಾಗುವುದಿಲ್ಲ ಎಂದು ಕಾರ್ಬಿನ್ ಹೇಳಿದ್ದಳು. ಆದರೂ ಕೂಡಾ ನಾಲ್ಕೂ ಕಾಲುಗಳನ್ನು ಬಳಸಿ ನಡೆದಾಡುತ್ತಿದ್ದಳು..! ಅಮೇರಿಕಾದ ವೈದ್ಯರು ಈಕೆಯನ್ನು ಪರೀಕ್ಷಿಸಿ ಆ ಕಾಲುಗಳನ್ನು ಬೇರ್ಪಡಿಸಬಹುದೇ ಎಂದು ಚರ್ಚೆ ನಡೆಸಿದ್ದರು. ಆದರೆ ಆ ಕಾಲುಗಳು ಸೊಂಟದ ನರಗಳೊಂದಿಗೆ ಬೆಸೆದಿದ್ದವು. ಹೀಗಾಗಿ ಆ ಕಾಲುಗಳನ್ನು ತೆಗೆಯದೇ ಹಾಗೆ ಬಿಡಲಾಯಿತು.
ಸುಂದರವಾಗಿರೋ ರಿ ಹುಡುಗಿಯರಿಗೇ ಗಂಡು ಸಿಗದ ಪರಿಸ್ಥಿತಿಯಲ್ಲಿ, ನಾಲ್ಕು ಕಾಲುಗಳನ್ನು ಹೊಂದಿದ್ದ ಈ ವಿಚಿತ್ರ ಹುಡುಗಿಗೆ ಅತಿ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿತ್ತು. ಆಕೆ ಕೇವಲ 19 ನೇ ವಯಸ್ಸಿನಲ್ಲೇ ದಾಂಪತ್ಯಕ್ಕೆ ಕಾಲಿಟ್ಟಿದ್ದಳು. ಈಕೆಯನ್ನು ಮದುವೆಯಾದ ವ್ಯಕ್ತಿ ಅಮೆರಿಕಾದ ಖ್ಯಾತ ವೈದ್ಯ ಕ್ಲಿಂಟನ್ ಬಿಕ್ನೆಲ್ ಆಗಿದ್ದ. ಸಂಶೋಧನೆಯತ್ತ ಹೆಚ್ಚು ಆಸಕ್ತಿ ಹೊಂದಿದ್ದ ಬಿಕ್ನೆಲ್ ವಿಚಿತ್ರ ದೇಹ ರಚನೆ ಹೊಂದಿದ್ದ ಕಾರ್ಬಿನ್ ನ್ನು ತನ್ನ ಪತ್ನಿಯಾಗಿ ಸ್ವೀಕರಿಸಿದ. ಅಲ್ಲದೇ ಎಲ್ಲರಂತೆ ಸಂಸಾರ ನಡೆಸಿದಳು. ಅದೂ ಅಲ್ಲದೇ ಐದು ಮಕ್ಕಳನ್ನೂ ಹೆತ್ತಳು..! ಅವರಲ್ಲಿ ನಾಲ್ಕು ಹೆಣ್ಣುಮಕ್ಕಳಾದರೆ, ಒಂದು ಗಂಡು ಮಗುವಾಗಿತ್ತು. ಎಲ್ಲರಂತೆ ತಾಯಿಯಾಗಿ, ಹೆಂಡತಿಯಾಗಿ ಸಾಮಾನ್ಯ ಜೀವನ ನಡೆಸಿದ್ದ ಜೋಸೆಫೆನ್ ಮೈರ್ಟ್ಲೆ ಕಾರ್ಬಿನ್ ಮೇ 6, 1928 ರಲ್ಲಿ ಇಹಲೋಕ ತ್ಯಜಿಸಿದಳು.