ಆ ಆಸ್ಪತ್ರೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ನೋ ಫೀಸ್..!

0
109

ನಮ್ಮ ದೇಶದಲ್ಲಿ ಹೆಣ್ಣು ಮಗುವಾದರೆ ಮೂಗು ಮುರಿಯುವ ಜನರಿದ್ದಾರೆ. ಆದರೆ ಗಂಡು ಮಗು ಹುಟ್ಟಿದರೆ ಸಂಭ್ರಮಿಸುವವರ ಸಂಖ್ಯೆ ದೊಡ್ಡ ಮಟ್ಟದಲ್ಲೇ ಇದೆ. ಆದ್ದರಿಂದ ಗಂಡು ಮತ್ತು ಹೆಣ್ಣಿನ ನಡುವಿನ ಅನುಪಾತ ಹೆಚ್ಚುತ್ತಿದೆ. ಇದನ್ನು ಮನಗಂಡಿರುವ ಮಹಾರಾಷ್ಟ್ರದ ಆಸ್ಪತ್ರೆಯೊಂದು ಗಂಡು ಮಗು ಜನಿಸಿದರೆ ಚಿಕಿತ್ಸೆಯ ಅಷ್ಟೂ ಮೊತ್ತವನ್ನ ಪಡೆದು, ಹೆಣ್ಣು ಮಗು ಜನಿಸಿದರೆ ಉಚಿತವಾಗಿ ಚಿಕಿತ್ಸೆ ನೀಡಿ ಮಗು ಮತ್ತು ತಾಯಿಯನ್ನು ಆರೈಕೆ ಮಾಡುತ್ತಿದೆ.
ಯೆಸ್.. ಮಹಾರಾಷ್ಟ್ರದ ಪುಣೆಯ ಮೆಡಿಕೇರ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯು ಇಂಥದ್ದೊಂದು ವಿಶಿಷ್ಟ ಕಾರ್ಯವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಆಸ್ಪತ್ರೆಯ ಅಧ್ಯಕ್ಷರಾಗಿರುವ ಡಾ. ಗಣೇಶ್ ರಾಕ್ ರವರು ಹೆಣ್ಣು ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಹೋಗುತ್ತಿದ್ದಾರೆ.


ಈ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಹೆತ್ತವರ ಹೆರಿಗೆ ವೆಚ್ಚವನ್ನಷ್ಟೇ ಮನ್ನಾ ಮಾಡುವುದಿಲ್ಲ. ಹೆಣ್ಣು ಮಗು ಹುಟ್ಟಿದರೆ ಇಡೀ ಆಸ್ಪತ್ರೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗುತ್ತದೆ. ಅಂದು ಇಡೀ ಆಸ್ಪತ್ರೆಯಲ್ಲಿರುವವರಿಗೆ ಸಿಹಿ ಹಂಚಿ ಸಂಭ್ರಮಾಚರಿಸಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದಲೂ ಈ ಆಸ್ಪತ್ರೆಯಲ್ಲಿ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದ್ದು, ಇದರ ಅನುಕೂಲವನ್ನು ಸಾವಿರಾರು ಬಡ ಹೆಣ್ಣುಮಕ್ಕಳು ಪಡೆದಿದ್ದಾರೆ.
ಗಂಡು ಮಕ್ಕಳ ಮೇಲಿನ ಮೋಹದಿಂದ ಹೆಚ್ಚಾಗುತ್ತಿರುವ ಭ್ರೂಣ ಹತ್ಯೆಯಿಂದಾಗಿ ಗಂಡು ಮತ್ತು ಹೆಣ್ಣಿನ ನಡುವಿನ ಅನುಪಾತ ಆತಂಕ ಹುಟ್ಟಿಸುವ ಮಟ್ಟಿಗೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಗಣೇಶ್ ರಾಕ್ ರವರು ತಮ್ಮ ಆಸ್ಪತ್ರೆಯಲ್ಲಿ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಕಳೆದ 7-8 ವರ್ಷಗಳಲ್ಲಿ ಸಾವಿರಕ್ಕಿಂತ ಹೆಚ್ಚು ಹೆಚ್ಚು ಹೆಣ್ಣು ಮಕ್ಕಳ ಪ್ರಾಣ ಉಳಿದಿದೆ.
ಪ್ರಾಯೋಗಿಕವಾಗಿ ಜಾರಿಗೆ ತಂದ ಈ ಕಾರ್ಯಕ್ರಮ ಇಂದು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಈ ಉತ್ತಮ ಕಾರ್ಯ ಇನ್ನೂ ಹೆಚ್ಚಿನ ಜನರಿಗೆ ತಲುಪಬೇಕು ಎನ್ನುವುದು ಗಣೇಶ್ ರವರ ಕನಸು. ದೇಶದ ಎಲ್ಲ ನಗರಗಲ್ಲೂ ಈ ರೀತಿಯ ಒಂದು ಆಸ್ಪತ್ರೆ ನೀಡಿ ಹೆಣ್ಣು ಭ್ರೂಣ ಹತ್ಯೆಯಾಗದಂತೆ ತಡೆಯಬೇಕು ಎಂಬ ಕನಸು ಅವರಿಗಿದೆ. ಇಂಥದ್ದೊಂದು ಮಹಾನ್ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿರುವ ಈ ಆಸ್ಪತ್ರೆಗೆ ಮತ್ತು ಆಸ್ಪತ್ರೆಯ ಅಧ್ಯಕ್ಷ ಗಣೇಶ್ ರಾಕ್ ಗೆ ಹ್ಯಾಟ್ಸ್ ಆಫ್

LEAVE A REPLY

Please enter your comment!
Please enter your name here