ಬಳ್ಳಾರಿಯ ಈ ಶಾಪ್‍ನಲ್ಲಿ ಟೀ ಕುಡಿದ್ರೆ ಅರ್ಧಗಂಟೆ ಇಂಟರ್‍ನೆಟ್ ಫ್ರೀ..!

Date:

ಗ್ರಾಹಕರ ಸೆಳೆಯೋದಿಕ್ಕೆ ದೊಡ್ಡ ದೊಡ್ಡ ಅಂಗಡಿಗಳು ಒಂದು ಐಟಮ್ ತಗೊಂಡ್ರೆ ಇನ್ನೊಂದು ಪ್ರೀ.. ಅಥವಾ ಡಿಸ್ಕೌಂಟ್ ಬೆಲೆನೋ.. ಇಲ್ಲ ಹೋಲ್‍ಸೇಲ್ ಮಾರಾಟ ಮಾಡುವುದು ಸಾಮಾನ್ಯ. ಆದ್ರೆ ಗ್ರಾಹಕರನ್ನು ಸೆಳೆಯೋಕೆ ಈ ರೀತಿನೂ ಪ್ಲಾನ್ ಮಾಡ್ಬೋದು ಅಂತ ಹೇಳಿ ಕೊಡ್ತಾರೆ ನೋಡಿ ಬಳ್ಳಾರಿಯ ಟೀಸ್ಟಾಲ್ ಮಾಲಿಕನೊಬ್ಬ.. ಈತ ಮಾರೋದು ಕೇವಲ ಐದು ರುಪಾಯಿಯ ಟೀ.. ಅದಕ್ಕೆ ಅವನು ನೀಡೋ ಆಫರ್ ಏನ್ ಗೊತ್ತಾ..? ಅರ್ಧ ಗಂಟೆ ಇಂಟರ್‍ನೆಟ್ ಫ್ರೀ..! ಇವ್ನ್ಯಾವ್ನೋ ಮುಟ್ಟಾಳ ಅನ್ಕೊಬೇಡಿ ಸ್ವಾಮಿ.. ಈತನ ಈ ಐಡಿಯಾದಿಂದ ದಿನಪೂರ್ತಿ ಅಂಗಡಿ ಫುಲ್ ರಶ್ ಆಗಿರುತ್ತೆ ಅಲ್ಲದೇ ಕೈತುಂಬ ಹಣನೂ ಸಿಕ್ತಾ ಇದೆ..
ಬಳ್ಳಾರಿಯ ಸಿರಗುಪ್ಪ ಪಟ್ಟಣದ ನಿವಾಸಿಯಾದ ಸೈಯ್ಯದ್ ಖಾದರ್ ಪಾಷಾ ತನ್ನದೇ ಒಂದು ಸಣ್ಣ ಟೀ ಸ್ಟಾಲ್ ಇಟ್ಕೊಂಡು ಜೀವನ ನಡುಸ್ತಾ ಇದಾನೆ.. ಆದ್ರೆ ಗ್ರಾಹರನ್ನ ಹೇಗಾದ್ರು ಮಾಡಿ ನಮ್ಮ ಅಂಗಡಿ ಕಡೆಗೆ ಸೆಳೆಯಬೇಕೆಂದು ಯೋಚಿಸಿದ ಆತ ಒಂದು ಮಾಸ್ಟರ್ ಮೈಂಡ್ ಪ್ಲಾನ್ ಮಾಡ್ತಾನೆ ನೋಡಿ.. ತನ್ನ ಅಂಗಡಿಯಲ್ಲಿ 5ರೂ. ಕೊಟ್ಟು ಟೀ ಕುಡಿಯೋಕೆ ಬರೋರಿಗೆ ಅರ್ಧ ಗಂಟೆ ವೈಫೈ ಫ್ರೀ ಸೇವೆ ಕೊಡೋಕೆ ಶುರು ಮಾಡಿದಾನೆ.. ಇದ್ರಿಂದ ಈತನ ಅಂಗಡಿಗೆ ಯಾರು ಬರ್ತಾರೋ ಇಲ್ವೊ ಗೊತ್ತಿಲ್ಲ.. ವಿದ್ಯಾರ್ಥಿಗಳ ಗುಂಪು ಸದಾ ಗಿಜಿಗುಡ್ತಾ ಇರತ್ತೆ. ಬಂದ ಗ್ರಾಹಕರು ಅಥವಾ ವಿದ್ಯಾರ್ಥಿಗಳು ವೈಫೈ ಬಳಕೆ ಮಾಡುವ ನೆಪದಲ್ಲಿ ಒಂದು ಟೀ ಬದ್ಲಾಗಿ ಎರಡು ಮೂರು ಟೀ ಕುಡೀತಾರೆ. ಇನ್ನು ಗ್ರಾಹಕರನ್ನು ಸೆಳೆಯೋಕೆ ಪಾಷಾ ಮಾಡಿದ ಪ್ಲಾನ್ ಸಖತ್ ವರ್ಕೌಟ್ ಆಗ್ಬಿಟ್ಟದಿಯಂತೆ.. ವೈಫೈ ಸೇವೆ ನೀಡಿದ ದಿನದಿಂದ ಆತನ ವ್ಯಾಪರ ದಿನಕ್ಕೆ ನಾಲ್ಕು ಪಟ್ಟು ಹೆಚ್ಚಾಗಿದೆ. ಈಗ ದಿನಕ್ಕೆ ಕನಿಷ್ಟ ಅಂದ್ರೂ 100 ರಿಂದ 150 ಗ್ರಾಹಕರದ್ರೂ ಬರ್ತಾರೆ. ದಿನಕ್ಕೆ ನೂರು ಲೋಟ ಟೀಗೆ ಬದ್ಲಾಗಿ 400 ರಿಂದ 500 ಲೋಟ ಟೀ ಖರ್ಚಾಗ್ತಾ ಇದೆ ಅಂತಾರೆ ಪಾಷಾ.
ವೈಫೈ ಸೇವೆ
ಈ ಅಂಗಡಿಗೆ ಬಂದು ಟೀ ಕುಡಿಯುವವರಿಗೆ ಒಂದು ವೈಫೈ ಕೂಪನ್ ನೀಡಲಾಗತ್ತೆ. ಅದ್ರಲ್ಲಿ ವೈಫೈ ಪಾಸ್‍ವರ್ಡ್ ಸಹ ನೀಡಲಾಗಿರತ್ತೆ. ಅರ್ಧ ಗಂಟೆಗೆ ಸರಿಯಾಗಿ ವೈಫೈ ನೆಟ್‍ವರ್ಕ್ ತಾನಾಗಿಯೇ ಕಡಿತಗೊಳ್ಳುತ್ತದೆ. ಅಷ್ಟೇ ಅಲ್ಲ ಒಂದು ದಿನಕ್ಕೆ ಒಬ್ಬ ಗ್ರಾಹಕ ಒಮ್ಮೆ ಮಾತ್ರ ವೈಫೈ ಉಪಯೋಗಿಸಬಹುದಾಗಿದೆ. ಅಲ್ಲದೇ ದಿನ ದಿನಕ್ಕೆ ಪಾಸ್‍ವರ್ಡ್ ಕೂಡ ಬದ್ಲಾಗ್ತಾ ಹೋಗತ್ತೆ. ಪ್ರತಿದಿನ 5ರೂ ಕೊಟ್ಟು ಟೀ ಕುಡಿಯುತ್ತಾ ವಿದ್ಯಾರ್ಥಿಗಳು ಫೇಸ್‍ಬುಕ್ ವಾಟ್ಸಾಪ್, ಇಂಟರ್‍ನೆಟ್‍ಗಳಲ್ಲಿ ಮಗ್ನರಾಗಿರ್ತಾರೆ ಎಂದು ಪಾಷಾ ಸಂತಸ ಹಂಚಿಕೊಂಡಿದ್ದಾರೆ. ಸೈಯ್ಯದ್ ಇಂಟರ್‍ನೆಟ್ ಸೇವೆ ಕೊಡೋಕೆ 3 ಸಾವಿರ ರೂಪಾಯಿಯ ರೂಟರ್ ಖರೀದಿ ಮಾಡಿದ್ದಾರಂತೆ.. ಜೊತೆಗೆ ತಿಂಗಳಿಗೆ ಅನ್‍ಲಿಮಿಟೆಡ್ ಪ್ಯಾಕ್‍ಗಾಗಿ 1200ರೂ. ರೀಚಾರ್ಜ್ ಮಾಡಿಸಿಕೊಳ್ತಾರೆ. ಇವರು ನೀಡೊ ಇಂಟರ್‍ನೆಟ್ ಸ್ಪೀಡ್ 1 ರಿಂದ 2 ಮೆಗಾ ಬೈಟ್ ಪರ್ ಸೆಕೆಂಡ್ ಆದ ಕಾರಣ ಒಂದು ಬಾರಿಗೆ 10 ರಿಂದ 15 ಗ್ರಾಹಕರು ವೈಫೈ ಕನೆಕ್ಟ್ ಮಾಡಿಕೊಳ್ತಾರೆ ಅಂತಾರೆ ಪಾಷಾ..

Like us on Facebook  The New India Times

POPULAR  STORIES :

ಜಿಯೋ 4ಜಿ ಉಚಿತ ಕೊಡುಗೆ ಡಿಸೆಂಬರ್ ಬದಲಿಗೆ ಮಾರ್ಚ್‍ವರೆಗೆ ವಿಸ್ತರಣೆ..!

ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!

ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!

ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video

ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ

ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?

ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!

Share post:

Subscribe

spot_imgspot_img

Popular

More like this
Related

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...