ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?

Date:

ಗ್ರಾಹಕರಿಗಾಗಿ ತೈಲಕಂಪನಿಗಳ ಮಾರ್ಗಸೂಚಿಗಳು

ಸಾರ್ವಜನಿಕ ವಲಯದಲ್ಲಿ ಪ್ರಮುಖ ಸೇವೆ ಸಲ್ಲಿಸುವ ತೈಲ ಮಾರಾಟ ಕಂಪನಿಗಳು, ಪೆಟ್ರೋಲ್ ಬಂಕ್‍ಗಳು ಕೆಲವೊಂದು ಮಾರ್ಕೆಟಿಂಗ್ ಡಿಸಿಪ್ಲೀನ್ ಅಥವಾ ಶಿಸ್ತು ಮಾರ್ಗಸೂಚಿಗಳನ್ನು ಅನುಸರಿಸಬೇಕು. ಗ್ರಾಹಕರಿಗೆ ಕೆಲವೊಂದು ಸೇವೆ ಸೌಲಭ್ಯಗಳನ್ನು ಒದಹಗಿಸಬೇಕಾಗುತ್ತೆ!
ತೈಲ ಮಾರಾಟಕಂಪನಿಗಳು ತಮಗೆ ಸಂಬಂಧಿಸಿದ ಪೆಟ್ರೋಲ್ ಬಂಕ್‍ಗಳಲ್ಲಿ ಕೆಲವೊಂದು ನಿಯಮಗಳನ್ನು ಫಾಲೋ ಮಾಡ್ಬೇಕು. ಈ ಶಿಸ್ತನ್ನು ಕಡ್ಡಾಯವಾಗಿ ಕಾಪಾಡಿಕೊಂಡು ಬರಲೇ ಬೇಕು. ಅಂತಹ ಮಾರ್ಗಸೂಚಿಗಳು ಯಾವುವು, ಈ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಡೀಲರ್ಸ್ ಯಾವೆಲ್ಲಾ ಶಿಕ್ಷೆಗೆ ಒಳಗಾಗುತ್ತಾನೆ ಎನ್ನುವುದರ ಡೀಟೇಲ್ಸ್ ಇಲ್ಲಿದೆ.
ಪೆಟ್ರೋಲ್ ಪಂಪ್ ಡೀಲರ್ಸ್‍ಗಳು ಒದಗಿಸಲೇ ಬೇಕಾದ ಸೇವೆ ಮತ್ತು ಸೌಲಭ್ಯಗಳು

1) ಸರಿಯಾದ ಬೆಲೆ, ಪ್ರಮಾಣದಲ್ಲಿ ಸಮರ್ಪಕವಾದ ಉತ್ಪನ್ನವನ್ನು ಖಚಿತಪಡಿಸಿಕೊಂಡು ಒದಗಿಸುವುದು
2) ಔಟ್‍ಲೆಟ್ ಟೈಮ್ ಟೈಮಲ್ಲಿ, ಹೊರಜಾಗದಲ್ಲಿ ಸರಿಯಾದ ಗಾಳಿ ವ್ಯವಸ್ಥೆಯನ್ನು ಮಾಡುವುದು.
3) ಎಲ್ಲಾ ಸಂದರ್ಭದಲ್ಲೂ ಪ್ರಾಮಾಣಿಕ ಸೇವೆ ಸಲ್ಲಿಸುವುದು ಮತ್ತು ವಿನಯಶೀಲ ವರ್ತನೆ ತೋರುವುದು
4) ಸಲಹೆ ಅಥವಾ ದೂರು ನೀಡುವ ಪುಸ್ತಕವೊಂದನ್ನು ಗ್ರಾಹಕರಿಗೆ ಎಟಕುವಂತಿಡಬೇಕು.
5) ದಿನದ ಬಿಡುವಿನ ಸಮಯ,ಕೆಲಸದ ಸಮಯ ಎಷ್ಟುಗಂಟೆಯಿಂದ ಎಷ್ಟುಗಂಟೆವರೆಗೆ, ರಜಾದಿನಗಳ ಪ್ರಕಟಣೆಗಳನ್ನು ಸರಿಯಾಗಿ ಕಾಣುವಂತೆ ಪ್ರದರ್ಶಿಸುವುದು
6) ಆವರಣದಲ್ಲಿ ಸುಸಜ್ಜಿತ, ಸ್ವಚ್ಛ ಶೌಚಾಲಯ ಲಭ್ಯವಿರಬೇಕು
7) ಆವರಣದಲ್ಲಿ ದೂರವಾಣಿ ಸೌಲಭ್ಯ ಸಾರ್ವಜನಿಕರಿಗಾಗಿ ಲಭ್ಯವಿರಬೇಕು
8) ತೈಲ ಕಜಂಪನಿಗಳಲ್ಲಿ ಗ್ರಾಹಕ ಸೇವೆ ಒದಗಿಸುವ, ದೂರು, ಸಲಹೆಗಳನ್ನು ಸ್ವೀಕರಿಸುವ ಕೆಲಸ ಮಾಡುವವ ವೈಯಕ್ತಿಕ ಸಂಪರ್ಕ ಹೆಸರು, ಸಂಖ್ಯೆಯನ್ನು ನೀಡಬೇಕು. ಗ್ರಾಹಕರ ಸಂಪರ್ಕಕ್ಕೆ ಇವರು ಸಿಗಬೇಕು.
9) ಕಾಲಕಾಲಕ್ಕೆ ತೈಲ ಕಂಪನಿಗಳು ಗ್ರಾಹಕರಿಗೆ ತಮ್ಮ ತಮ್ಮ ಕಂಪನಿಗಳಿಂದ ಸೇವಾ ಸಂದೇಶಗಳನ್ನು ಮೊಬೈಲ್‍ಗೆ ಕಳುಹಿಸಬೇಕು.
10) ಅಗತ್ಯ ಔಷಧಗಳನ್ನು ಹೊಂದಿರುವ ಪ್ರಥಮ ಚಿಕಿತ್ಸೆ ಪೆಟ್ಟಿಗೆಯೊಂದನ್ನು ಡೀಲರ್ಸ್ ಪಂಪ್‍ಗಳನ್ನು ತಪ್ಪದೇ ಇಟ್ಟಿರಬೇಕು.
11) ಔಟ್‍ಲೆಟ್ ಯಾವಾಗಲೂ ಶುಚಿ ಮತ್ತು ಒಳ್ಳೆಯ ಬೆಳಕು ಬೀಳುವಂತೆ ನೋಡಿಕೊಳ್ಳಬೇಕು, ನಿರ್ವಹಣೆ ಸರಿಯಾಗಿರಬೇಕು

ಶೌಚಾಲಯ ವ್ಯವಸ್ಥೆಯಲ್ಲಿ ಅನುಸರಿಸಬೇಕಾದ ಶಿಸ್ತುಗಳು :
1) ದಿನನಿತ್ಯ ಸ್ವಚ್ಛಗೊಳಿಸಬೇಕು
2) ಸೂಕ್ತ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು
3) ಫ್ಲಶ್ ಸಮರ್ಪವಾಗಿಕೆಲಸ ಮಾಡ್ತಾ ಇದೆಯಾ ಎಂಬುದನ್ನು ಪರೀಕ್ಷಿಸಬೇಕು.
4) ನೀರಿನ ಲಭ್ಯತೆ ಖಚಿತಪಡಿಸಿಕೊಳ್ಳಬೇಕು
5) ಬಾಗಿಲುಗಳು ಸರಿಯಾಗಿ ಇವೆಯೇ, ಲಾಕ್ ಸರಿಯಾಗಿದೆಯೇ ನೋಡಬೇಕು

ಸರಿ, ಆಯಾ ತೈಲಕಂಪನಿಗಳು, ತಮ್ಮ ಪೆಟ್ರೋಲ್ ಬಂಕ್,ತಮಗೆ ಸಂಬಂಧಿಸಿದ ಸ್ಥಳಗಳಲ್ಲಿ ಈ ಎಲ್ಲಾ ಸೇವೆ, ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಬೇಕೆಂಬ ಮಾರ್ಗಸೂಚಿಗಳೇ ಇವೆ. ಅಕಸ್ಮಾತ್, ಒಂದು ವೇಳೆ ಈ ಕಂಪನಿಗಳು ಈ ಸೇವೆಗಳನ್ನು ಒದಗಿಸದಿದ್ದರೆ ಏನಾಗುತ್ತೆ ಗೊತ್ತಾ?
ಮೊದಲ ಸಲ ಉಲ್ಲಂಘಿಸಿದಾಗ 15ದಿನಗಳ ಕಾಲ ಡೀಲರ್ಸ್‍ಗೆ ಮಾರಾಟ ಮತ್ತು ಸರಬರಾಜನ್ನು ತಡೆಹಿಡಿಯಲಾಗುತ್ತದೆ. ಮತ್ತೆ ಎರಡನೇ ಬಾರಿಯೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ 30ದಿನಗಳ ಕಾಲ ಮಾರಾಟ ಹಾಗೂ ಪೂರೈಕೆ ತಡೆಹಿಡಿಯಲಾಗುತ್ತದೆ. ಆಗಲೂ ಸರಿಪಡಿಸಿಕೊಳ್ಳದೇ ಮೂರನೇ ಬಾರಿಯೂ ಉಲ್ಲಂಘನೆ ಮಾಡಿದರೆ ಆ ಡೀಲರ್ಸ್‍ನ ಮಾರಾಟ ಹಕ್ಕು ಮುಗಿದಂತೆಯೇ! ಹಾಗೆಯೇ ಶೌಚಾಲಯ ನಿರ್ವಹಣೆ ಸಮರ್ಪಕವಾಗಿ ಇಲ್ಲದಿದ್ದರೆ ಮೊದಲ ಸಲ 10,0000 ರೂ ದಂಡ, 2ನೇ ಬಾರಿ 20,0000 3ನೇ ಬಾರಿ 25,000 ರೂ ನಾಲ್ಕನೇ ಬಾರಿ 30,000ರೂ ಅಥವಾ ಡೀಲರ್ಸ್ ಕಮಿಷನ್‍ನ ಶೇ.45ರಷ್ಟನ್ನು ದಂಡ ಕಟ್ಟಬೇಕು. ಗಾಳಿ, ದೂರವಾಣಿ, ಪ್ರಥಮಚಿಕಿತ್ಸೆ ಪೆಟ್ಟಿಗೆ ಮತ್ತಿತರ ಸೌಲಭ್ಯ ಇಲ್ಲದೇ ಇದ್ದಲ್ಲಿ ಫಸ್ಟ್‍ಟೈಮ್ ಪತ್ರಮುಖೇನ ಎಚ್ಚರಿಕೆ ನೀಡಲಾಗುತ್ತೆ. ನಂತರ 10,000ಸಾವಿರ ದಂಡ, ಆಗಲೂ ಸೇವೆ ಒದಗಿಸದಿದ್ದರೆ 25,000ರೂ ದಂಡ ವಿಧಿಸಲಾಗುತ್ತೆ!
ಸಾರ್ವಜನಿಕರು ಈ ಎಲ್ಲಾ ನಿಯಮಗಳನ್ನು ತಿಳಿದು, ಈ ಒದಗಿಸಬೇಕಾದ ಸೌಲಭ್ಯಗಳು ಇಲ್ಲದಿದ್ದರೆ ದೂರು ನೀಡಬಹದು! ಈ ಎಲ್ಲಾ ಸೇವೆಗಳನ್ನು ಒದಗಿಸುವುದು ಡೀಲರ್ಸ್ ಕರ್ತವ್ಯ, ಜವಬ್ದಾರಿ ಆಗಿರುತ್ತೆ!
  • ರಘು ಭಟ್
 Source: Factly

POPULAR  STORIES :

ಫೇಸ್‍ಬುಕ್‍ನಲ್ಲಿ ಫೋಟೋ ಹಾಕಿದ ಗೆಳಯನ ಕೊಲೆ! ಮಡಿಕೇರಿಯಿಂದ ಬಂದ ಗೆಳತಿ ಮಂಚಕ್ಕೆ ಬರಲಿಲ್ಲ, ಅದಕ್ಕೇ ಫೇಸ್‍ಬುಕ್‍ನಲ್ಲಿ ಫೋಟೋ ಹಾಕಿದ!

ರಾಜೀನಾಮೆ ನಂತರ ಮೊದಲಬಾರಿಗೆ ಮೀಡಿಯಾ ಮುಂದೆ ಅನುಪಮಾ ಏನ್ ಹೇಳಿದ್ರು ಗೊತ್ತಾ?!

ಹೇರ್ ಟ್ರಾನ್ಸ್‍ಪ್ಲಾಂಟ್ ಮಾಡಿಸ್ಕೋತೀರಾ..!? ಸಾವು ಗ್ಯಾರಂಟಿ..!! ಹುಷಾರ್..!!?

ದೆಹಲಿಗೆ ಬಾಂಬಿಡ್ತಾನಂತೆ ದಾವೂದ್..! ನರರಾಕ್ಷಸನನ್ನು ಹಿಡಿಯೋ ತಾಕತ್ತಿಲ್ಲವೇ..!?

`ಭಾರತದಿಂದ ಮುಸ್ಲೀಮರನ್ನು ಓಡಿಸಬೇಕು..!?’ ಸಾದ್ವಿ ಪ್ರಾಚಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ #Video

ಅನುಪಮ ಶೆಣೈಗೆ ಬಿಜೆಪಿ ಟಿಕೆಟ್..! ಇದೀಗ ಬಂದ ಸುದ್ದಿ..!

`ಫೇಸ್’ಬುಕ್ ಆಟ ಮುಗಿದಿಲ್ಲವೇ..!? ತೆರೆಮರೆಯಿಂದ ಹೊರಬನ್ನಿ ಮೇಡಂ..!

ಚೀನಾದಲ್ಲಿ ರಂಜಾನ್ ನಿಷೇಧ..! ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಧಾರ..!?

ಪಾಶುಪತಾಸ್ತ್ರ- ಟಿಪ್ಪು ಸುಲ್ತಾನನಿಗೂ ಇದಕ್ಕೂ ಇರುವ ನಂಟೇನು??????

ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!



Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...