ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರ ಚಿತ್ರ ರಿಲೀಸ್ ಆಗ್ತಿದೆ ಅಂದ್ರೆ ಅದು ಅವರ ಅಭಿಮಾನಿಗಳ ಪಾಲಿಗೆ ಒಂದು ಹಬ್ಬವೇ ಸರಿ. ಅದ್ರಲ್ಲೂ ಇಲ್ಲೊಬ್ಬ ವಿಶೇಷ ಅಭಿಮಾನಿಯೊಬ್ಬರಿದ್ದಾರೆ. ಅವರೇ ಹಿಮಾಚಲ ಪ್ರದೇಶದ ಗೀತಾಂಜಲಿ. ಇವರು ಸಲ್ಮಾನ್ ಖಾನ್‌ರ ಬಹುದೊಡ್ಡ ಅಭಿಮಾನಿ. ಸಲ್ಮಾನ್‌ರ ಹೊಸ ಚಿತ್ರ ಸುಲ್ತಾನ್ ನೋಡಲು ಉತ್ಸುಕಳಾಗಿದ್ದ ಆಕೆಗೆ ಪತಿ ಶಂಕರ್ ಮುಸಾಫಿರ್ ಒಂದು ಸರ್ಪೈಸ್ ಕೊಟ್ಟಿದ್ದಾರೆ.
ಆ ಸರ್ಪೈಸ್ ಕೇಳಿದ್ರೆ ಖಂಡಿತವಾಗ್ಲೂ ನೀವೂ ಥ್ರಿಲ್ ಆಗ್ತೀರಾ. ಹೌದು ಸಲ್ಲು ಭಾಯಿ ಅಭಿನಯದ ಸುಲ್ತಾನ್ ಚಿತ್ರದ ಮೊದಲ ದಿನದ ಶೋಗಾಗಿ ಗುರುಕುಲ್ ಮಾಲ್‌ನಲ್ಲಿ ಪೂರ್ತಿ ಚಿತ್ರ ಮಂದಿರವನ್ನೇ ಪತ್ನಿಗಾಗಿ ಬುಕ್ ಮಾಡಿದ್ದರು. 120 ಆಸನಗಳುಆಠಳ್ಳ ದೊಡ್ಡ ಚಿತ್ರಮಂದಿರದಲ್ಲಿ ಇವರಿಬ್ಬರೆ ಕುಳಿತು ಚಿತ್ರ ನೋಡಿ ಪತ್ನಿಯ ದಿಲ್ ಖುಷ್ ಮಾಡಿದ್ದಾರೆ.
ಕಳೆದ ಬಾರಿ ಭಜರಂಗಿ ಭಾಯಿಜಾನ್ ಚಿತ್ರಕ್ಕೆ ಪತ್ನಿ ಕೇಳಿದ 5 ಟಿಕೇಟುಗಳನ್ನೆ ಹೊಂದಿಸಲು ಆಗಿರಲಿಲ್ಲ, ಹಾಗಾಗಿ ಈ ಬಾರಿ ಇಡೀ ಥಿಯೇಟರ್ ಅನ್ನೇ ಬುಕ್ ಮಾಡೋ ಮೂಲಕ ಪತ್ನಿಗೆ ಸರ್ಪೈಸ್ ನೀಡಿದ್ದಾರೆ. ಪತಿಯ ಪ್ರೀತಿಗೆ ಗೀತಾಂಜಲಿ ಫುಲ್ ಖುಷ್ ಆಗಿದ್ದಾರೆ.
- ಶ್ರೀ
POPULAR STORIES :
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!