ಸೆಪ್ಟೆಂಬರ್ 2. ಸಮಸ್ತ ಕನ್ನಡಿಗರು ಕುತೂಹಲದಿಂದ ಕಾಯ್ತಾ ಇರೋ ದಿನ..! ಯಾಕಂದ್ರೆ ಅಂದು ಶುಭ ಶುಕ್ರವಾರ.. ಸಿನಿಮಾ ಅಭಿಮಾನಿಗಳಿಗೆ ಆ ದಿನ ಹೊಸ ಹೊಸ ಸಿನಿಮಾಗಳ ರಸದೌತಣ.. ಆದ್ರೆ ಈ ಬಾರಿಯ ಶುಕ್ರವಾರ ಅದಕ್ಕೂ ಮೇಲೆ..! ಯಾಕೆ ಅಂತ ಕೇಳ್ತೀರಾ..? ಈ ಶುಕ್ರವಾರ ತೆರೆ ಕಾಣ್ತಾ ಇರೋ ಸಿನೆಮಾ ಒಂದಲ್ಲಾ ಎರಡಲ್ಲಾ ಸ್ವಾಮೀ ಬರೋಬ್ಬರಿ 8 ಸಿನಿಮಾ…! ಈ ಹಿಂದೆ ಹೋಲಿಸ್ಕೊಂಡ್ರೆ ಕನ್ನಡ ಚಿತ್ರ ಮಂದಿರಗಳಲ್ಲಿ ಏಕ ಕಾಲಕ್ಕೆ ಎಂಟು ಸಿನೇಮಾ ರಿಲೀಸ್ ಆಗ್ತಾ ಇರೊದು ಇದೇ ಫಸ್ಟ್…! ಇದೊಂದು ಇತಿಹಾಸ ನಿರ್ಮಾಣ ಅಂದ್ರೂ ತಪ್ಪಾಗೊಲ್ಲ ನೋಡಿ… ಒಂದು ಸಿನಿಮಾ ರಿಲೀಸ್ ಆದ ಕೂಡ್ಲೇ ಆ ಸಿನಿಮಾ ಚನ್ನಾಗಿ ಓಡ್ತಾ ಇದೆ ಅಂದ್ರೆ, ಅಭಿಮಾನಿಗಳಿಗೆ ಟಿಕೇಟ್ ಸಿಗೋದೆ ಕಷ್ಟ..! ಆದ್ರೆ ಈ ಶುಕ್ರವಾರ ಹಾಗಾಗೋಕೆ ಚಾನ್ಸೇ ಇಲ್ಲ ಬಿಡಿ.. ಸಿನಿಮಾ ಪ್ರೀಯರಿಗೆ ರಂಜನೆ ನೀಡೋಕೆ ಬರ್ತಾ ಇರೋದು ಬರೋಬ್ಬರಿ 8 ಸಿನಿಮಾ…! ಈ ಹಿಂದೆ 7 ಸಿನಿಮಾಗಳನ್ನು ಒಂದೇ ವಾರದಲ್ಲಿ ರಿಲೀಸ್ ಮಾಡಿದ್ದು ಹಳೆಯ ದಾಖಲೆ. ಇದಿಗ ಆ ದಾಖಲೆಯನ್ನು ಸರಿಗಟ್ಟಲು 8 ಸಿನಿಮಾಗಳು ಕಾಯ್ತಾ ಇದೆ…! ಅಂದ ಹಾಗೆ ಆ ಎಂಟು ಸಿನಿಮಾಗಳು ಯಾವ್ದು ಅಂತ ಕುತೂಹಲ ನಿಮ್ಗಿದೀಯಾ.. ಈ ಕೆಳಗೆ ನೋಡಿ..
‘ನೀರ್‍ದೋಸೆ’
ಬಹಳ ದಿನಗಳಿಂದ ರಿಲೀಸ್ ಆಗದೇ ಹಾಗೇ ಉಳಿದಿದ್ದ ನೀರ್‍ದೋಸೆ ಇದೀಗ ಜನರನ್ನು ರಂಜಿಸಲು ನಾಳೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ವಿಜಯ್ ಪ್ರಸಾದ್ ನಿರ್ದೇಶನದ ಈ ನೀರ್‍ದೋಸೆ ಚಿತ್ರದ ಟ್ರೈಲರ್ ಈಗಾಗಲೇ ಕೋಟ್ಯಾಂತರ ಅಭಿಮಾನಿಗಳ ನಿದ್ದೆಗೆಡೆಸಿದೆ. ನವರಸ ನಾಯಕ ಜಗ್ಗೇಶ್, ಹಿರಿಯ ನಟ ದತ್ತಣ್ಣ, ನಟಿ ಹರಿಪ್ರೀಯ, ನಟಿ ಸುಮನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
‘ಕೆಂಪಮ್ಮನ ಕೋರ್ಟ್ ಕೇಸ್’
‘ಎಡಕಲ್ಲು ಗುಡ್ಡ’ದ ಚಂದ್ರಶೇಖರ್ ನಿರ್ದೇಶಿಸಿರುವ ಈ ಚಿತ್ರ ಗಾಂಧಿನಗರದಲ್ಲಿ ಸ್ವಲ್ಪ ಮಟ್ಟಿನಲ್ಲಿ ಸುದ್ದಿ ಮಾಡ್ತಾ ಇರೋ ಚಿತ್ರ. ಸುಂದರ್ ರಾಜ್ ಈ ಚಿತ್ರಕ್ಕೆ ಕಥೆ ಬರೆದಿದ್ದು, ಕೆಂಪಮ್ಮಳಾಗಿ ರಾಧಾ ರಾಮಚಂದ್ರ, ಸಿದ್ದಾರ್ಥ್, ಶ್ರೀನಾಥ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ..
‘ಜಿಲ್ ಜಿಲ್’
ನಿರ್ದೇಶಕನೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆಪಾದಿಸಿ ಮಾಧ್ಯಮಗಳ ಮುಂದೆ ತನ್ನ ಅಳಲು ತೋಡಿಕೊಂಡಿದ್ದ ಪರ ಭಾಷಾ ನಟಿ ಪೂವಿಶಾ ನಟಿಸಿರುವ ಜಿಲ್ ಜಿಲ್ ಸಿನಿಮಾ ಈ ವಾರ ತೆರೆ ಕಾಣಲಿದ್ದು, ಈ ಚಿತ್ರಕ್ಕೆ ನಿರ್ದೇಶಕ ಮಧು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಎಲ್ಲರೂ ಹೊಸಬರೇ ಆದ್ದರಿಂದ ಚಿತ್ರದ ಕುರಿತು ಬಾರೀ ನಿರೀಕ್ಷೆ ಇದೆ.
ಇನ್ನು ಬರೋಬ್ಬರಿ 550 ವರ್ಷಹ ಹಳೆಯ ಕಥೆಯ ಆಧಾರಿತ ಸಿನಿಮಾ ‘ಬಬ್ಲುಷಾ’ ಹಾಗೂ ಹುಟ್ಟು ಸಾವಿನ ಮಧ್ಯೆ ದೇವರ ಆಟ ಹೇಗೆ ಅನ್ನೋದನ್ನ ತೋರ್ಸೋಕೆ ರೆಡಿಯಾಗಿದೆ ಈ ‘ಅವದಿ’ ಚಿತ್ರ…
POPULAR STORIES :
ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!
ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.